ಇಸಾಬೆಲ್ಲೆ ಕೈಫ್ -ಕತ್ರೀನಾ ಕೈಫ್ ಸಹೋದರಿ ಸಹ ಬಾಲಿವುಡ್ ನಟಿ !
ನಟಿ ಕತ್ರೀನಾ ಕೈಫ್ ತಂಗಿ ಇಸಾಬೆಲ್ಲೆ ಕೈಫ್ ಕೂಡ ಬಾಲಿವುಡ್‌ನ ನಟಿ ಎಂಬುದು ನಿಮಗೆ ಗೊತ್ತಾ? ಕೈಫ್ ಒಡಹುಟ್ಟಿದವರಲ್ಲಿ ಇಸಾಬೆಲ್ಲೆ ಕಿರಿಯವರು. ಅವರು ಸ್ಯಾನ್ ಫ್ರಾನ್ಸಿಸ್ಕೋದ ಅಲಿಯಂಟ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಮುಗಿಸಿದ್ದಾರೆ. ಈಗ ಅಕ್ಕ ಕತ್ರೀನಾರಂತೆ ನಟಿಯಾಗುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕತ್ರಿನಾ ಕೈಫ್ ಸಹೋದರಿ ಇಸಾಬೆಲ್ಲೆ ಕೈಫ್ ಮುಂಬರುವ ಚಿತ್ರದಲ್ಲಿ ಸೂರಜ್ ಪಾಂಚೋಲಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಇಸಾಬೆಲ್ಲೆ ಕೈಫ್ ವಿಶೇಷವಾಗಿ ಡ್ಯಾನ್ಸ್‌ನಲ್ಲಿ ಎಕ್ಸ್‌ಪರ್ಟ್. ಆದರೆ ತಮ್ಮ 14 ನೇ ವಯಸ್ಸಿನಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಫ್ಯಾಷನ್ ಉದ್ಯಮದಲ್ಲಿ ಫೇಮಸ್ ಆಗಿದ್ದಾರೆ.
ಬಾಲಿವುಡ್‌ನಲ್ಲಿ ಅಕ್ಕನ ಯಶಸ್ಸು ಇವರನ್ನು ಸಿನಿಮಾಕ್ಕೆ ಬರಲು ಪ್ರೇರೇಪಿಸಿದೆ.
ನಟಿಯಾಗಿ ಮಾತ್ರವಲ್ಲದೆ ನಿರ್ದೇಶಕ ಮತ್ತು ನರ್ತಕಿಯಾಗಿಯೂ ತರಬೇತಿ ಪಡೆದಿದ್ದಾರೆ.
ಇಸಾಬೆಲ್ಲೆ ಕೈಫ್ ಸೂರಜ್ ಪಂಚೋಲಿ ಎದುರು ಟೈಮ್ ಟು ಡ್ಯಾನ್ಸ್‌ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ನಟಿ ಈಗಾಗಲೇ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದ್ದಾರೆ.
ಇಸಾಬೆಲ್ಲೆ ಅಕ್ಕ ಕತ್ರಿನಾ ಅವರಂತೆಯೇ, ಫಿಟ್ನೆಸ್ ಫ್ರೀಕ್ ಹಾಗೂ ವರ್ಕೌಟ್ ಮಾಡಲು ಇಷ್ಟಪಡುತ್ತಾರೆ.
ಎನ್ವೈಸಿ ಯ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಮತ್ತು ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ನಟನಾ ಕೋರ್ಸ್ ಮಾಡಿದ್ದಾರೆ ಇಸಾಬೆಲ್ಲೆ
ಸಲ್ಮಾನ್ ಖಾನ್ ಕೋ ಪ್ರೊಡೇಕ್ಷನ್‌ನ 'ಡಾ. ಕ್ಯಾಬ್ಬಿ' ಯಲ್ಲಿ ಇಸಾಬೆಲ್ಲೆ ಕುನಾಲ್ ನಯ್ಯರ್ ಜೊತೆ ಕಾಣಿಸಿಕೊಂಡಿದ್ದಾರೆ.
ಹರ್ಷವರ್ಧನ್ ಕಪೂರ್ ಎದುರು 'ಕಮಿಂಗ್ ಹೋಮ್' ಎಂಬ ಕಿರುಚಿತ್ರದಲ್ಲೂ ನಟಿಸಿದ್ದಾರೆ ಇವರು.
ಸಲ್ಮಾನ್ ಖಾನ್ ಸಹ-ನಿರ್ಮಿಸಿದ ಈ ಇಂಡೋ-ಕೆನಡಿಯನ್ ನಿರ್ಮಾಣದ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಸೋದರ ಆಳಿಯ ಆಯುಷ್ ಶರ್ಮಾ ಎದುರು ಜೋಡಿಯಾಗಿ ಕ್ವಾಥಾ ಎಂಬ ಮುಂಬರುವ ಚಿತ್ರದಲ್ಲಿ ಇಸಾಬೆಲ್ಲೆ ಕೈಫ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ.