ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವಕ್ಕಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಹೋರಾಡುತ್ತಿರುವ ನಟ ಫರಾಝ್ ಖಾನ್‌ಗೆ ನೆರವಾಗಿದ್ದಾರೆ. ಗ್ರೇಟ್ ಹ್ಯೂಮ್ ಬೀಯಿಂಗ್ ಎಂದು ಸಲ್ಮಾನ್ ಖಾನ್‌ನನ್ನು ಹೊಗಳಿದ ಕಾಶ್ಮೇರಾ ಖಾನ್ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನೀವು ನಿಜಕ್ಕೂ ಒಬ್ಬ ಗ್ರೇಟ್ ವ್ಯಕ್ತಿ. ಫರಾಝ್ ಖಾನ್ ಹಾಗೂ ಆತನ ವೈದ್ಯಕೀಯ ವೆಚ್ಚ ಭರಿಸಿದ್ದಕ್ಕೆ ಥ್ಯಾಂಕ್ಸ್. ಫರಾಝ್ ಖಾನ್ ಸ್ಥಿತಿ ಗಂಭೀರವಾಗಿದ್ದು, ಸಲ್ಮಾನ್ ಇವರ ಜೊತೆ ನಿಂತಿದ್ದಾರೆ. ನಾನು ಯಾವಾಗಲೂ ನಿಮ್ಮನ್ನು ಗೌರವಿಸುತ್ತೇನೆ. ಈ ಪೋಸ್ಟ್ ಇಷ್ಟವಿಲ್ಲದವರು ನನ್ನನ್ನು ಅನ್‌ಫಾಲೋ ಮಾಡಬಹುದು. ಬಾಲಿವುಡ್‌ನಲ್ಲಿ ನಾನು ಭೇಟಿ ಮಾಡಿದ ಜೆನ್ವಿನ್ ವ್ಯಕ್ತಿ ಇವರು ಎಂದು ಬರೆದಿದ್ದಾರೆ.

ಹುಟ್ಟಿದ ಕೂಡಲೇ ವೈದ್ಯನ ಮಾಸ್ಕ್ ಎಳೆದ ಮಗು: ಫೋಟೋ ವೈರಲ್

ಪೂಜಾ ಭಟ್ ಫರಾಝ್ ಖಾನ್‌ಗೆ ನೆರವಾಗುವಂತೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಮಹಾಭಾರತ ನಟ ಯೂಸುಫ್ ಖಾನ್ ಪುತ್ರ ಫರಾಝ್ ಝಾನ್ ಅವರು ಬ್ರೈನ್ ಇನ್ಫೆಕ್ಷನ್‌ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಟನ ಆರೋಗ್ಯದ ಬಗ್ಗೆ ಆತನ ಕುಟುಂಬಸ್ಥರು ಶೇರ್ ಮಾಡಿ ನೆರವಿಗಾಗಿ ಕೋರಿದ್ದರು.