ಕೆಜಿಎಫ್ ಸ್ಟಾರ್ ಯಶ್ ಹಾಗೆ 'ರೈಸ್ ಅಪ್ ಬೇಬಿ...' ಅಂತಿರೋದೇಕೆ ಸಮಂತಾ: ಸ್ಯಾಮ್ ಹೊಸ ಪೋಸ್ಟ್ ವೈರಲ್

ಕೆಜಿಎಫ್ ಸ್ಟಾರ್ ಯಶ್ ಹಾಗೆ 'ರೈಸ್ ಅಪ್ ಬೇಬಿ...' ಅಂತಿದ್ದಾರೆ ಸಮಂತಾ. ಶಾಕುಂಲಂ ಸುಂದರಿ ಶೇರ್ ಮಾಡಿರುವ ಹೊಸ ಪೋಸ್ಟ್ ವೈರಲ್ ಆಗಿದೆ. 

Samantha captioned her photo as 'Rise up baby' like KGF star Yash sgk

ದಕ್ಷಿಣ ಭಾರತೀಯ ಸಿನಿಮಾರಂಗ ಸ್ಟಾರ್ ನಟಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಏಪ್ರಿಲ್ ತಿಂಗಳಲ್ಲಿ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಚಾರಕ್ಕಾಗಿ ಸಮಂತಾ ಅನೇಕ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಶೇರ್ ಮಾಡಿರುವ ಫೋಟೋ ವೈರಲ್ ಆಗಿದೆ. ಸಮಂತಾ ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಏನು ವಿಶೇಷ ಅಂತಿರಾ? ಫೋಟೋದಲ್ಲಿ ವಿಶೇಷ ಇಲ್ಲದಿದ್ದರೂ ಸಮಂತಾ ನೀಡಿರುವ ಕ್ಯಾಪ್ಷನ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಸಮಂತಾ ಫೋಟೋಗೆ 'ರೈಸ್ ಅಪ್ ಬೇಬಿ..' ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ್ರೆ ರಾಕಿಂಗ್ ಸ್ಟಾರ್ ಯಶ್ ನೆನಪಾಗುತ್ತಿದ್ದಾರೆ. ಹೌದು ಕಳೆದ ಕೆಲವು ದಿನಗಳ ಹಿಂದೆ ಯಶ್ ಕೂಡ ಇದೇ ಕ್ಯಾಪ್ಷನ್ ಹಂಚಿಕೊಂಡಿದ್ದರು. ಅದು ಕೂಡ ಪೆಪ್ಸಿ ಜಾಹೀರಾತಿಗಾಗಿ. ರಾಕಿಂಗ್ ಸ್ಟಾರ್ ಯಶ್ ಪೆಪ್ಸಿ ಜಾಹೀರಾತಿನ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ. ಪೆಪ್ಸಿ ಜಾಹೀರಾತಿನ ಕ್ಯಾಪ್ಷನ್ ಕೂಡ 'ರೈಸ್ ಅಪ್ ಬೇಬಿ...' ಅದೇ ಕ್ಯಾಪ್ಷನ್ ಅನ್ನು ಈಗ ಸಮಂತಾ ಕೂಡ ಶೇರ್ ಮಾಡಿರುವುದರಿಂದ ಪೆಪ್ಸಿ ಜಾಹೀರಾತಿನಲ್ಲಿ ನಟಿಸಿದ್ದಾರಾ ಎನ್ನುವ ಅನುಮಾನ ಮೂಡಿದೆ. 

ಸಲ್ಮಾನ್‌ನಿಂದ ಯಶ್ ಕೈಗೆ ಬಂದ ಪೆಪ್ಸಿ; ಪ್ರತಿಷ್ಠಿತ ಬ್ರಾಂಡ್‌ಗೆ KGF ಸ್ಟಾರ್ ಅಂಬಾಸಿಡರ್

ರೈಸ್ ಅಪ್ ಬೇಬಿ ಅಂತ ಸಮಂತಾ ಸೆಲ್ಫ್ ಮೋಟಿವೇಶನ್‌ಗೂ ಈ ಪೋಸ್ಟ್  ಶೇರ್ ಮಾಡಿರಬಹುದು. ಇತ್ತೀಚಿನ ದಿನಗಳಲ್ಲಿ ಸಮಂತಾ ಅನಾರೋಗ್ಯ, ವಿಚ್ಛೇದನದಿಂದ ತುಂಬಾ ನೊಂದಿದ್ದರು. ಇದರಿಂದ ಹೊರಬರಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹಾಗಾಗಿ ತನ್ನ ಬಗ್ಗೆಯೇ ಈ ಕ್ಯಾಪ್ಷನ್ ನೀಡಿರಬಹುದು. ಆದರೆ ರೈಸ್ ಉಪ್ ಬೇಬಿ ಪೋಸ್ಟರ್ ಮಾತ್ರ ಕುತೂಹಲ ಹೆಚ್ಚಿಸಿದೆ.

ಮಾಜಿ ಪತಿ ನಾಗ ಚೈತನ್ಯ ಬಗ್ಗೆ ನಾನು ಹಾಗೆ ಹೇಳಿಯೇ ಇಲ್ಲ; ನಟಿ ಸಮಂತಾ ಸ್ಪಷ್ಟನೆ

ಶಾಕುಂತಲಂ ರಿಲೀಸ್‌ನಲ್ಲಿ ಸಮಂತಾ ಬ್ಯುಸಿ

ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು. 
 

Latest Videos
Follow Us:
Download App:
  • android
  • ios