Asianet Suvarna News Asianet Suvarna News

Salaam Venky Trailer; 'ಲಾಲ್ ಸಿಂಗ್ ಚಡ್ಡಾ' ಸೋಲಿನ ಬಳಿಕ ಫ್ಯಾನ್ಸ್ ಮುಂದೆ ಆಮೀರ್, ವಾವ್ ಎಂದ ನೆಟ್ಟಿಗರು

ಲಾಲ್ ಸಿಂಗ್ ಚಡ್ಡಾ ಸೋಲಿನ ಬಳಿಕ ಆಮೀರ್ ಖಾನ್ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕಾಜೋಲ್ ಜೊತೆ ತೆರೆಹಂಚಿಕೊಂಡಿರುವ ಆಮೀರ್ ಖಾನ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

Salaam Venky Trailer: Amir Khan cameo in Kajol starrer movie sgk
Author
First Published Nov 14, 2022, 3:49 PM IST

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸೋಲಿನ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹೀನಾಯ ಸೋಲು ಕಂಡಿತ್ತು. ಪ್ರೇಕ್ಷಕರಿಗೆ ಭಾರಿ ನಿರಾಸೆ ಮೂಡಿಸಿದ್ದ ಲಾಲ್ ಸಿಂಗ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್ ನಲ್ಲೂ ಮಕಾಡೆ ಮಲಗಿತ್ತು. ಅಲ್ಲದೇ ಆಮೀರ್ ಖಾನ್ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಟ್ ಟ್ರೆಂಡ್ ಕೂಡ ಜೋರಾಗಿತ್ತು. ಆಮೀರ್ ಖಾನ್ ಕ್ಷಮೆ ಕೇಳಿದ್ರು ಸಹ ಪ್ರಯೋಜನವಾಗಲಿಲ್ಲ. ಈ ಸಿನಿಮಾ ಬಳಿಕ ಆಮೀರ್ ಖಾನ್ ಯಾವುದೇ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. ಆದರೀಗ ದಿಢೀರ್ ಅಂತ ಅಭಿಮಾನಿಗಳ ಮುಂದೆ ಬಂದಿದ್ದಾರೆ. 

ಇತ್ತೀಚಿಗಷ್ಟೆ ಸಲಾಂ ವೆಂಕಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟಿ ಕಾಜೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಹೌದು ಆಮೀರ್ ಖಾನ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿಲ್ಲ. ಸಲಾಂ ವೆಂಕಿ ಸಿನಿಮಾದಲ್ಲಿ ಆಮೀರ್ ಖಾನ್ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಆಮೀರ್ ಖಾನ್ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಮೀರ್ ಖಾನ್ ಕೂಲ್ ಎಂಟ್ರಿ ಅಭಿಮಾನಿಗಳ ಹೃದಯ ಹೆದ್ದಿದೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಹಾಗಾಗಿ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಮಿಸ್ಟರ್ ಪರ್ಫೆಕ್ಷನಿಸ್ಟ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. 

ಆಮೀರ್ ಖಾನ್ ತಾಯಿಗೆ ಹೃದಯಾಘಾತ, ಊಹಾಪೋಹಗಳಿಂದ ಖಾನ್‌ ಬೇಸರ

ಸಲಾಂ ವೆಂಕಿ ರೇವತಿ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಅಮ್ಮ ಮಗನ ಭಾವನಾತ್ಮಕ ಕಥೆಯ ಈ ಸಿನಿಮಾದ ಟ್ರೈಲರ್ ಭಾರಿ ನಿರೀಕ್ಷೆ ಮೂಡಿಸಿದೆ. ಕಾಜೋಲ್ ಸುಜಾತಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಮಗನಿಗಾಗಿ ಹೋರಾಡುವ ತಾಯಿ ಪಾತ್ರ ಕಾಜೋಲ್ ಅವರದ್ದು. ಆದರೆ ಆಮೀರ್ ಪಾತ್ರ ಇನ್ನೂ ರಿವೀಲ್ ಆಗಿಲ್ಲ. ಆದರೆ ಕಾಜೋಲ್ ಮತ್ತು ಆಮೀರ್ ಖಾನ್ ಜೋಡಿಯನ್ನು ಮತ್ತೊಮ್ಮೆ ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 2006ರಲ್ಲಿ ಬಂದ ಫನಾ ಸಿನಿಮಾದ ಬಳಿಕ ಆಮೀರ್ ಖಾನ್ ಮತ್ತು ಕಾಜೋಲ್ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಒಟ್ಟಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. 

ಟ್ರೇಲರ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. 'ಕಾಜೋಲ್ ಮತ್ತು ಅಮೀರ್ ಖಾನ್ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಮತ್ತು ನಟಿ. ಭಾರತೀಯ ಚಿತ್ರರಂಗದ ಲಿವಿಂಗ್ ಲೆಜೆಂಡ್ಸ್' ಎಂದು ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ 'ಈ ಸಿನಿಮಾ ನೋಡಲು ಕಾಯುತ್ತಿದ್ದೀನಿ' ಎಂದಿದ್ದಾರೆ.  'ನಿಮ್ಮನ್ನು ಮತ್ತೆ ದೊಡ್ಡ ಪರದೆಯಲ್ಲಿ ನೋಡಲು ಕಾಯುತ್ತಿದ್ದೀನಿ'. ಇರ್ರೋವ ಫ್ಯಾನ್ 'ಫನಾ ನಂತರ ಅಮೀರ್ ಕಾಜೋಲ್ ಮತ್ತೆ ಒಟ್ಟಿಗೆ ಬರ್ತಿದ್ದಾರೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

ವಿವಾದದ ಬಳಿಕ ಆಮೀರ್ ಖಾನ್ ನಟಿಸಿದ್ದ ಜಾಹೀರಾತು ಹಿಂಪಡೆದ ಬ್ಯಾಂಕ್

ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸಲಾಮ್ ವೆಂಕಿ ಚಿತ್ರವು 9ನೇ ಡಿಸೆಂಬರ್ 2022 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಕಾಜೋಲ್ ಜೊತೆಗೆ ವಿಶಾಲ್ ಜೇತ್ವಾ, ರಾಹುಲ್ ಬೋಸ್, ಅಹನಾ ಕುಮ್ರಾ ಮತ್ತು ರಾಜೀವ್ ಖಂಡೇಲ್ವಾಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. 

Follow Us:
Download App:
  • android
  • ios