Asianet Suvarna News Asianet Suvarna News
breaking news image

IMDb ಲಿಸ್ಟ್‌ನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಏಕೈಕ ದಕ್ಷಿಣ ಭಾರತದ ನಟಿ

ಜಾಗತಿಕವಾಗಿ ಕಳೆದ ದಶಕದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಟಾಪ್ 100 ಭಾರತೀಯ ತಾರೆಯರ ಪಟ್ಟಿಯನ್ನು IMDb ಬಿಡುಗಡೆ ಮಾಡಿದೆ. ಇದರಲ್ಲಿ ಟಾಪ್ 15ರೊಳಗೆ ದಕ್ಷಿಣ ಭಾರತದ ನಟಿಯೊಬ್ಬರೂ ಸ್ಥಾನ ಪಡೆದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Samantha Ruth Prabhu tops IMDbs 100 Most Viewed Indian Stars among the south actors Vin
Author
First Published May 30, 2024, 4:58 PM IST

ಮುಂಬೈ: ಜಾಗತಿಕವಾಗಿ ಕಳೆದ ದಶಕದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಟಾಪ್ 100 ಭಾರತೀಯ ತಾರೆಯರ ಪಟ್ಟಿಯನ್ನು IMDb ಬಿಡುಗಡೆ ಮಾಡಿದೆ. ನಟಿ ಸಮಂತಾ ರುತ್ ಪ್ರಭು ಅವರು ಟಾಪ್ 15 ರೊಳಗೆ ಸ್ಥಾನ ಪಡೆದ ಏಕೈಕ ದಕ್ಷಿಣ ಭಾರತದ ನಟಿಯಾಗಿದ್ದಾರೆ. ಬಿಸಿನೆಸ್ ಅನಾಲಿಸ್ಟ್‌ ರಮೇಶ್ ಬಾಲಾ ಎಕ್ಸ್‌ನಲ್ಲಿ ಹಂಚಿಕೊಂಡ ಪತ್ರಿಕಾ ಟಿಪ್ಪಣಿಗೆ ಪ್ರತಿಕ್ರಿಯೆ ನೀಡಿದ ಸಮಂತಾ ತನಗೆ ಸಹಾಯ ಮಾಡಿದ ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಮತ್ತು ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. 

ಸಮಂತಾ ಪಟ್ಟಿಯಲ್ಲಿ 13 ಸ್ಥಾನ ಪಡೆದಿದ್ದಾರೆ, ಕರೀನಾ ಕಪೂರ್ ಖಾನ್ ಮತ್ತು ತೃಪ್ತಿ ಡಿಮ್ರಿ ಕ್ರಮವಾಗಿ 14 ಮತ್ತು 15ನೇ ಸ್ಥಾನದಲ್ಲಿದ್ದಾರೆ. ತಮನ್ನಾ ಭಾಟಿಯಾ, ನಯನತಾರಾ, ಪ್ರಭಾಸ್, ಧನುಷ್, ರಾಮ್ ಚರಣ್, ರಜನಿಕಾಂತ್, ವಿಜಯ್ ಸೇತುಪತಿ, ಅಲ್ಲು ಅರ್ಜುನ್, ಮೋಹನ್ ಲಾಲ್, ಆರ್.ಮಾಧವನ್, ಶ್ರೀಯಾ ಸರಣ್, ಕಮಲ್ ಹಾಸನ್, ಶ್ರುತಿ ಹಾಸನ್, ದುಲ್ಕರ್ ಸಲ್ಮಾನ್, ಸೂರ್ಯ, ಮಮ್ಮುಟ್ಟಿ, ಪೂಜಾ ಹೆಗ್ಡೆ, ಜೂನಿಯರ್ ಎನ್‌ಟಿಆರ್, ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ತ್ರಿಶಾ ಕೃಷ್ಣನ್, ಅನುಷ್ಕಾ ಶೆಟ್ಟಿ, ಯಶ್, ವಿಕ್ರಮ್, ಅಜಿತ್ ಕುಮಾರ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕೂಡಾ ಈ ಲಿಸ್ಟ್‌ನಲ್ಲಿದ್ದಾರೆ.

ಸಮಂತಾ ಸೆಕ್ಸೀಯೆಸ್ಟ್ ನಟಿ ಅಂತಿದಾವೆ ಈ ಪೋಟೋಸ್; ಊ ಅಂಟಾವಾ, ಊಹೂಂ ಅಂಟಾವಾ?

ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಐಶ್ವರ್ಯ ರೈ, ಆಲಿಯಾ ಭಟ್ ಮತ್ತು ಇರ್ಫಾನ್ ಖಾನ್ ಜಾಗತಿಕವಾಗಿ ಕಳೆದ ದಶಕದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ 100 ಭಾರತೀಯ ತಾರೆಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸಮಂತಾ ಕೊನೆಯದಾಗಿ 2023ರಲ್ಲಿ 'ಕುಶಿ' ಚಿತ್ರದಲ್ಲಿ ವಿಜಯ್ ದೇವರಕೊಂಡ ಸಹನಟಿಯಾಗಿ ಕಾಣಿಸಿಕೊಂಡಿದ್ದರು. ಮಯೋಸಿಟಿಸ್ ರೋಗನಿರ್ಣಯದ ಕಾರಣದಿಂದ ನಟಿ ಕೆಲಸದಿಂದ ವಿರಾಮ ತೆಗೆದುಕೊಂಡರು. ಇತ್ತೀಚೆಗೆ ಆರೋಗ್ಯದ ಕುರಿತಾಗಿ ಚರ್ಚಿಸುವ ಪಾಡ್‌ಕ್ಯಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ. ಶೀಘ್ರದಲ್ಲೇ ರಾಜ್ ಮತ್ತು ಡಿಕೆ ಅವರ ವೆಬ್ ಸರಣಿ 'ಸಿಟಾಡೆಲ್, ಹನಿ ಬನ್ನಿ'ಯಲ್ಲಿ ವರುಣ್ ಧವನ್ ಅವರ ಸಹನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋ ಸರಣಿಯು ಪ್ರಿಯಾಂಕಾ ಚೋಪ್ರಾ ಮತ್ತು ಜೋಶ್ ಅಪ್ಪೆಲ್ಬಾಮ್ ಅವರ ಅಮೇರಿಕನ್ ಸರಣಿಯ ಭಾರತೀಯ ಆವೃತ್ತಿಯಾಗಿದೆ. 

ಹಣವಿಲ್ಲದೇ ದಿನಕ್ಕೊಂದು ಹೊತ್ತು ತಿನ್ನುತ್ತಿದ್ದರಂತೆ ಸಮಂತಾ ರುತ್ ಪ್ರಭು!

ಸಮಂತಾ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಎಂಬ ತನ್ನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅದರ ಮೊದಲ ಚಿತ್ರ ಬಂಗಾರಂನಲ್ಲಿ ನಟಿಸುತ್ತಾರೆ. ಇದಲ್ಲದೆ ಸಮಂತಾ ರುತು ಪ್ರಭು ತಮ್ಮದೇ ಆದ ಕ್ಲಾತಿಂಗ್ ಬ್ರ್ಯಾಂಡ್ 'ಸಾಕಿ ವರ್ಲ್ಡ್‌'ನ್ನು ಮುನ್ನಡೆಸುತ್ತಾರೆ.

Latest Videos
Follow Us:
Download App:
  • android
  • ios