Asianet Suvarna News Asianet Suvarna News

ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಸಲ್ಮಾನ್ ಖಾನ್ ಅಪ್ಪ!

ಅರ್ಬಾಜ್​ ಖಾನ್​ ಷೋನಲ್ಲಿ ಸಲೀಂ ಖಾನ್​ ಅವರು ಮಗ ಸಲ್ಮಾನ್​ ಖಾನ್​ ಕುರಿತು ಹೇಳಿದ್ದೇನು?
 

Salman Khan father Salim Khan reveals he was scared for him because of this habit
Author
First Published Feb 6, 2023, 10:01 AM IST

ನಟ ಸಲ್ಮಾನ್​ ಖಾನ್​ (Salman Khan) ಅವರ ಜೀವನ ಕ್ರಮದ ಕುರಿತಾಗಿ ಅವರ ತಂದೆ ಸಲೀಂ ಖಾನ್ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇನ್ನೋರ್ವ ಪುತ್ರ  ಅರ್ಬಾಜ್ ಖಾನ್ (Arbaaz Khan) ಅವರ ಶೋನಲ್ಲಿ ಕಾಣಿಸಿಕೊಂಡ ಸಲೀಂ ಖಾನ್​ ಅವರು ಸಲ್ಮಾನ್​ ಕುರಿತು ಕೆಲವು ವಿಷಯಗಳನ್ನು ಬಹರಂಗಗೊಳಿಸಿದ್ದಾರೆ.  ತಮ್ಮ ಮಗ ಸ್ಟಾರ್​ ನಟನಾಗುತ್ತಾನೆ ಎಂಬ ಕಲ್ಪನೆಯೂ ತಮಗೆ ಇರಲಿಲ್ಲ ಎಂದು ಸಲೀಂ ಖಾನ್​ ಹೇಳಿದ್ದಾರೆ. 'ಸಿನಿಮಾ ರಂಗದಲ್ಲಿ ಮಗ ಹೋಗುವುದು ತಿಳಿದಾಗ, ಮೊದಲು  ಅಧ್ಯಯನವನ್ನು ಪೂರ್ಣಗೊಳಿಸುವಂತೆ ಹೇಳಿದ್ದೆ. ಆಮೇಲೆ ಬೇಕಿದ್ದರೆ  ಚಿತ್ರರಂಗಕ್ಕೆ ಹೋಗುವ ಸಾಹಸ ಮಾಡುವಂತೆ ಹೇಳಿದ್ದೆ. ಆದರೆ ಆತನ ಮೊದಲ ಚಿತ್ರ ನೋಡಿದ ಮೇಲೆ ಆತನಲ್ಲಿ ಸ್ಟಾರ್ ಕ್ವಾಲಿಟಿ ಇದೆ ಎಂದು ತಿಳಿಯಿತು' ಎಂದು ಸಲೀಂ ಖಾನ್​ ತಿಳಿಸಿದ್ದಾರೆ. 

ಆತನ ಮೊದಲ ಸಿನಿಮಾ ನೋಡಿದಾಗ ಶೇ. 100ರಷ್ಟು ಸ್ಟಾರ್ ಕ್ವಾಲಿಟಿ (star quality) ಇದೆ ಎಂದು ಎನ್ನಿಸಿತ್ತು.  ಆದರೆ ಇದೇ ಮುಂದುವರೆಯಲು ಭರವಸೆ ಇರಲಿಲ್ಲ. ಏಕೆಂದರೆ ಸಿನಿಮಾ ಕ್ಷೇತ್ರ ನನಗೆ ಚೆನ್ನಾಗಿ ಗೊತ್ತು. ಅದರ ಸ್ವರೂಪವೂ ಗೊತ್ತಿತ್ತು. ಆದ್ದರಿಂದ ನಾನು ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆತನಿಗೂ ಇದರ ಮನವರಿಕೆ ಇತ್ತು ಎಂದು ಸಲೀಂ ಹೇಳಿದ್ದಾರೆ. 'ಸಲ್ಮಾನ್​ ಖಾನ್​ಗೆ  ಸಂಪೂರ್ಣ ಸಾಮರ್ಥ್ಯವಿತ್ತು, ಹಾಗಾಗಿ ಅವನು 100 ಪ್ರತಿಶತದಷ್ಟು ಸ್ಟಾರ್ ಆಗುತ್ತಾನೆ ಎಂಬುದು ಗೊತ್ತಿತ್ತು. ಒಂದು ವೇಳೆ  ಯಾರಾದರೂ ಅವನಿಗೆ ಹಾನಿ ಮಾಡುತ್ತಾರೆ ಎಂದಾದರೆ ಅದು ಅವನಿಂದಲೇ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದೆ ಎಂದಿದ್ದಾರೆ.

ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್

'ಸಲ್ಮಾನ್ ತನ್ನ ವೃತ್ತಿಜೀವನದತ್ತ ಗಮನ ಹರಿಸುವುದನ್ನು ಮುಂದುವರಿಸಬೇಕು ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಆತ ನಟನಾಗಿ ಸುಧಾರಿಸಿದ್ದಾನೆ. ಆತನ ಚಿತ್ರಗಳಾದ 'ಬಜರಂಗಿ ಭಾಯಿಜಾನ್' (Bhajarangi Baijan) ಮತ್ತು 'ಸುಲ್ತಾನ್' ನೋಡದ ಮೆಲೆ ನನಗೆ ಆತನಲ್ಲಿ ಇರುವ ಅಭಿನಯದ ಬಗ್ಗೆ ಹೆಮ್ಮೆ ಮೂಡುತ್ತಿದೆ ಎಂದು  ಸಲೀಂ ಖಾನ್ ಶ್ಲಾಘಿಸಿದರು.
 
ನೀವು ಸಲ್ಮಾನ್ ಅವರ ವೃತ್ತಿಜೀವನಕ್ಕೆ ಏನಾದರೂ ಕೊಡುಗೆ ನೀಡಿದ್ದೀರಾ ಎಂದು ಅರ್ಬಾಜ್ ಖಾನ್ ಕೇಳಿದಾಗ, 'ಕೊಡುಗೆ ನೀಡುವಂಥ ಕೆಲಸ ಯಾರೂ ಮಾಡಬಾರದು. ಏನೇ ಸಮಸ್ಯೆ ಬಂದರೂ ಅದನ್ನು ಅವರಾಗಿಯೇ ಎದುರಿಸುವ ಗುಣ ಹೊಂದಿರಬೇಕು. ಆದ್ದರಿಂದ ಕೊಡುಗೆಯ ವಿಚಾರದಲ್ಲಿ ನಾನು ಹಿಂದೆ. ನಾನು ಈ ವಿಚಾರದಲ್ಲಿ ನಿಂತಲ್ಲಿಯೇ ನಿಲ್ಲಲು ಬಯಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಮಗನಿಗೆ ಸಜೆಷನ್​ ನೀಡಿರುವ ಸಲೀಂ ಖಾನ್​ ಅವರು, ಸಲ್ಮಾನ್‌ಗೆ ಉತ್ತಮ ಚಿತ್ರಕಥೆಯನ್ನು ಆಯ್ಕೆ ಮಾಡುವುದು ಮುಖ್ಯ. ಉತ್ತಮ ಸ್ಕ್ರಿಪ್ಟ್ (script) ಆಯ್ಕೆ ಮಾಡುವುದು ಇನ್ನೂ ಮುಖ್ಯ ಎಂದಿದ್ದಾರೆ. 

ಸಲ್ಮಾನ್​ ಖಾನ್​ರಷ್ಟು ಇತರ ಮಕ್ಕಳು  ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು  ನಿರಾಶೆಗೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಸಲೀಂ ಖಾನ್​, 'ಎಲ್ಲರೂ ತಮ್ಮಕೈಲಾದ ಮಟ್ಟಿಗೆ ಕಷ್ಟಪಟ್ಟಿದ್ದಾರೆ. ಪಡುತ್ತಲೂ ಇದ್ದಾರೆ. ಎಲ್ಲರಿಗೂ ಒಮ್ಮೆಲೇ ಯಶಸ್ಸು ಬರುವುದಿಲ್ಲ.  ನಾನು ಕೂಡ ತುಂಬಾ ಆಶಾವಾದಿ ವ್ಯಕ್ತಿ.  ತಮ್ಮ ಸಮಯವನ್ನು ಯಾವ ಮಕ್ಕಳೂ ವ್ಯರ್ಥ ಮಾಡುತ್ತಿಲ್ಲ ಎನ್ನುವ ಸಂತೋಷ ಇದೆ ಎಂದರು.

ಸಲ್ಮಾನ್ ಖಾನ್ 1988 ರಲ್ಲಿ 'ಬಿವಿ ಹೋ ತೋ ಐಸಿ' ಚಿತ್ರದಲ್ಲಿ ಪೋಷಕ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1989 ರಲ್ಲಿ ಪ್ರಮುಖ ನಾಯಕನಾಗಿ ಅವರ ಮೊದಲ ಚಿತ್ರ 'ಮೈನೆ ಪ್ಯಾರ್ ಕಿಯಾ', ಇದು ಬ್ಲಾಕ್ಬಸ್ಟರ್ ಆಗಿತ್ತು. ಇದಾದ ನಂತರ ಸಲ್ಮಾನ್ ಹಿಂತಿರುಗಿ ನೋಡಲೇ ಇಲ್ಲ. ಅವರ ಮುಂಬರುವ ಚಿತ್ರಗಳು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಮತ್ತು 'ಟೈಗರ್ 3', ಈ ವರ್ಷ ಬಿಡುಗಡೆಯಾಗಲಿದೆ.

ಬಾಕ್ಸ್​ ಆಫೀಸ್​ ಕಲೆಕ್ಷನ್​ ಲಿಸ್ಟ್​ ಬಿಡುಗಡೆ: ಶಾರುಖ್​ ಅಭಿಮಾನಿಗಳಿಗೆ ಭಾರೀ ನಿರಾಸೆ!

ಇನ್ನು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರ ವಿಷಯಕ್ಕೆ ಬರುವುದಾದರೆ ಇವರು ಎರಡು ಮದುವೆಯಾಗಿ ಸುದ್ದಿಯಾದವರು.  ಅವರು ಮೊದಲು 1964 ರಲ್ಲಿ ಸುಶೀಲಾ ಚರಕ್ ಅವರನ್ನು ವಿವಾಹವಾದರು, ಅವರಿಗೆ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಅಲ್ವಿರಾ ಖಾನ್ ಎಂಬ ನಾಲ್ಕು ಮಕ್ಕಳು. ನಾಲ್ಕು ಮಕ್ಕಳ ಜನನದ ನಂತರ, ಅವರು ಸುಶೀಲಾಗೆ ವಿಚ್ಛೇದನ (Divorce) ನೀಡದೇ 1981 ರಲ್ಲಿ ಹೆಲೆನ್ ಅವರನ್ನು  ಮದುವೆಯಾದರು. ನಂತರ  ಕಾರ್ಯಕ್ರಮವೊಂದರಲ್ಲಿ ಸಲೀಂ ಖಾನ್ ಅವರು ಹೆಲೆನ್‌ಗೆ ಸಹಾಯ ಮಾಡಲು ಮದುವೆಯಾಗಿರುವುದಾಗಿ ಹೇಳಿದ್ದರು.

Follow Us:
Download App:
  • android
  • ios