ಅಯ್ಯೋ ದಪ್ಪ ಆಗಿದ್ಯಾ… ಎಂದವರಿಗೆ ತಿರುಗೇಟು ಕೊಟ್ಟ ನಟಿ ನೇಹಾ ಗೌಡ
ಮಗು ಆದ ಬಳಿಕ ತುಂಬ ದಪ್ಪ ಆಗಿದ್ದಿ ಎಂದು ಪದೇ ಪದೇ ಕಾಮೆಂಟ್ ಮಾಡುವವರಿಗೆ ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ತಿರುಗೇಟು ಕೊಟ್ಟಿದ್ದಾರೆ.

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದ ನಟಿ ನೇಹಾ ಗೌಡ. ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದರೂ ಸಹ ಲಕ್ಷ್ಮೀ ಬಾರಮ್ಮದ ಗೊಂಬೆಯಾಗಿ ಇಂದಿಗೂ ಜನಪ್ರಿಯತೆ ಪಡೆದಿದ್ದಾರೆ ನಟಿ. ಸದ್ಯ ಮದುವೆಯಾಗಿ, ಮಗುವಾಗಿ, ಮುದ್ದಿನ ಮಗಳ ಜೊತೆ ಸಮಯ ಕಳೆಯುತ್ತಿದ್ದಾರೆ ನಟಿ ನೇಹಾ ಗೌಡ.
ಕೆಲವು ತಿಂಗಳ ಹಿಂದೆ ಮಗಳಿಗೆ ಶಾರದಾ ಎಂದು ನಾಮಕರಣ ಕೂಡ ಮಾಡಿದ್ದರು. ಮಗುವಾದ ಬಳಿಕ ನೇಹಾ ಗೌಡ (Neha Gowda) ಅವರ ತೂಕ ಹೆಚ್ಚಾಗಿದೆ. ಇದು ಗರ್ಭಿಣಿಯಾದ ಬಳಿಕ ಮಹಿಳೆಯರ ದೇಹದಲ್ಲಿ ಸಾಮಾನ್ಯವಾಗಿ ಆಗುವಂತಹ ಬದಲಾವಣೆಯಾಗಿದೆ. ಆದರೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಟ್ರಾವೆಲ್ ಫೋಟೊ, ಮಗಳ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದಾಗ, ಹೆಚ್ಚಿನ ಜನರು ತೂಕ ಹೆಚ್ಚಾಗಿರುವ ಬಗ್ಗೆ ಕಾಮೆಂಟ್ ಮಾಡುತ್ತಿದ್ದು, ಅದಕ್ಕೆ ನೇಹಾ ಇದೀಗ ತಿರುಗೇಟು ನೀಡಿದ್ದಾರೆ.
ನೇಹಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೈಕೈತುಂಬಿ ಮುದ್ದಾಗಿರುವ ಫೋಟೊಗಳನ್ನು ಶೇರ್ ಮಾಡಿದ್ದು, ಅದರ ಜೊತೆಗೆ ದಪ್ಪ ಆಗಿರುವ ಬಗ್ಗೆ ಕಾಮೆಂಟ್ ಮಾಡುವವರಿಗೆ ಬುದ್ದಿವಾದ ಹೇಳಿದ್ದಾರೆ. ಅಯ್ಯೋ ನೀನು ತುಂಬಾ ತೂಕ ಹೆಚ್ಚಿಸಿಕೊಂಡಿದ್ದೀಯಾ" ಎಂದು ಹೇಳುವ ಎಲ್ಲರಿಗೂ - ಹೌದು, ನನ್ನ ತೂಕ (put on weight)ಹೆಚ್ಚಿದೆ. ಮತ್ತು ನನಗೆ ಅದರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ನನ್ನ ದೇಹವು ಹೆರಿಗೆಯ ಎನ್ನುವ ಮಿರಾಕಲ್ ಮೂಲಕ ಸಾಗಿದೆ ಮತ್ತು ಸುಂದರವಾದ ಹೆಣ್ಣು ಮಗುವನ್ನು ಪೋಷಿಸಿದೆ. ನಾನು ಎದೆಹಾಲುಣಿಸುತ್ತಿದ್ದೇನೆ, ನಮ್ಮಿಬ್ಬರ ಪೋಷಣೆಗಾಗಿ ಚೆನ್ನಾಗಿ ತಿನ್ನುತ್ತಿದ್ದೇನೆ, ದೈಹಿಕವಾಗಿ ಸಕ್ರಿಯಳಾಗಿದ್ದೇನೆ ಮತ್ತು ನನ್ನ ಮಗುವನ್ನು ಮತ್ತು ನನ್ನನ್ನು ನೋಡಿಕೊಳ್ಳಲು ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ.
ಪ್ರತಿಯೊಂದು ಮಗುವೂ ವಿಭಿನ್ನವಾಗಿರುತ್ತದೆ, ಹಾಗೆಯೇ ಪ್ರತಿಯೊಬ್ಬ ತಾಯಿಯೂ ಸಹ. ನಾವೆಲ್ಲರೂ ಗುಣಮುಖರಾಗುತ್ತೇವೆ ಮತ್ತು ನಮ್ಮದೇ ಆದ ವೇಗದಲ್ಲಿ ಮತ್ತೆ ಪುಟಿದೇಳುತ್ತೇವೆ - ಅದು ಜೀವನ ಅಥವಾ ದೇಹದ ಆಕಾರದ (body shape) ಬಗ್ಗೆ ಇರಲಿ. ಆದ್ದರಿಂದ ನಿರ್ಣಯಿಸುವ ಬದಲು, ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ದಯವಿಟ್ಟು ನಿಮ್ಮ ಅನಪೇಕ್ಷಿತ ಅಭಿಪ್ರಾಯಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ನೇಹಾ ಅವರ ನೇರ ನುಡಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.