ಮುಂಬೈ(ಮೇ 23)  ಸ್ಟಾಂಡಪ್ ಕಾಮಿಡಿ ಮತ್ತು ಬಾಲನಟನಾಗಿ ಹೆಸರು ಮಾಡಿದ್ದ ಮೋಹಿತ್​ ಬಘೆಲ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಲ್ಮಾನ್​ ಖಾನ್​ ಅಭಿನಯದ 'ರೆಡಿ' ಸಿನಿಮಾದ ಮೂಲಕವೇ ಬಣ್ಣದ ಲೋಕಕ್ಕೆ ಹಾಸ್ಯ ನಟನಾಗಿ ಪರಿಚಯವಾದ್ದ ನಟ ಇನ್ನು ನೆನಪು ಮಾತ್ರ. 

ಪಾಪಿ ಕ್ಯಾಣ್ಸರ್ ಉತ್ತಮ ನಟನ ಪ್ರಾಣ ಹೊತ್ತೊಯ್ದಿದೆ. ಮೋಹಿತ್ ಗೆ ಕೇವಲ 26 ವರ್ಷ.  ನಟಿ ಪರಿಣಿತಿ ಚೋಪ್ರಾ  ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.  ಕ್ಯಾನ್ಸರ್​ನಿಂದಾಗಿ ಕೆಲವೇ ದಿನಗಳ ಹಿಂದೆಯಷ್ಟೆ ಹಿರಿಯ ನಟರಾದ ರಿಷಿ ಕಪೂರ್​ ಹಾಗೂ ಇರ್ಫಾನ್ ಖಾನ್​ ಅವರನ್ನು ಬಾಲಿವುಡ್ ಕಳೆದುಕೊಂಡಿತ್ತು.

ಕನ್ನಡ ಚಿತ್ರರಂಗದಿಂದ ಮರೆಯಾದ ಬುಲೆಟ್ ಶಬ್ದ

ಹಾಸ್ಯನಟನಾಗಿ ರಂಗ ಪ್ರವೇಶ ಮಾಡಿದ ಕಲಾವಿದ ಕಿರುತೆರೆಯಲ್ಲೂ ಮಿಂಚಿದರು .ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಒಡೆಯುತ್ತಿದ್ದ ನಟನ ಮೇಲೆ ಲಾಕ್ ಡೌನ್ ಸಹ ಪರಿಣಾಮ ಬೀರಿತ್ತು. ಮನೆಯಲ್ಲೇ ಕುಸಿದು ಬಿದ್ದ ನಟನನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಾಯಿತು

ಗಲಿ ಗಲಿ ಶೋರ್​ ಹೈ, ರೆಡಿ, ಜಬರಿಯಾ ಜೋಡಿ ಸಿನಿಮಾ ಸೇರಿದಂತೆ 7ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೋಹಿತ್​. ಇನ್ನು ಬಂಟಿ ಔರ್​ ಬಬ್ಲಿ 2 ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಲಾಕ್​​ಡೌನ್​ನಿಂದಾಗಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ.