ಸೈಯಾರ ನಟಿ ಅನಿತ್ ಪಡ್ಡ ಸದ್ಯ ಬೇಡಿಕೆಯಲ್ಲಿರುವ ನಟಿ. ಅನಿತ್ ಏನೇ ಹೇಳಿದ್ರು ಚರ್ಚೆಯಾಗುತ್ತೆ. ಈಗ ಅವರು ವರ್ಜಿನಿಟಿ ಬಗ್ಗೆ ಹೇಳಿದ ವಿಡಿಯೋ ಒಂದು ವೈರಲ್ ಆಗಿದೆ. 

ಥಿಯೇಟರ್ (Theater( ನಲ್ಲಿ ಜೆನ್ ಝಡ್ (Gen Z) ಹುಡುಗ್ರಿಗೆ ಹುಚ್ಚು ಹಿಡಿಸಿದ ಸಿನಿಮಾ ಸೈಯಾರ. ಸದ್ಯ ಎಲ್ಲಿ ನೋಡಿದ್ರೂ ಸೈಯಾರ (saiyaara) ಸಿನಿಮಾ ಸದ್ದು. 100 ಕೋಟಿ ಕ್ಲಬ್ ಸೇರಿದ ಸಿನಿಮಾ ನೋಡೋಕೆ ಜನರು ದಂಡುಗಟ್ಟಿ ಬರ್ತಿದ್ದಾರೆ. ಹೊಸ ಜೋಡಿ ಅನಿತ್ ಪಡ್ಡ (Anit Padda) ಹಾಗೂ ಅಹಾನ್ ಪಾಂಡೆ (Ahan Pandey) ಚೊಚ್ಚಲ ಚಿತ್ರ ಜನರಿಗೆ ವಿಪರೀತ ಇಷ್ಟವಾಗಿದೆ. ಸಿನಿಮಾ ನೋಡಿ ಥಿಯೇಟರ್ ನಲ್ಲೇ ಜನ ಕೂಗಿಕೊಂಡ್ರೆ ಮತ್ತೆ ಕೆಲವರು ಅಲ್ಲೇ ರೋಮ್ಯಾನ್ಸ್ ಶುರು ಮಾಡಿದ್ದಾರೆ. ಅನಿತಾ ಪಡ್ಡ ಈಗ ಎಲ್ಲರ ಅಚ್ಚುಮೆಚ್ಚಿನ ನಟಿ.

ನಿಮಗೆಲ್ಲ ಗೊತ್ತಿರುವಂತೆ ನಟ ಅಹಾನ್, ಅನನ್ಯ ಪಾಂಡೆ ಅವರ ಸೋದರಸಂಬಂಧಿ. ಇನ್ನು ಅನಿತ್ ಪಡ್ಡ ಪಂಜಾಬ್ ಮೂಲದ ಬೆಡಗಿ. ಅನಿತ್ ಜಾಹೀರಾತುಗಳಲ್ಲಿ ಕೆಲಸ ಮಾಡ್ತಿದ್ರು. ಈಗ ಸೈಯಾರ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದಾರೆ. ನ್ಯಾಚ್ಯುರಲ್ ಬ್ಯೂಟಿ ಅನಿತ್ ಪಡ್ಡ ನಟನೆಯನ್ನು ಜನರು ಮೆಚ್ಚಿಕೊಂಡಾಗಿದೆ. ಈಗ ಅನಿತ್ ಪಡ್ಡ ಹೋದಲ್ಲೆಲ್ಲ ಕ್ಯಾಮರಾ ಹೋಗ್ತಿದೆ. ಈ ಮಧ್ಯೆ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ವಿಡಿಯೋದಲ್ಲಿ ಅನಿತ್ ಪಡ್ಡ, ವರ್ಜಿನಿಟಿ ಬಗ್ಗೆ ಮಾತನಾಡಿದ್ದಾರೆ. ಅನಿತ್ ಪಡ್ಡ, ಯಾರೊಂದಿಗೋ ಟೀ ಕುಡಿಯುತ್ತಿದ್ದಾರೆ. ಮಣ್ಣಿನ ಕಪ್ ನಲ್ಲಿರುವ ಟೀ ಹೀರಿದ ಅನಿತ್, ಇಲ್ಲಿಯವರೆಗೆ ನಾನು ಟೀ ಕುಡಿದಿರಲಿಲ್ಲ. ನಾನು ಟೀ ರುಚಿ ಅವಿಯುತ್ತಿರೋದು ಇದೇ ಮೊದಲು. ಹಾಗಾಗಿ ನಾನು ನನ್ನ ಟೀ ವರ್ಜನಿಟಿ ಕಳೆದುಕೊಂಡಿದ್ದೇನೆ ಅಂತ ಹೇಳಬಲ್ಲೆ ಸುದಾಮಾ, ಇದು ಖುಷಿ ನೀಡ್ತು ಅಂತಾರೆ. ಅನಿತ್ ಪಡ್ಡ ಅವರ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಬಳಕೆದಾರರು ತಮ್ಮದೇ ದೃಷ್ಟಿಕೋನದಲ್ಲಿ ವಿಡಿಯೋ ನೋಡ್ತಿದ್ದಾರೆ. ವಿಡಿಯೋಕ್ಕೆ ಸಿಕ್ಕಾಪಟ್ಟೆ ಕಮೆಂಟ್ ಕೂಡ ಬಂದಿದೆ. ಕೊನೆಗೂ ಅನಿತ್, ತನ್ನ ಕನ್ಯತ್ವ ಕಳೆದುಕೊಂಡ್ರು ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ನಿಜವಾಗ್ಲೂ ಟೀ ಬಗ್ಗೆಯೇ ಮಾತನಾಡ್ತಿರೋದಾ ಅಂತ ಕೇಳಿದ್ದಾರೆ. ಅನೇಕರು ಅನಿತ್ ಪಡ್ಡ ವೈಸ್ ಇಷ್ಟಪಟ್ಟಿದ್ದಾರೆ.

ಅನಿತ್ ಪಡ್ಡಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಅವರು 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆದ್ರೆ ಅಪರೂಪಕ್ಕೊಮ್ಮೆ ಅನಿತ್ ಪಡ್ಡಾ ಪೋಸ್ಟ್ ಹಾಕ್ತಾರೆ. ಸೈಯಾರ ಯಶಸ್ಸಿನ ನಂತ್ರ, ಜನರು ಅನಿತ್ ಪಡ್ಡ ಬಗ್ಗೆ ತಿಳಿಯೋಕೆ ಅಸಕ್ತರಾಗಿದ್ದಾರೆ. ಅವರ ಪ್ರೊಫೈಲ್ ಹುಡುಕಾಟ ಜೋರಾಗಿ ನಡೆದಿದೆ. ಅನೇಕರು ಸಿನಿಮಾ ನಂತ್ರ ಅನಿತ್ ಪಡ್ಡಾ ಫಾಲೋ ಮಾಡೋಕೆ ಶುರು ಮಾಡಿದ್ದಾರೆ.

ಇನ್ನು ಅನಿತ್ ಬಗ್ಗೆ ಹೇಳೋದಾದ್ರೆ ಅವರು ಅನಿತ್ ಅಕ್ಟೋಬರ್ 14, 2002 ರಂದು ಜನಿಸಿದರು. ಅವರು ಅಮೃತಸರದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅನಿತ್ ತಮ್ಮ ಹದಿಹರೆಯದ ದಿನಗಳಲ್ಲಿ ಮಾಡೆಲಿಂಗ್ ಶುರು ಮಾಡಿದ್ರು. ಶೀಘ್ರದಲ್ಲೇ ಅವರಿಗೆ ಅನೇಕ ಆಫರ್ ಬರೋಕೆ ಶುರು ಆಯ್ತು. ಅನಿತ್ಗೆ ಕಾಜೋಲ್ ಸಿನಿಮಾದಲ್ಲಿ ನಟಿಸಲು ಮೊದಲ ಬಾರಿ ಅವಕಾಶ ಸಿಕ್ಕಿತ್ತು. ಜನಸಂದಣಿಯಲ್ಲೆಲ್ಲೋ ಅವರು ಕಾಣಿಸಿಕೊಂಡಿದ್ದರು. ಯಾವುದೇ ಡೈಲಾಗ್ ಇರ್ಲಿಲ್ಲ. ಸಲಾಮ್ ವೆಂಕಿ ನಂತ್ರ ಅನಿತ್, ಅಮೆಜಾನ್ ಪ್ರೈಮ್ ವೀಡಿಯೊ ಬಿಗ್ ಗರ್ಲ್ಸ್ ಡೋಂಟ್ ಕ್ರೈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಸೈಯಾರಾ ಸಿನಿಮಾದಲ್ಲಿ ಅನಿತ್ ನಟನೆ ಹೊಗಳಲಾಗ್ತಿದೆ. ಆದ್ರೆ ಅವರು ಬರೀ ನಟಿಯಲ್ಲ. ಗಾಯಕಿ ಕೂಡ ಹೌದು. 2024 ರಲ್ಲಿ ಅವರು ಗಾಯಕಿಯಾಗಿ ತಮ್ಮ ಮಾಸೂಮ್ ಸಾಂಗ್ ಬಿಡುಗಡೆ ಮಾಡಿದ್ದರು. ಬಿಗ್ ಗರ್ಲ್ಸ್ ಡೋಂಟ್ ಕ್ರೈ ನಲ್ಲೂ ಅನಿತ್ ಹಾಡಿದ್ದರು.

View post on Instagram