ಇಡೀ ಜಗತ್ತೇ ಮೆಚ್ಚಿಕೊಂಡ ಸಿನಿಮಾ 'ಮಿಷನ್ ಮಂಗಲ್'. ಈ ಚಿತ್ರದ ನಿರ್ದೆಶಕ ಜಗನ್ ಶಕ್ತಿ ನಮ್ಮ ಕನ್ನಡದವರು.  'ಮಿಷನ್ ಮಂಗಲ್' ಸಕ್ಸಸ್ ಹಿಂದಿನ ಶಕ್ತಿ ಇವರು. 

ಅನುಶ್ರೀ ಯೂಟ್ಯೂಬ್ ಚಾನೆಲ್‌ಗೆ ಸ್ಪೆಶಲ್ ಅತಿಥಿಯಾಗಿ ಬಂದಿದ್ದರು.  ಜಗನ್ ಶಕ್ತಿ ಬೆಂಗಳೂರಿನ ಅಲಸೂರಿನ ಪ್ರತಿಭೆ. ರಾಜಾಜಿನಗರದ ವಿದ್ಯಾವರ್ಧಕ ಶಾಲೆಯಲ್ಲಿ ಓದಿದ್ದಾರೆ.  'ಮಿಷನ್ ಮಂಗಲ್' ಎನ್ನುವ  ಅದ್ಭುತವಾದ ಸಿನಿಮಾ ಕೊಟ್ಟ ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.  

ದರ್ಶನ್ ಬಗ್ಗೆ ಈ ರೀತಿ ಹೇಳಿದ್ರಾ 'ಒಡೆಯ' ನಟಿ? 

ಹಿಂದಿ ಚಿತ್ರರಂಗದಲ್ಲಿ ಕೆಜಿಎಫ್ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾ, ಹಿಂದಿಯಲ್ಲಿ ಕೆಜಿಎಫ್‌ಗೆ ಒಳ್ಳೆಯ ರೆಸ್ಪಾನ್ಸ್ ಇದೆ.  ಅಲ್ಲಿನ ಜನ ಇಷ್ಟಪಟ್ಟಿದ್ದಾರೆ. ನಾವು ಬೆಂಗಳೂರಿನವರು ಅಂತ ಗೊತ್ತಾದರೆ ಸಾಕು ರಾಕಿ ಭಾಯ್ ಸ್ಟೈಲನ್ನು ಕಾಪಿ ಮಾಡುತ್ತಾರೆ. ಆಗೆಲ್ಲಾ ನಮ್ಮ ಕನ್ನಡದ ಬಗ್ಗೆ ಹೆಮ್ಮೆ ಎನಿಸುತ್ತದೆ' ಎಂದಿದ್ದಾರೆ. 

 

ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಮಂಗಳಯಾನ ಕುರಿತು 'ಮಿಷನ್ ಮಂಗಲ್' ವಿವರಿಸುತ್ತದೆ. ಭಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು 200 ಕೋಟಿ ಗಳಿಸಿದೆ.  

ಕನ್ನಡದ ಹಿರಿಯ ನಟ ದತ್ತಣ್ಣ, ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.