ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜನನದ ಸಂದರ್ಭದಲ್ಲಿ ನೆರವಾದ ನರ್ಸ್ ಒಬ್ಬರ ಫೋಟೋ ವೈರಲ್ ಆಗಿದೆ. ಏನದು..? ಇಲ್ಲಿ ಓದಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜನನದ ಸಂದರ್ಭ ನೆರವಾದ ದಾದಿಯೊಬ್ಬರ ಫೋಟೋ ಈಗ ವೈರಲ್ ಆಗಿದೆ. ರುಕ್ಮಣಿ ಬಾಯಿ ಅವರನ್ನು ಸಲ್ಮಾನ್ ಖಾನ್ನ ಮೂರನೇ ಅಮ್ಮ ಎಂದೇ ಕರೆಯುತ್ತಾರೆ.

ಇಸಾಬೆಲ್ಲೆ ಕೈಫ್ -ಕತ್ರೀನಾ ಕೈಫ್‌ ಸಹೋದರಿ ಸಹ ಬಾಲಿವುಡ್‌ ನಟಿ !

ಇಂದೋರ್ನ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಈಕೆ 1965 ಡಿಸೆಂಬರ್ 27ರಂದು ಸಲ್ಮಾನ್ ಖಾನ್ ಹುಟ್ಟುವಾಗ ಜೊತೆಗಿದ್ದ ನರ್ಸ್ ಆಗಿದ್ದರು. ಬ್ಲಾಕ್ಬಕ್ ಪೋಚಿಂಗ್ ಕೇಸ್ನಲ್ಲಿ ಸಲ್ಮಾನ್ ಸಿಕ್ಕಿ ಹಾಕಿಕೊಂಡಾಗ 2018ರಲ್ಲಿ ರುಕ್ಮಣಿ ಇಂದೋರ್ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದರು.

ಇಂದೋರ್ನ ಹನುಮಾನ್ ದೇವಾಲಯದಲ್ಲಿ ಸಲ್ಮಾನ್ ಬಿಡುಗಡೆಗಾಗಿ ಪ್ರಾರ್ಥಿಸಿದ್ದರು ಈಕೆ. ನಟ ಇತ್ತೀಚೆಗಷ್ಟೇ ಬಿಗ್ಬಾಸ್ 14ರ ಶೂಟಿಂಗ್ ಮುಗಿಸಿದ್ದರು. ಗ್ರ್ಯಾಂಡ್ ಫಿನಾಲೆ ಫೆ.21ಕ್ಕೆ ಮುಗಿದಿತ್ತು. ಇದೀಗ ನಟ ಶಾರೂಖ್ ಖಾನ್ ನಟನೆಯ ಪಠಾನ್ ಸಿನಿಮಾದಲ್ಲಿ ನಟಿಸಲು ರೆಡಿಯಾಗ್ತಿದ್ದಾರೆ.