ಸಲ್ಮಾನ್ ಖಾನ್‌ನ ಮೊದಲ ಪೇಂಟಿಂಗ್ ಮಾರಾಟಕ್ಕೆ ಸಜ್ಜು; ಹೇಗಿದೆ ಚಿತ್ರ?

ಸಲ್ಮಾನ್ ಖಾನ್ ನಟ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅವರೊಳಗೊಬ್ಬ ಚಿತ್ರ ಕಲಾಕಾರ ಇದಾನೆಂದರೆ ಅಚ್ಚರಿಯಾದೀತು. ಆದರೆ, ಇದೀಗ ನಟನ ಮೊದಲ ಪೇಂಟಿಂಗ್ ಸೇಲ್‌ಗೆ ಹೋಗಲು ಸಜ್ಜಾಗಿದೆ.

Salman Khans First Painting 'Unity 1' Set To Go Live For Sale skr

ಸಲ್ಮಾನ್ ಖಾನ್ ಅವರು 'ಸುಲ್ತಾನ್' ಅಥವಾ 'ಟೈಗರ್'ನಂತಹ ಅವರ ಸೂಪರ್‌ಹಿಟ್ ಚಲನಚಿತ್ರಗಳಿಗೆ ಮಾತ್ರವಲ್ಲ, ಅವರ ಚಾರಿಟಬಲ್ ಟ್ರಸ್ಟ್ 'ಬೀಯಿಂಗ್ ಹ್ಯೂಮನ್ ಫೌಂಡೇಶನ್‌'ಗೂ ಹೆಸರುವಾಸಿಯಾಗಿದ್ದಾರೆ. ಆದರೆ, ಬಾಲಿವುಡ್‌ನ ಈ ಸೂಪರ್‌ಸ್ಟಾರ್ ಒಬ್ಬ ಚಿತ್ರ ಕಲಾವಿದ ಎಂಬುದು ಯಾರಿಗೂ ತಿಳಿದಿಲ್ಲ. 

ಆದರೆ, ಇದೀಗ ಸಲ್ಮಾನ್ ಚಿತ್ರಕಲೆಗೂ ಕೈ ಹಾಕಿದ್ದಾರೆ. ಸಲ್ಮಾನ್ ಖಾನ್ ಅವರು ಆರ್ಟ್‌ಫಿ ಎಂಬ ಕಲಾ ಕಂಪನಿಯೊಂದಿಗೆ ಸಹಕರಿಸಿದ ಕಾರಣ ತಮ್ಮ ಮೊದಲ ಪೇಂಟಿಂಗ್ ಅನ್ನು ಮಾರಾಟ ಮಾಡಲು ಸಿದ್ಧರಾಗಿದ್ದಾರೆ. 'ಯೂನಿಟಿ 1' ಎಂಬ ಶೀರ್ಷಿಕೆಯ ಈ ಚಿತ್ರಕಲೆ ಜೂನ್ 14, 2024ರಂದು ಲೈವ್ ಆಗಲಿದೆ. ಈ ಬಗ್ಗೆ ಸ್ವತಃ ನಟ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ತನ್ನ ಚೊಚ್ಚಲ ಕಲಾಕೃತಿ ಅಭಿಮಾನಿಗಳು ಮತ್ತು ಕಲಾ ಉತ್ಸಾಹಿಗಳಿಗೆ ಖರೀದಿಸಲು ಲಭ್ಯವಿರುತ್ತದೆ ನಟ ಘೋಷಿಸಿದ್ದಾರೆ. ಈ ಅನನ್ಯ ಅವಕಾಶವು ಖರೀದಿದಾರರಿಗೆ 'ಯೂನಿಟಿ 1' ನ ಒಂದು ಭಾಗವನ್ನು ಹೊಂದಲು ಅನುವು ಮಾಡಿಕೊಡುತ್ತದೆ. 

ನಿಕಾಹ್ ಅಥವಾ ಸಪ್ತಪದಿ; ಯಾವ ರೀತಿ ವಿವಾಹವಾಗ್ತಾಳೆ ಸೋನಾಕ್ಷಿ ಸಿನ್ಹಾ?
 

ಎಕ್ಸ್‌ನಲ್ಲಿ ಸಲ್ಮಾನ್ ಹೀಗೆ ಬರೆದಿದ್ದಾರೆ, 'ಉತ್ತೇಜಕ ಸುದ್ದಿ! ನನ್ನ ಮೊದಲ ಕಲಾಕೃತಿ, "ಯೂನಿಟಿ 1," ಆರ್ಟ್‌ಫಿಯಲ್ಲಿ 7 ದಿನಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಈ ವಿಶೇಷ ಚಿತ್ರಕಲೆಯ ಭಾಗವನ್ನು ಹೊಂದುವ ನಿಮ್ಮ ಅವಕಾಶವನ್ನು ಕಳೆದುಕೊಳ್ಳಬೇಡಿ. ಇದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಲಿಂಕ್ ಅನ್ನು ಕ್ಲಿಕ್ ಮಾಡಿ.'

ಮಾರಾಟ ಪ್ರಕ್ರಿಯೆಯನ್ನು ಸರಳ ಮತ್ತು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಸಂಗ್ರಾಹಕರು ತಮ್ಮ ನೆಚ್ಚಿನ ವರ್ಣಚಿತ್ರಗಳನ್ನು ಮನಬಂದಂತೆ ಕ್ಲೈಮ್ ಮಾಡಬಹುದು. 

'ಭಾರತೀಯರು ನಮ್ಮ ಉದ್ಯೋಗ ಕಸಿಯುತ್ತಿದ್ದಾರೆ' ಕೆಲಸ ಕಳೆದುಕೊಂಡ ಯುಎಸ್ ಟೆಕ್ಕಿಯ ವಿಡಿಯೋ ವೈರಲ್
 

ಆರ್ಟ್ಫಿಯ ಅಧಿಕೃತ ವಕ್ತಾರರು ಮತ್ತು ಸಿಇಒ ಅವರು ಸಲ್ಮಾನ್ ಕಲೆಯನ್ನು ಪಡೆಯಲು ಬಳಕೆದಾರರು ಅಪಾರ ಆಸಕ್ತಿ ತೋರುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹೆಚ್ಚಿನ ಬೇಡಿಕೆಯ ಹೊರತಾಗಿಯೂ, ಹರಾಜು ಮಾದರಿಯನ್ನು ಆಯ್ಕೆ ಮಾಡುವ ಬದಲು ಅವರ ಮೊದಲ ಕಲಾ ಕೊಡುಗೆಗಳಿಗೆ ಬೆಲೆಯನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. 

ಏತನ್ಮಧ್ಯೆ, ಕೆಲಸದ ಮುಂಭಾಗದಲ್ಲಿ, ಸಲ್ಮಾನ್ ಖಾನ್ ಮುಂದಿನ ವರ್ಷ ಬಿಡುಗಡೆಯಾಗಲಿರುವ ಅವರ ಮುಂಬರುವ ಚಿತ್ರ 'ಸಿಕಂದರ್' ಚಿತ್ರೀಕರಣವನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ.

ಇಲ್ಲಿ ಪೋಸ್ಟ್ ಅನ್ನು ನೋಡೋಣ:


 

Latest Videos
Follow Us:
Download App:
  • android
  • ios