ಅನಾರೋಗ್ಯದ ನಡುವೆಯೂ ಐವಿ ಡ್ರಿಪ್ಸ್ ಹಾಕೊಂಡೆ ವರ್ಕೌಟ್ ಮಾಡಿದ ಸಮಂತಾ; ವಿಡಿಯೋ ವೈರಲ್

ಟಾಲಿವುಡ್ ಸ್ಟಾರ್ ನಟಿ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ನಡುವೆಯೂ ಸಮಂತಾ ಡ್ರಿಪ್ ಹಾಕೊಂಡೇ ವರ್ಕೌಟ್ ಮಾಡುತ್ತಿದ್ದಾರೆ. 

amid Myositis treatment Samantha  working out having IV drip intact sgk

ಟಾಲಿವುಡ್ ಸ್ಟಾರ್ ನಟಿ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಖತ್ ಆಕ್ಟೀವ್ ಆಗಿದ್ದ ಸ್ಯಾಮ್ ಸಿನಿಮಾ, ಶೂಟಿಂಗ್, ಫೋಟೋಶೂಟ್ ಅಂತ ಬ್ಯುಸಿ ಇದ್ದರು. ಆದರೀಗ Myositis ಕಾಯಿಲೆಯಿಂದ ಬಳಲುತ್ತಿದ್ದಾರೆ ಸಮಂತಾ. ಹಾಗಂದ ಸಮಂತಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಅಂತ ಅಂದ್ಕೋಬೇಡಿ. ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ನಟನೆಯ ಯಶೋದ ಸಿನಿಮಾ ರಿಲೀಸ್ ಆಗಿದೆ.  ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಸಮಂತಾ ಭಾಗಿಯಾಗಿದ್ದರು.  ಸಿನಿಮಾ ಸಕ್ಸಸ್‌ನ ಖುಷಿಯಲ್ಲಿರುವ ಸಮಂತಾ ಮತ್ತೆ ವರ್ಕೌಟ್ ಶುರುಮಾಡಿದ್ದಾರೆ. ವಿಶೇಷ ಎಂದರೆ ಸಮಂತಾ ಐವಿ ಡ್ರಿಪ್ಸ್ ಹಾಕೊಂಡೆ ವರ್ಕೌಟ್ ಮಾಡುತ್ತಿದ್ದಾರೆ. ಸಮಂತಾ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಮಂತಾ ವಿಡಿಯೋಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಸಹ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸ್ಫೂರ್ತಿದಾಯಕ ಎಂದು ಅನೇಕರು ಹೇಳಿದ್ದಾರೆ. ಇನ್ನು ಕೆಲವರು ಸಮಂತಾಗೆ ಧೈರ್ಯ ತುಂಬುತ್ತಿದ್ದಾರೆ. ವರುಣ್ ಧವನ್, ಕೃತಿ, ದಿಯಾ ಮಿರ್ಜಾ ಸೇರಿದಂತೆ ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದ ನಡುವೆಯೂ ಸಮಂತಾ ಪ್ರಮೋಷನ್, ವರ್ಕೌಟ್ ಮಾಡುತ್ತಿರುವುದು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಸಮಂತಾಗೆ ಈ ವರ್ಷ ತುಂಬಾ ಕಠಿಣ ವರ್ಷವಾಗಿತ್ತು. ವಿಚ್ಛೇದನ ಬಳಿಕ ಕುಗ್ಗಿಹೋಗಿದ್ದ ಸಮಂತಾ ಅನಾರೋಗ್ಯದಿಂದ ಮತ್ತಷ್ಟು ಕುಗ್ಗಿದ್ದಾರೆ. ಆದರೆ ಆತ್ಮವಿಶ್ವಾಸ ಗೆಲ್ಲುವ ಛಲ ಅವರನ್ನು ಪುಟಿದೇಳುವಂತೆ ಮಾಡಿದೆ.   

ಜಿಮ್ ಟ್ರೈನರ್ ತಬ್ಬಿಕೊಂಡು ಭಾವುಕ ಪೋಸ್ಟ್ ಶೇರ್ ಮಾಡಿದ ನಟಿ ಸಮಂತಾ

ಈ ವಿಡಿಯೋ ಜೊತೆಗೆ ಸಮಂತಾ ಜಿಮ್ ಟ್ರೈನರ್‌ನನ್ನು ಅಪ್ಪಿಕೊಂಡು ಭಾವುಕ ಸಾಲನ್ನು ಬರೆದಿದ್ದರು. ಯಶೋದ ಸಕ್ಸಸ್‌ಗೆ ಕಾರಣರಾದವರಲ್ಲಿಒಬ್ಬರಾದ ಹಾಗೂ ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡಿದ ಜಿಮ್ ಟ್ರೈನರ್ ಜುನೈದ್ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದುಕೊಂಡಿದ್ದರು. ಜಿಲೇಬಿ ತಿಂದು ಸಕ್ಸಸ್ ಸಂಭ್ರಮಿಸಿದ್ದ ಸಮಂತಾ, 'ಜುನೈದ್ ನನಗೆ ಜಿಲೇಬಿ ತಿನ್ನಲು ಅನುಮತಿ ನೀಡಿದರು. ಯಶೋದ ಸಕ್ಸಸ್ ಆಚರಣೆ ಮಾಡಿದೆವು. ಅದರಲ್ಲೂ ಅಕ್ಷನ್ ದೃಶ್ಯಗಳು. ಕಳೆದ ಕೆಲವು ತಿಂಗಳಿಂದ ನನ್ನ ಜೊತೆ ಇದ್ದ ಕೆಲವೇ ಕೆಲವರಲ್ಲಿ ನೀವು ಒಬ್ಬರು' ಎಂದು ಹೇಳಿದ್ದರು.

ಅಭಿಮಾನಿಗಳಿಗೆ ಗುಡ್ ನ್ಯೂಸ್; ವಿಚ್ಛೇದನ ಬಳಿಕ ಮತ್ತೆ ಒಂದಾಗ್ತಿದ್ದಾರೆ ನಾಗ ಚೈತನ್ಯ-ಸಮಂತಾ

ಇತ್ತೀಚಿಗಷ್ಟೆ ಸಮಂತಾ ತನ್ನ ಅನಾರೋಗ್ಯದ ಬಗ್ಗೆ ಮಾತನಾಡಿ ಕಣ್ಣೀರಾಕಿದ್ದರು. ನಾನಿನ್ನೂ ಸತ್ತಿಲ್ಲ, ನನಗೆ ಬಂದಿರುವುದು ಮಾರಣಾಂತಿಕ ಕಾಯಿಲೆಯಲ್ಲ ಎಂದು ಭಾವುಕರಾಗಿದ್ದರು. 'ನನ್ನ ಸ್ಥಿತಿ ಜೀವಕ್ಕೆ ಅಪಾಯಕಾರಿ ಎಂದು ಅನೇಕ ವರದಿಗಳನ್ನು ನೋಡಿದೆ. ಆದರೆ ಇದು ಜೀವಕ್ಕೆ ಅಪಾಯಕಾರಿಯಲ್ಲ. ನಾನು ಇನ್ನೂ ಸತ್ತಿಲ್ಲ. ಇಂಥ ಹೆಡ್ ಲೈನ್ ಗಳು ತುಂಬಾ ಅಗತ್ಯ ಎಂದು ಭಾವಿಸಿಲ್ಲ' ಎಂದು ಹೇಳಿದರು. ಬಳಿಕ ನಾನು ವಿನ್ ಆಗುತ್ತೀನಿ ಅಂತ ಹೇಳಿದರು. ಸಮಂತಾ ಭಾವುಕ ಸಂದರ್ಶನದ ವಿಡಿಯೋ ವೈರಲ್ ಆಗಿತ್ತು. ಅಭಿಮಾನಿಗಳು ಧೈರ್ಯ ತುಂಬಿ ಸಂದೇಶ ಕಳುಹಿಸಿದ್ದರು. 

 

Latest Videos
Follow Us:
Download App:
  • android
  • ios