Asianet Suvarna News Asianet Suvarna News

ಸಮಂತಾ v/s ನಾಗ ಚೈತನ್ಯ; ಬಾಕ್ಸ್‌ ಆಫೀಸ್‌ನಲ್ಲಿ ಮಾಜಿ ದಂಪತಿಯ ವಾರ್

ಟಾಲಿವುಡ್ ಸ್ಟಾರ್ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಇಬ್ಬರು ಬೇರೆ ಬೇರೆಯಾಗಿ ಅನೇಕ ತಿಂಗಳುಗಳೇ ಕಳೆದಿದೆ. ಆದರೂ ಇಬ್ಬರೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ದಾಂಪತ್ಯ ಜೀವನ ಕಡಿದುಕೊಂಡರೂ ಒಂದಲ್ಲೊಂದು ವಿಚಾರಗಳ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಈ ಮಾಜಿ ದಂಪತಿ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರು ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕೆ. 

Samanthas Yashodha film will clash with her ex husband nag chaitanyas lal singh chadda sgk
Author
Bengaluru, First Published Jul 11, 2022, 5:26 PM IST | Last Updated Jul 11, 2022, 5:26 PM IST

ಟಾಲಿವುಡ್ ಸ್ಟಾರ್ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಇಬ್ಬರು ಬೇರೆ ಬೇರೆಯಾಗಿ ಅನೇಕ ತಿಂಗಳುಗಳೇ ಕಳೆದಿದೆ. ಆದರೂ ಇಬ್ಬರೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ದಾಂಪತ್ಯ ಜೀವನ ಕಡಿದುಕೊಂಡರೂ ಒಂದಲ್ಲೊಂದು ವಿಚಾರಗಳ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಈ ಮಾಜಿ ದಂಪತಿ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರು ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕೆ. ಹೌದು, ಸಮಂತಾ ಮತ್ತು ನಾಗ ಚೈತನ್ಯ ನಟನೆಯ ಸಿನಿಮಾಗಳು ಒಂದು ದಿನ ಅಂತರದಲ್ಲಿ ತೆರೆಗೆ ಬರುತ್ತಿದೆ. ಸಮಂತಾ ನಟನೆಯ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಯಶೋದಾ ಸಿನಿಮಾ ಆಗಸ್ಟ್ 12ಕ್ಕೆ ತೆರೆಗೆ ಬರುತ್ತಿದೆ. ನಾಗಚೈತನ್ಯ ನಟನೆಯ ಮೊದಲ ಹಿಂದಿ ಸಿನಿಮಾ ಲಾಲ್ ಸಿಂಗ್ ಚಡ್ಡಾ ಆಗಸ್ಟ್ 11ಕ್ಕೆ ರಿಲೀಸ್ ಆಗುತ್ತಿದೆ. 

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ನಾಗಚೈತನ್ಯ ನಟನೆಯ ಮೊದಲ ಹಿಂದಿ ಸಿನಿಮಾ ಇದಾಗಿದ್ದು ಲಾಲ್ ಸಿಂಗ್ ಚಡ್ಡಾದಲ್ಲಿ ಸೈನಿಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆಮೀರ್ ಖಾನ್‌ಗೂ ಸಹ ಈ ಸಿನಿಮಾ ತುಂಬಾ ಮುಖ್ಯವಾಗಿದೆ. ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾಗಚೈತನ್ಯ ಸಹ ಮೊದಲ ಹಿಂದಿ ಸಿನಿಮಾದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. 

ಇದೀಗ ಸೌತ್ ಸ್ಟಾರ್ ಸಮಂತಾ ನಟನೆಯ ಯಶೋದಾ ಸಿನಿಮಾ ಕೂಡ ಆಗಸ್ಟ್ 12ಕ್ಕೆ ರಿಲೀಸ್ ಆಗುವುದಾಗಿ ಬಹಿರಂಗ ಪಡಿಸಿದೆ.  ಯಶೋದಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಟಾಕಿ ಭಾಗ ಮುಗಿಸಿರುವ ಸಿನಿಮಾತಂಡ ಸದ್ಯ ಹಾಡಿನ ಚಿತ್ರೀಕರಣ ಮಾತ್ರ ಉಳಿಸಿಕೊಂಡಿದೆ. ನಾಯಕಿ ಪ್ರಧಾನ ಸಿನಿಮಾ ಇದಾಗಿದ್ದು ನಟಿ ಸಮಂತಾ ಸಿನಿಮಾದಲ್ಲಿ ಯಶೋದಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಡಬ್ಬಿಂಗ್‌ಗೆ ತಯಾರಿ ನಡೆಸುತ್ತಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ. 

ನಾಗಚೈತನ್ಯ-ಶೋಭಿತಾ ಬಗ್ಗೆ ವದಂತಿ ಹರಡಿಸಿದ್ರಾ ಸಮಂತಾ ಫ್ಯಾನ್ಸ್? ಗರಂ ಆದ ಸ್ಯಾಮ್

ಇದೀಗ ಮಾಜಿ ದಂಪತಿಯ ಬಹುನಿರೀಕ್ಷೆಯ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿರುವುದು ಅಚ್ಚರಿ ಮೂಡಿಸಿದೆ. ಸಿನಿ ಪಂಡಿತರ ಪ್ರಕಾರ ಬಾಕ್ಸ್ ಆಫೀಸ್ ನಲ್ಲಿ ಈ ಎರಡು ಸಿನಿಮಾಗಳ ನಡುವೆ ಕ್ಲ್ಯಾಶ್ ಆಗಲಿದೆ ಎನ್ನುತ್ತಿದ್ದಾರೆ. ಹಾಗಾಗಿ  ಯಾರ ಸಿನಿಮಾ ಗೆಲ್ಲಲಿದೆ, ಯಾವ ಸಿನಿಮಾಗೆ ಪ್ರಕ್ಷಕರು ಫುಲ್ ಮಾರ್ಕ್ಸ್ ನೀಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. 

ಕಾಫಿ ವಿತ್ ಕರಣ್‌ನಲ್ಲಿ ಸಮಂತಾ: KGF ಬಗ್ಗೆ ಹೇಳಿ ಕರಣ್ ಕಾಲೆಳೆದ ಸೌತ್ ಸ್ಟಾರ್

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಮಂತಾ ತನ್ನ ಯಶೋದಾ ಸಿನಿಮಾ ರಲೀಸ್ ಡೇಟ್ ಮುಂದಕ್ಕೆ ಹಾಕುವಂತೆ ಸಿನಿಮಾತಂಡದ ಜೊತೆ ಮಾತುಕತೆ ನಡೆಸಿದ್ದಾರಂತೆ. ನಾಗಚೈತನ್ಯ ಜೊತೆ ಕ್ಲ್ಯಾಶ್ ತಪ್ಪಿಸಲು ಸಿನಿಮಾ ರಿಲೀಸ್ ಮುಂದೂಡುವಂತೆ ಕೇಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ನಿಜಕ್ಕೂ ನಿರ್ಮಾಪಕರು ಸಿನಿಮಾ ಪೋಸ್ಟ್ ಪೋನ್ ಮಾಡುತ್ತಾರಾ ಅಥವಾ ಧೈರ್ಯ ಮಾಡಿ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಜೊತೆಯೇ ರಿಲೀಸ್ ಮಾಡುತ್ತಾರಾ ಎನ್ನುವುದು ಕಾದು ನೋಡಬೇಕು.   

Latest Videos
Follow Us:
Download App:
  • android
  • ios