ಸ್ಯಾಮಿ..ಎಂದು ಹೃದಯಸ್ಪರ್ಶಿ ಪತ್ರ ಬರೆದ ವಿಜಯ್ ದೇವರಕೊಂಡ; ನನ್ನ ಹೀರೋ ಎಂದ ಸಮಂತಾ
ನಟ ವಿಜಯ್ ದೇವರಕೊಂಡ ಶಾಕುಂತಲಂ ಸ್ಟಾರ್ ಸಮಂತಾಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ.
ಸೌತ್ ಸ್ಟಾರ್ ನಟಿ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಏಪ್ರಿಲ್ 14ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ಶಾಕುಂತಲಂ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಸಮಂತಾ ಶಾಕುಂತಲಂ ಸಿನಿಮಾ ರಿಲೀಸ್ ಆಗಿದೆ. ಗುಣಶೇಖರ್ ಸಾರಥ್ಯದಲ್ಲಿ ಬಂದ ಶಾಕುಂತಲಂ ಸಿನಿಮಾದಲ್ಲಿ ಸ್ಯಾಮ್ ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮೊದಲು ಅನೇಕ ಸ್ಟಾರ್ಸ್ ಸಮಂತಾ ಅವರಿಗೆ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಆದರೆ ವಿಜಯ್ ದೇವರಕೊಂಡ ಹೃದಯಸ್ಪರ್ಶಿ ಪತ್ರ ಹಂಚಿಕೊಂಡಿದ್ದಾರೆ. ಸಮಂತಾ ಅವರನ್ನು ಸ್ಯಾಮಿ ಎಂದು ಕರೆಯುವ ದೇವರಕೊಂಡ ಹಾಗೆ ಪತ್ರ ಬರೆದಿದ್ದಾರೆ.
'ಸ್ಯಾಮಿ, ನೀವು ತುಂಬಾ ಪ್ರೀತಿಪಾತ್ರರಾದವರು. ಯಾವಾಗಲೂ ಸರಿಯಾದುದ್ದನ್ನು ಮಾಡಲು ಬಯಸುತ್ತೀರಿ, ಸಂತೋಷವನ್ನು ಹರಡುತ್ತೀರಿ, ನಿಮ್ಮ ಇಡೀ ವೃತ್ತಿಜೀವನವು ಅದರ ಮೇಲೆ ಅವಲಂಬಿತವಾಗಿರುತ್ತದೆ ಎಂಬಂತೆ ಚಿತ್ರದ ಪ್ರತಿ ಶಾಟ್ ಮಾಡುತ್ತೀರಿ. ಕಳೆದ 1 ವರ್ಷದಿಂದ ನೀವು ಎಂತಹ ಹೋರಾಟಗಾರ್ತಿ ಎಂದು ಜಗತ್ತಿಗೆ ತಿಳಿದಿದೆ. ನಿಮ್ಮ ದೇಹಕ್ಕೆ ವಿಶ್ರಾಂತಿಯ ಅಗತ್ಯವಿದ್ದರೂ, ವಿಶ್ರಾಂತಿ ಬೇಕಿದ್ದರೂ ಯಾವಾಗಲೂ ನಿಮ್ಮ ತಂಡ, ಸಿನಿಮಾ ಮತ್ತು ಅಭಿಮಾನಿಗಳಿಗಾಗಿ ಸದಾ ನಗುತ್ತಾ ಹೆಜ್ಜೆ ಇಡುತ್ತಿದ್ದೀರಿ. ಶಾಕುಂತಲಂಗಾಗಿ ಶುಭ ಹಾರೈಸುತ್ತೇನೆ. ನಿಮ್ಮ ಇಚ್ಛೆ ಮತ್ತು ಲಕ್ಷಾಂತರ ಜನರ ಪ್ರೀತಿ ನಿಮ್ಮನ್ನು ಯಾವಾಗಲೂ ಸುರಕ್ಷಿತವಾಗಿರಿಸುತ್ತದೆ. ಇದು ಯಾವಾಗಲೂ ಚೆನ್ನಾಗಿ ಇಡುವಂತೆ ಮಾಡುತ್ತೆ. ಪ್ರೀತಿಯ ವಿಜಯ್' ಎಂದು ಹೇಳಿದ್ದಾರೆ.
ದೇವರಕೊಂಡ ಮಾತಿಗೆ ಸಮಂತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬೇಕಿತ್ತು ಎಂದಿರುವ ಸಮಂತಾ ಧನ್ಯವಾದಗಳು ನನ್ನ ಹೀರೋ ಎಂದು ಹೇಳಿದ್ದಾರೆ. ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರೂ ಈ ಮೊದಲು ಮಹಾನಟಿ ಸಿನಿಮಾ ಮೂಲಕ ಒಟ್ಟಿಗೆ ನಟಿಸಿದ್ದರು. ಸದ್ಯ ಇಬ್ಬರೂ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್‌ಗಳು ರಿಲೀಸ್ ಆಗಿದ್ದು ಈ ಸಿನಿಮಾದ ಮೇಲಿಯೂ ನಿರೀಕ್ಷೆ ಹೆಚ್ಚಾಗಿದೆ.
ನಾನು ಯಾವುದನ್ನೂ ಮರೆಯಲ್ಲ; ನಾಗ್ ಚೈತನ್ಯ ಜೊತೆಗಿನ ವಿಚ್ಛೇದನ ಬಗ್ಗೆ ಸಮಂತಾ ರಿಯಾಕ್ಷನ್
ಶಾಕುಂತಲಂ ಬಗ್ಗೆ
ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ನಟಿಸಿದ್ರೆ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿರುವ ಸಾಕುಂತಲಂಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಸೌತ್ ನಟಿಯರಿಗೆ ಬಟ್ಟೆ ಕೊಡದೇ ಅವಮಾನ ಮಾಡುತ್ತಿದ್ದ ದಿನಗಳ ನೆನೆದ ನಟಿ ಸಮಂತಾ
ಸಿಟಾಡೆಲ್ ವೆಬ್ ಸೀರಿಸ್‌ನಲ್ಲಿ ಸ್ಯಾಮ್
ಶಾಕುಂತಲಂ ಪ್ರಮೋಷನ್ ಜೊತೆಗೆ ಸಮಂತಾ ಸಿಟಾಡೆಲ್ ಭಾರತದ ವರ್ಷನ್ ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಇದು ಪ್ರಿಯಾಂಕಾ ಚೋಪ್ರಾ ನಟನೆಯ ಸಿಟಾಡೆಲ್ ಹಾಲಿವುಡ್ ಸೀರಿಸ್‌ನ ಭಾರತದ ರಿಮೇಕ್ ಆಗಿದೆ. ಇದರಲ್ಲಿ ಸಮಂತಾ ಮತ್ತು ಬಾಲಿವುಡ್ ನಟ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಸಮಂತಾ ಆಕ್ಷನ್ ದೃಶ್ಯಗಳಲ್ಲಿ ಮತ್ತೆ ಮಿಂಚಲಿದ್ದಾರೆ.