ಸಮಂತಾ-ವಿಜಯ್ ದೇವರಕೊಂಡ ಸಿನಿಮಾದ ಟೈಟಲ್ ರಿವೀಲ್; ಫಸ್ಟ್ ಲುಕ್ ವೈರಲ್
ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ(Samantha) ಮತ್ತು ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊೆಂಡ (Vijay Deverakonda) ನಟನೆಯ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಸಮಂತಾ ಮತ್ತು ದೇವರಕೊಂಡ ಸಿನಿಮಾದ ಚಿತ್ರಕ್ಕೆ ಖುಷಿ(Kushi)ಎಂದು ಟೈಟಲ್ ಇಡಲಾಗಿದೆ.
ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ(Samantha) ಮತ್ತು ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊೆಂಡ (Vijay Deverakonda) ನಟನೆಯ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಇಬ್ಬರ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅಲ್ಲದೆ ಸಿನಿಮಾದ ಟೈಟಲ್ ಏನಾಗಿರಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಟೈಟಲ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಜೊತೆಗೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದಾರೆ.
ಅಂದಹಾಗೆ ಸಮಂತಾ ಮತ್ತು ದೇವರಕೊಂಡ ಸಿನಿಮಾದ ಚಿತ್ರಕ್ಕೆ ಖುಷಿ(Kushi)ಎಂದು ಟೈಟಲ್ ಇಡಲಾಗಿದೆ. ಬಿಡುಗಡೆಯಾಗಿರುವ ಟೈಟಲ್ ಪೋಸ್ಟರ್ ನಲ್ಲಿ ಸಮಂತಾ ಸೀರೆ ಧರಿಸಿ, ಮದುಮಗಳಂತೆ ರೆಡಿಯಾಗಿದ್ದಾರೆ. ವಿಜಯ್ ದೇವರಕೊಂಡ ಕಾಶ್ಮೀರಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಮತ್ತು ವಿಜಯ್ ಅವರ ಫಸ್ಟ್ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಖುಷಿ ಚಿತ್ರಕ್ಕೆ ಶಿವ ನಿರ್ವಾನ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್ ಮಾಡುವ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಹೌದು ಬಹುನಿರೀಕ್ಷೆಯ ಖುಷಿ ಸಿನಿಮಾ ಡಿಸೆಂಬರ್ 23ರಂದು ತೆರೆಗೆ ಬರುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ.
ಅಂದಹಾಗೆ ಖುಷಿ ಸಿನಿಮಾ ತೆಲುಗು ಮಾತ್ರವಲ್ಲದೇ ಹಲವು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಖುಷಿ ಸಿನಿಮಾ ತೆರೆಗೆ ಬರುತ್ತಿದೆ. ಈ ಬಗ್ಗೆ ನಟ ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 'ಸಂತೋಷ, ನಗು, ಪ್ರೀತಿ ಮತ್ತು ಕುಟುಂಬದ ಬಾಂಧವ್ಯದ ಸ್ಫೋಟ ಎಂದು ಬರೆದುಕೊಂಡಿದ್ದಾರೆ. ಡಿಸೆಂಬರ್ 23ಕ್ಕೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಹೊಸ ವರ್ಷ ಮತ್ತು ಕ್ರಿಸ್ಮಸ್ ಗೆ ಸಂತೋಷ ಹರಡಿ. ಇದು ನಿಮಗೆ ನಿಮ್ಮ ಕುಟುಂಬಕ್ಕೆ' ಎಂದು ಬರೆದುಕೊಂಡಿದ್ದಾರೆ.
Vijay Devarakonda Birthday; ಫೋಟೋ ಶೇರ್ ಮಾಡಿ ಕ್ಯೂಟ್ ವಿಶ್ ಮಾಡಿದ ಸಮಂತಾ
ಅಂದಹಾಗೆ ಸಮಂತಾ ಈಗಾಗಲೇ ನಿರ್ದೇಶಕ ಶಿವ ನಿರ್ವಾನ ಜೊತೆ ಮಿಜಿಲಿ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಮಾಜಿ ಪತಿ ನಾಗ ಚೈತನ್ಯ ಜೊತೆ ತೆರೆಹಂಚಿಕೊಂಡಿದ್ದರು. ಇದೀಗ ಮತ್ತೆ ಶಿವ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಈ ಮೊದಲು ಮಹಾನಟಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು.
ಖುಷಿ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ಕಾಶ್ಮೀರದಲ್ಲಿ ಸಿನಿಮಾತಂಡಮೊದಲ ಹಂತದ ಚಿತ್ರೀಕರಣ ನಡೆಸುತ್ತಿದೆ. ಇತ್ತೀಚಿಗಷ್ಟೆ ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಕಾಶ್ಮೀರದಲ್ಲಿ ಹುಟ್ಟುಹಬ್ಬ ಸಂಭ್ರಮಿಸಿದ್ದರು. ಇಬ್ಬರ ಹುಟ್ಟುಹಬ್ಬದ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮತ್ತೆ ಹಾಟ್ ಲುಕ್‌ನಲ್ಲಿ Samantha ಮಿಂಚಿಂಗ್; ಬೆಂಕಿ ಪೋಸ್ ಎಂದ ಫ್ಯಾನ್ಸ್
ಇನ್ನು ಇಬ್ಬರ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಯಶೋಧ ಸಿನಿಮಾದ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಜೊತೆಗೆ ಹಿಂದಿಯಲ್ಲಿ ಒಂದು ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಲಿಗರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಜನಗಣಮನ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದು ಆರ್ಮಿ ಅಧಿಕಾರಿ ಪಾತ್ರದಲ್ಲಿ ದೇವರಕೊಂಡ ಮಿಂಚಿದ್ದಾರೆ.