ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಂಡ ಸಮಂತಾ; ಕುತೂಹಲ ಮೂಡಿಸಿದ ಇಬ್ಬರ ಭೇಟಿ, ಫೋಟೋ ವೈರಲ್
ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಇತ್ತೀಚಿಗಷ್ಟೆ ರಣ್ವೀರ್ ಸಿಂಗ್ ಭೇಟಿಯಾಗಿದ್ದಾರೆ. ಇಬ್ಬರ ಭೇಟಿಯ ಫೋಟೋ ಈಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್(Ranveer Singh) ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ(Samantha) ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಇತ್ತೀಚಿಗಷ್ಟೆ ರಣ್ವೀರ್ ಸಿಂಗ್ ಭೇಟಿಯಾಗಿದ್ದಾರೆ. ಇಬ್ಬರ ಭೇಟಿಯ ಫೋಟೋ ಈಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಮತ್ತು ರಣ್ವೀರ್ ಇಬ್ಬರೂ ಫೋಟೋ ಶೇರ್ ಮಾಡಿ ಕ್ಯೂಟ್ ಕ್ಯಾಪ್ಷನ್ ನೀಡಿದ್ದಾರೆ.
ಅಂದಹಾಗೆ ಇಬ್ಬರೂ ಭೇಟಿಯಾಗಿದ್ದು ಜಾಹಿರಾತು ಚಿತ್ರೀಕರಣಕ್ಕಾಗಿ. ಹೌದು, ರಣ್ವೀರ್ ಮತ್ತು ಸಮಂತಾ ಇಬ್ಬರು ಒಂದು ಜಾಹೀರಾತಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಜಾಹೀರಾತು ಚಿತ್ರೀಕರಣಕ್ಕೆಂದು ಸಮಂತಾ ಮುಂಬೈಗೆ ತೆರಳಿದ್ದರು. ಆ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋ ಇದೀಗಿದೆ. ನಟಿ ಸಮಂತಾ ರಣ್ವೀರ್ ಸಿಂಗ್ ಜೊತೆ ಇರುವ ಫೋಟೋ ಶೇರ್ ಮಾಡಿ, 'ಸ್ವೀಟೆಸ್ಟ್ ಎವರ್' ಎಂದು ಎಂದು ಹೇಳಿದ್ದಾರೆ.
ಇನ್ನು ನಟ ರಣ್ವೀರ್ ಸಿಂಗ್ ಕೂಡ ಸಮಂತಾ ಜೊತೆ ಇರುವ ಫೋಟೋ ಶೇರ್ ಮಾಡಿ ತುಂಬಾ ಸಂತಸವಾಗಿಯಿತು ಎಂದು ಹೇಳಿದ್ದಾರೆ. ಅಂದಹಾಗೆ ಸಮಂತಾ ಹಿಂದಿ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿಬರುತ್ತಿದೆ. ಹಾಗಾಗಿ ರಣ್ವೀರ್ ಸಿಂಗ್ ಜೊತೆ ತೆರೆ ಹಂಚಿಕೊಂಡರೂ ಅಚ್ಚರಿ ಇಲ್ಲ. ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವ ಫೋಟೋ ಶೇರ್ ಮಾಡಿ ಸಿನಿಮಾ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಸದ್ಯದಲ್ಲೇ ಇಬ್ಬರೂ ಒಟ್ಟಿಗೆ ನಟಿಸಿದರು ಅಚ್ಚರಿ ಇಲ್ಲ.
ಮಾಜಿ ಮಾವನ ಸ್ಥಾನ ಕಿತ್ತುಕೊಂಡ್ರಾ ಸಮಂತಾ? ಬಿಗ್ ಬಾಸ್ ನಿರೂಪಣೆಯಿಂದ ನಾಗಾರ್ಜುನ ಔಟ್
ಅಂದಹಾಗೆ ಸಮಂತಾ ದಿ ಫ್ಯಾಮಿಲಿ ಮ್ಯಾನ್-2 ಮೂಲಕ ಹಿಂದಿಗೆ ಕಾಲಿಟ್ಟಿದ್ದರು. ಒಟಿಟಿ ಪ್ರೇಕ್ಷಕರನ್ನು ರಂಜಿಸಿದ್ದ ಸಮಂತಾ ಬಳಿಕ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ವೆಬ್ ಸೀರಿಸ್‌ಗೆ ತಯಾರಿ ನಡೆಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ನಿರ್ದೇಶನ ಮಾಡಿದ್ದ ರಾಜ್ ಮತ್ತು ಡಿಕೆ ಹೊಸ ವೆಬ್ ಸೀರಿಸ್‌ಗೆ ತಯಾರಿ ನಡೆಸಿದ್ದಾರೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಯಕನಾಗಿ ಬಾಲಿವುಡ್ ಸ್ಟಾರ್ ವರುಣ್ ದವನ್ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ನಾಯಕಿಯಾಗಿ ಮಿಂಚುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಅನುಷ್ಕಾ ಶರ್ಮಾ ಜೊತೆ ಮತ್ತೆ ಸೆಕ್ಸ್ ಸೀನ್ ಮಾಡೋಕೆ ರೆಡಿ ಅಂತಿದ್ದಾರೆ ರಣ್ವೀರ್ ಸಿಂಗ್!
ಸಮಂತಾ ಸದ್ಯ ತೆಲುಗಿನಲ್ಲಿ ಶಾಕುಂತಲಂ, ಯಶೋಧ ಮತ್ತು ಖುಷಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶಾಕುಂತಲಂ ಚಿತ್ರೀಕರಣ ಮುಗಿಸಿರುವ ಸಮಂತಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು ಯಶೋಧ ಮತ್ತು ಖುಷಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ ಸಿನಿಮಾದಲ್ಲಿ ಸಮಂತಾ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.