KHUSHI: ಸಮಂತಾ- ವಿಜಯ ದೇವರಕೊಂಡ ಬೆಡ್ರೂಮ್ ರೊಮ್ಯಾನ್ಸ್ ನೋಡಿ ಹುಬ್ಬೇರಿಸಿದ ಫ್ಯಾನ್ಸ್!
ಖುಷಿ ಚಿತ್ರದ ವಿಜಯ್ ದೇವರಕೊಂಡ ಮತ್ತು ಸಮಂತಾ ಅವರ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿ ಫ್ಯಾನ್ಸ್ ಹುಬ್ಬೇರಿಸುತ್ತಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿರುವ ವಿಜಯ್ ದೇವರಕೊಂಡ (Vijay Deverakonda) ಹಾಗೂ ಬ್ಯೂಟಿ ಸಮಂತಾ ರುತ್ ಪ್ರಭು ಅವರ ಬಹು ನಿರೀಕ್ಷಿತ ‘ಖುಷಿ’ ಸಿನಿಮಾದಲ್ಲಿ ಮೊನ್ನೆ ಸೆಪ್ಟೆಂಬರ್ 1ರಂದು ಬಿಡುಗಡೆಯಾಗಿದೆ. 'ಲೈಗರ್' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ರಿಲೀಸ್ ಆಗಿದೆ. ನಟಿ ಸಮಂತಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಲವ್, ರೊಮ್ಯಾಂಟಿಕ್ ಎಂಟರ್ಟೈನ ರ್ಚಿತ್ರವಾಗಿದ್ದು, ಶಿವ ನಿರ್ವಾಣ ಎಂಬುವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಜೋಡಿಯ ಕೆಮೆಸ್ಟ್ರಿಗೆ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಈ ಹಿಂದೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್ ಪ್ರಭು ತಮ್ಮ ಕ್ರಷ್ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ ದೇವರಕೊಂಡ. ಇದೀಗ ಇವರಿಬ್ಬರ ಕೆಮೆಸ್ಟ್ರಿ ನೋಡಿ ಅಭಿಮಾನಿಗಳು ಇದು ನಿಜ ನಿಜ ಎನ್ನುತ್ತಿದ್ದಾರೆ.
ಇದೀಗ ಸಿನಿಮಾದ ಒಂದು ಸೀನ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಅವರು ಮೈ ಚಳಿ ಬಿಟ್ಟು ರೊಮ್ಯಾನ್ಸ್ನಲ್ಲಿ ತೊಡಗಿರುವುದನ್ನು ನೋಡಬಹುದು. ಆದರೆ ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಅದನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಲಾಗಿದೆ. ಈ ಹಾಟ್ ಸೀನ್ ಫ್ಯಾನ್ಸ್ ಹೃದಯಕ್ಕೆ ಲಗ್ಗೆ ಇಟ್ಟಿದೆ. ಈ ಮೊದಲು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತ ಗೋವಿಂದಂ’ ಸಿನಿಮಾ ಬಿಡುಗಡೆ ಆದಾಗಲೂ ಒಂದು ಕಿಸ್ಸಿಂಗ್ ಸೀನ್ ವೈರಲ್ ಆಗಿ ಭಾರಿ ಸುದ್ದಿಯಾಗಿತ್ತು. ಆ ಸಿನಿಮಾದಲ್ಲಿ ನಟಿಸಿದ ಬಳಿಕ ರಶ್ಮಿಕಾ ಹಾಗೂ ವಿಜಯ್ ನಡುವಿನ ಆಪ್ತತೆ ಹೆಚ್ಚಾಯಿತು. ಅದೇ ರೀತಿ ಈಗ ‘ಖುಷಿ’ ಚಿತ್ರದಿಂದಾಗಿ ಸಮಂತಾ ಹಾಗೂ ವಿಜಯ್ ಅವರು ರಿಯಲ್ ಲೈಫ್ನಲ್ಲಿಯೂ ಜೋಡಿ ಆಗುತ್ತಾರಾ ಎಂಬ ಗುಮಾನಿ ಮೂಡಿದೆ.
ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್!
ಕೆಲ ದಿನಗಳ ಹಿಂದೆ ಖುಷಿ ಸಿನಿಮಾದ ಪ್ರಚಾರದ ಕಾರ್ಯಕ್ರಮವೊಂದರ ವಿಡಿಯೋ ನೋಡಿ ಫ್ಯಾನ್ಸ್ ಉಸ್ಸಪ್ಪಾ ಉಸ್ಸೋ ಎಂದಿದ್ದರು. ಕಾರ್ಯಕ್ರಮದಲ್ಲಿ ಸಮಂತಾ ಮತ್ತು ವಿಜಯ್ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದರು. ಇದರಲ್ಲಿ ಅವರು ಸಂಪೂರ್ಣ ರೊಮ್ಯಾನ್ಸ್ನಲ್ಲಿ ತೊಡಗಿಸಿಕೊಂಡಿದ್ದು, ಅದರ ವಿಡಿಯೋ ಸಕತ್ ಸದ್ದು ಮಾಡಿತ್ತು. ಇದೀಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ ಚಿತ್ರದ ಈ ಇಂಟಿಮೇಟ್ ಸೀನ್. ಅಂದಹಾಗೆ, ಈ ಚಿತ್ರದ ಕಥೆಯಲ್ಲಿ ನಾಯಕ-ನಾಯಕಿ ಪ್ರೀತಿಸಿ ಮದುವೆಯಾಗುತ್ತಾರೆ. ನಂತರ ಕೌಟುಂಬಿಕ ವೈರುಧ್ಯಗಳಿಂದ ಅವರು ಹೇಗೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತೋರಿಸಲಾಗಿದೆ.
ಸಮಂತಾ ಮತ್ತು ನಾಗಚೈತನ್ಯ ಅವರು ವಿಚ್ಛೇದನ ಪಡೆದ ಬಳಿಕ ಡಿಪ್ರೆಷನ್ಗೆ ತೆರಳಿದ್ದ ಸಮಂತಾ ಅವರಿಗೆ ಖುಷಿ ಚಿತ್ರ ಖುಷಿ ಕೊಟ್ಟಿದ್ದರೆ, ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ನಲ್ಲಿ ಇದ್ದಾರೆ ಎನ್ನಲಾಗಿರುವ ವಿಜಯ್ ದೇವರಕೊಂಡ ಇದೀಗ ಸಮಂತಾ ತಮ್ಮ ಕ್ರಷ್ ಎಂದು ಹೇಳಿಕೊಂಡಿದ್ದಾರೆ. ಇದರ ನಡುವೆಯೇ, ನಾಗಚೈತನ್ಯ ಅವರು ಈಚೆಗೆ ಸಿನಿಮಾವೊಂದರ ವೀಕ್ಷಣೆಗೆ ಥಿಯೇಟರ್‌ಗೆ ತೆರಳಿದ್ದು, ಈ ವೇಳೆ ಸಮಂತಾ ನಟನೆಯ ಖುಷಿ ಸಿನಿಮಾದ ಟ್ರೈಲರ್ ಪ್ಲೇ ಆಗಿದೆ. ಖುಷಿ ಟ್ರೈಲರ್ ಪ್ಲೇ (Khushi Movie Trailer) ಆಗುತ್ತಿದ್ದಂತೆ ನಾಗಚೈತನ್ಯ ಥಿಯೇಟರ್‌ನಿಂದ ಹೊರ ನಡೆದಿದ್ದಾರೆ ಎಂದು ಸುದ್ದಿಯಾಗಿ ಬಹಳ ಸದ್ದು ಮಾಡಿತ್ತು. ಆದರೆ ಇದನ್ನು ನಾಗಚೈತನ್ಯ ನಿರಾಕರಿಸಿದ್ದರು. ಯಾರ ಸಂಬಂಧ ಏನೇ ಇರಲಿ, ಸದ್ಯ ಈ ದೃಶ್ಯವನ್ನು ಮಾತ್ರ ಫ್ಯಾನ್ಸ್ ಮೆಚ್ಚುಗೆಯಿಂದ ನೋಡುತ್ತಿದ್ದಾರೆ.
ಸಮಂತಾಳ 'ಖುಷಿ' ಚಿತ್ರಕ್ಕೆ ಪ್ರಚಾರ ಕೊಡಲು ಥೂ ಈ ಗಿಮಿಕ್ಕಾ ಎಂದು ನಾಗಚೈತನ್ಯ ಗರಂ!