Asianet Suvarna News Asianet Suvarna News

ನಾಗ ಚೈತನ್ಯ ಜೊತೆಗೆ ವಿಚ್ಛೇದನ: ಕೊನೆಗೂ ಮೌನ ಮುರಿದ ನಟಿ ಸಮಂತಾ ಪ್ರಭು

ನಾಗ ಚೈತನ್ಯ ಜೊತೆಗೆ ವಿಚ್ಛೇದನವಾದ ಎರಡು ವರ್ಷಗಳ ಬಳಿಕ ನಟಿ ಸಮಂತಾ ತಮ್ಮ ವಿಫಲ ಮದುವೆಯ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Samantha Ruth Prabhu Finally Talks About Failed Marriage With Naga Chaitanya suc
Author
First Published Nov 9, 2023, 2:54 PM IST

ಸಿನಿ ಕ್ಷೇತ್ರದ ಕ್ಯೂಟ್‌ ಜೋಡಿ ಎಂದೇ ಬಿಂಬಿತವಾಗಿದ್ದ  ನಾಗ ಚೈತನ್ಯ ಮತ್ತು  ಸಮಂತಾ ರುತ್ ಪ್ರಭು ಅವರ ಮದುವೆ ಮರಿದು ಬಿದ್ದು ವರ್ಷಗಳೇ ಆಗಿವೆ. ಹಲವು ವರ್ಷಗಳ ಕಾಲ ಪ್ರೀತಿ ಮಾಡಿ, ಆನಂತರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2017ರಲ್ಲಿ ಮದುವೆ ಆಗಿದ್ದರು. ಆದರೆ ಆ ಮದುವೆ ಬಹಳ ಕಾಲ ಇರಲಿಲ್ಲ. 2021ರಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿತು. ಇಬ್ಬರು ಕೂಡ ಈಗ ತಮ್ಮದೇ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆ ನಟ ನಾಗ ಚೈತನ್ಯ ಅವರು ಎರಡನೇ ಮದುವೆ ಆಗುವುದಕ್ಕೆ ರೆಡಿ ಆಗುತ್ತಿದ್ದಾರೆ ಎಂಬ ಗಾಸಿಪ್ ಇದ್ದು, ನಟಿ ಸಮಂತಾ ಮಯೋಸೈಟಿಸ್‌ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ನಡುವೆಯೇ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ. ಇವರಿಬ್ಬರ  ವಿಚ್ಛೇದನಕ್ಕೆ ಹಲವಾರು ಮಂದಿ ತಮ್ಮದೇ ಆದ ಕಾರಣಗಳನ್ನು ನೀಡುತ್ತಲೇ ಬಂದಿದ್ದಾರೆ. ಇವರ ಡಿವೋರ್ಸ್‌ ವಿಷಯ ಸದಾ  ಚರ್ಚೆಯಲ್ಲಿದೆ.

ಈಗ ಡಿವೋರ್ಸ್‌ ಕುರಿತಾಗಿ ಸಮಂತಾ ಮಾತನಾಡಿದ್ದಾರೆ. ಚಿಕಿತ್ಸೆಗಾಗಿ ಮೊದಲು ಅಮೆರಿಕಕ್ಕೆ ಹೋಗಿದ್ದ ಅವರು ಈಗ ಭೂತಾನ್‌ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ನಟಿ ಸಮಂತಾ ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದಾರೆ.  ಸಮಂತಾ ಅವರಿಗೆ ನೀವು ನಿಮ್ಮ ತಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ನಟಿ,  ನನ್ನದು ವಿಫಲ ಮದುವೆ. ಇದು ನನ್ನ ಆರೋಗ್ಯ ಹಾಗೂ ಕೆಲಸದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕಳೆದ ಎರಡು ವರ್ಷಗಳಿಂದ ನಾನು ಎಲ್ಲಿಲ್ಲದ ನೋವನ್ನು ಅನುಭವಿಸಿದ್ದೇನೆ. ಆ ಸಮಯದಲ್ಲಿ, ನಾನು ಹೆಚ್ಚು ಜೀವನದಲ್ಲಿ ನೋವಿಗೊಳಗಾದವರ ಬಗ್ಗೆ ಓದಿದ್ದೇನೆ. ಮತ್ತು ಅವರ ಕಥೆಗಳನ್ನು ಓದುವುದು ನನಗೆ ನನ್ನ ನೋವಿನಿಂದ ಹೊರಬರಲು ಸಹಾಯ ಮಾಡಿತು ಎಂದಿದ್ದಾರೆ. 

ಮಯೋಸೈಟಿಸ್​ ಕಾಯಿಲೆಗೆ ಕ್ರಯೋಥೆರಪಿ ಚಿಕಿತ್ಸೆ: ನಟಿ ಸಮಂತಾ ವಿಡಿಯೋ ವೈರಲ್​

ಒಬ್ಬರು ಎಷ್ಟೇ ಸೂಪರ್ ಹಿಟ್‌ಗಳು ಮತ್ತು ಬ್ಲಾಕ್‌ಬಸ್ಟರ್‌ಗಳನ್ನು ಹೊಂದಿದ್ದರೂ, ಒಬ್ಬರು ಎಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಒಬ್ಬರ ಪರಿಪೂರ್ಣ ದೇಹ ಅಥವಾ ಸುಂದರವಾದ ಉಡುಗೆ ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಸಂಕಟಗಳು, ಕಷ್ಟಗಳು, ಕೊರತೆಗಳು ಇರುತ್ತವೆ. ತುಂಬಾ ಪಬ್ಲಿಕ್ ಆಗಿದ್ದರೂ ನನಗಿಷ್ಟವಿಲ್ಲ ಎಂದಿದ್ದಾರೆ ಸಮಂತಾ. ವಾಸ್ತವವಾಗಿ, ನಾನು ಅವರಿಂದ ಸಾಕಷ್ಟು ಶಕ್ತಿಯನ್ನು ಪಡೆಯುತ್ತೇನೆ. ನನ್ನಲ್ಲಿರುವ ಎಲ್ಲದರೊಂದಿಗೆ ನಾನು ಹೋರಾಡುತ್ತೇನೆ ಎಂದು ನನಗೆ ತಿಳಿದಿದೆ. ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಜನರು ಹೋರಾಡಲು ಶಕ್ತಿಯನ್ನು ಹೊಂದಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. 

ಇದರ ನಡುವೆಯೇ,  ಸಮಂತಾ  ಮತ್ತು ವಿಜಯ್​ ದೇವರಕೊಂಡ ಅವರ ರೊಮ್ಯಾನ್ಸ್​ ವಿಷಯ ಹರಿದಾಡುತ್ತಿದೆ.  ಮಾತು. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಳಿ ಸುದ್ದಿ ಕೆಲ ತಿಂಗಳಿನಿಂದ ಹರಿದಾಡುತ್ತಿರುವ ನಡುವೆಯೇ ಈ ರೊಮ್ಯಾನ್ಸ್​ ವಿಡಿಯೋ ವೈರಲ್​ ಆಗಿತ್ತು. ಅದಕ್ಕೂ ಮುನ್ನ  ಖುಷಿ ಸಿನಿಮಾದ ಟ್ರೈಲರ್​​ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ,  ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ್​.  ಇಲ್ಲಿಯವರೆಗೆ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರ ಹೆಸರು ಸಮಂತಾ ಜೊತೆ ಥಳಕು ಹಾಕಿಕೊಂಡಿದೆ.

ರಾಖಿ ಪತಿ ಆದಿಲ್‌ ಜೊತೆ ಶೆರ್ಲಿನ್‌ ಚೋಪ್ರಾ ಮತ್ತೆ ರೊಮ್ಯಾನ್ಸ್‌: ವಿಡಿಯೋ ನೋಡಿ ದಂಗಾದ ಫ್ಯಾನ್ಸ್‌!

Follow Us:
Download App:
  • android
  • ios