ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಅಕ್ಕಿನೇನಿ ಹಿಂದಿ ಸಿನಿಮಾಗೆ ಹಾರಲು ನೋ ಎಂದಿದ್ದಾರೆ ಎನ್ನಲಾಗಿದೆ. ಹಿಂದಿಯ ಬಿಗ್ ಪ್ರಾಜೆಕ್ಟ್‌ವೊಂದನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.  

ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ 'ಯು ಟರ್ನ್'. ಶ್ರದ್ಧಾ ಶ್ರೀನಾಥ್ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಅವರಿಗೆ ಬಿಗ್ ಹಿಟ್ ನೀಡಿತು. ಕನ್ನಡದಲ್ಲಿ ಸಕ್ಸಸ್ ಆದ ನಂತರ ತಮಿಳು, ತೆಲುಗಿಗೂ ಕಾಲಿಟ್ಟು ಅಲ್ಲಿಯೂ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ತೆಲುಗಿನಲ್ಲಿ ಪತ್ರಕರ್ತೆಯ ಪಾತ್ರವನ್ನು ಸಮಂತಾ ಅಕ್ಕಿನೇನಿ ನಿಭಾಯಿಸಿದ್ದರು. 

ಅಕ್ಷಯ್‌ ಕುಮಾರ್‌ಗೆ 200 ಕೋಟಿ ಚಿತ್ರ ಕೊಟ್ಟ ಕನ್ನಡಿಗ ಜಗನ್ ಶಕ್ತಿ

ಈಗ 'ಯೂ ಟರ್ನ್' ಹಿಂದಿಗೆ ರಿಮೇಕ್ ಆಗಲಿದೆ ಎಂಬ ಸುದ್ದಿ ಕೇಳಿ ಬರುತ್ತದೆ. ಇಲ್ಲಿ ಪತ್ರಕರ್ತೆ ಸಮಂತಾ ಪಾತ್ರವನ್ನು ಯಾರು ಮಾಡ್ತಾರೆ ಎಂಬ ಪ್ರಶ್ನೆಗೆ ಸಮಂತಾ ಹಾಗೂ ತಾಪ್ಸಿ ಪನ್ನು ಹೆಸರು ಕೇಳಿ ಬಂದಿದೆ. ಮೂಲಗಳ ಪ್ರಕಾರ ಸಮಂತಾ ನೋ ಎಂದಿದ್ದಾರೆ ಎನ್ನಲಾಗಿದೆ.

ವಿಷ್ಣು ನಿವಾಸ ನವೀಕರಣ, 45 ವರ್ಷ ಹಳೆಯ ಮನೆಗೆ ಹೊಸ ರೂಪ!

ಸೌತ್ ಇಂಡಿಯನ್ ಸಿನಿಮಾಗಳನ್ನು ಮಾಡುವುದರಲ್ಲೇ ನನಗೆ ಖುಷಿಯಿದೆ. ಹಿಂದಿಗೆ ಬರುವ ಆಲೋಚನೆಯಿಲ್ಲ' ಎಂದು ಸಮಂತಾ ಹೇಳಿದ್ದಾರೆ. ಈಗ ಮುಂದಿನ ಆಯ್ಕೆ ತಾಪ್ಸಿ ಪನ್ನು. ಇವರು 'ಯು ಟರ್ನ್' ಮಾಡ್ತಾರಾ ಇಲ್ವಾ ಕಾದು ನೋಡಬೇಕಿದೆ.