ಧೋನಿ ಜೊತೆ ಪೋಸ್ ನೀಡಿದ ರಶ್ಮಿಕಾ ಮಂದಣ್ಣ; RCB ವಿರೋಧಿ ಎಂದ ಫ್ಯಾನ್ಸ್
ನಟಿ ರಶ್ಮಿಕಾ ಮಂದಣ್ಣ ಎಂ ಎಸ್ ಧೋನಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಆರ್ಸಿಬಿ ವಿರೋಧಿ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಬೇಡಿಕೆ ಇರುವ ನಟಿಯರಲ್ಲಿ ಒಬ್ಬರು. ತಮಿಳು ಚಿತ್ರರಂಗದಲ್ಲೂ ರಶ್ಮಿಕಾ ಸಾಕಷ್ಟು ಅಭಿಮಾನಿಗಳಿದ್ದಾರೆ. ರಶ್ಮಿಕಾ ಎಷ್ಟೇ ಟ್ರೋಲ್ ಆದರೂ ಖ್ಯಾತಿ ಮಾತ್ರ ಕಡಿಮೆ ಆಗಿಲ್ಲ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಜಾಹೀರಾತುಗಳಲ್ಲೂ ಸಖತ್ ಫೇಮಸ್ ಆಗಿದ್ದಾರೆ. ಅನೇಕ ಸಾಹೀರಾತುಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಅಷ್ಟೆಯಲ್ಲ ಅನೇಕ ಕಾರ್ಯಕ್ರಮಗಳಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ರಶ್ಮಿಕಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಶ್ಮಿಕಾ ಎಂ ಎಸ್ ಧೋನಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ಕ್ಲಿಕ್ಕಿಸಿಕೊಂಡಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮತ್ತು ಧೋನಿ ಇಬ್ಬರೂ ಭೇಟಿಯಾಗಿದ್ದು ಎಲ್ಲಿ ಅಂತಿರಾ? 2023ನೇ ಸಾಲಿನ ಐಪಿಎಲ್ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದ್ದರು. ಅಂದು ಧೋನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಉದ್ಘಾಟನೆಯ ಫೋಟೋಗಳನ್ನು ಈಗ ಶೇರ್ ಮಾಡಿ ಆ ದಿನದ ಹ್ಯಾಂಗೋವರ್ನಿಂದ ಹೊರಬರೋಕೆ ಅವರಿಗೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಅವರು ಶೇರ್ ಮಾಡಿರುವ ಪೋಟೋಗಳಲ್ಲಿ ಎಂ ಎಸ್ ಧೋನಿ ಜೊತೆಗೆ ಮಾತ್ರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಆರ್ ಸಿ ಬಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ರಶ್ಮಿಕಾ ಸಿಎಸ್ಗೆ ಫ್ಯಾನ್ ಎಂದು ಸಿಎಸ್ಕೆ ಅಭಿಮಾನಿಗಳು ಲೈಕ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ. ಕರ್ನಾಟಕದವರಾದ ರಶ್ಮಿಕಾ ಆರ್ಸಿಬಿ ವಿರೋಧಿ ಎಂದು ಇಲ್ಲಿನ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
ಐಪಿಎಲ್ ಉದ್ಘಾಟನೆಯಾಗಿ ಮುಗಿಯುತ್ತಾ ಬಂತು ಈಗ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರಾ ಎಂದು ಅಭಿಮಾನಿಯೊಬ್ಬರೂ ಪ್ರಶ್ನೆ ಮಾಡಿದ್ದಾರೆ. ಇದ್ಕೆ ಉತ್ತರ ನೀಡಿದ ರಶ್ಮಿಕಾ ಆದರೆ ಇನ್ನೂ ಮುಗಿದಿಲ್ವಲಾ ಎಂದು ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಸದ್ಯ ತೆಲುಗಿನಲ್ಲಿ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಪುಪ್ಪ-2ನಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ-2 ಜೊತೆಗೆ ಇನ್ನೂ 2 ತೆಲುಗು ಸಿನಿಮಾಗಳು ರಶ್ಮಿಕಾ ಕೈಯಲ್ಲಿದೆ. ಹಿಂದಿಯಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ.