Anchor Janvi Second Marriage: ನಿರೂಪಕಿ ಜಾನ್ವಿ ಅವರು ಎರಡನೇ ಮದುವೆ ಆಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. 

ನಿರೂಪಕಿ ಜಾನ್ವಿ ಅವರು ಯಾಕೆ ಡಿವೋರ್ಸ್‌ ತಗೊಂಡರು, ಎರಡನೇ ಮದುವೆ ಪ್ಲ್ಯಾನ್‌ನಲ್ಲಿದ್ದಾರಾ ಎನ್ನುವ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಈಗ ವಿದ್ಯಾ ಮಲ್ನಾಡ್‌ ಎನ್ನುವ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಎರಡನೇ ಮದುವೆ ಬಗ್ಗೆ ಯೋಚಿಸಲ್ಲ

“ಮಗನಿಗೆ ಪ್ರೀತಿ ಕೊರತೆಯಾಗಿದೆ. ಅದನ್ನು ನಾನು ನೀಡಬೇಕು. ಮೊದಲ ಮದುವೆಯೇ ಅದ್ಭುತವಾದ ಅನುಭವ ಕೊಟ್ಟಿದ್ದಕ್ಕೆ ಎರಡನೇ ಮದುವೆ ಆಗೋ ಆಲೋಚನೆ ಬಂದಿಲ್ಲ. ವೃತ್ತಿ ಜೀವನ, ಮಗನ ಬಗ್ಗೆ ಗಮನ ಕೊಡ್ತಿದ್ದೀನಿ. ಎರಡನೇ ಮದುವೆ ಬಗ್ಗೆ ನಾನು ಯೋಚನೆ ಮಾಡೋದಿಲ್ಲ, ಆಗೋದಿಲ್ಲ” ಎಂದು ನಿರೂಪಕಿ ಜಾನ್ವಿ ಹೇಳಿದ್ದಾರೆ.

ಮಗನಿಗೆ ಅಪ್ಪನ ಪ್ರೀತಿ ಕೊರತೆ ಇದೆ!

“ಯಾರೋ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಮತ್ತೆ ಬೇಕು ಅಂತ ಯಾವ ಕ್ಷಣದಲ್ಲೂ ಅನಿಸಿಲ್ಲ. ನನ್ನ ಮಗ ಈಗ 8ನೇ ಕ್ಲಾಸ್.‌ ಇನ್ನೊಬ್ಬ ವ್ಯಕ್ತಿಯೊಬ್ಬನನ್ನು ನನ್ನ ಜೀವನಕ್ಕೆ ಸೇರಿಸಿಕೊಳ್ಳೋಕೆ ಇಷ್ಟವೂ ಇಲ್ಲ. ನನ್ನ ಮಗನಿಗೆ ಅಪ್ಪನ ಪ್ರೀತಿ ಕೊರತೆಯಿದ್ದರೂ ಕೂಡ, ನಾನು, ನನ್ನ ತಾಯಿ ಪ್ರೀತಿ ಅವನಿಗೆ ಸಿಗ್ತಿದೆ” ಎಂದು ಜಾನ್ವಿ ಹೇಳಿದ್ದಾರೆ.

ಎಲ್ಲೇ ಇದ್ದರೂ ಆರಾಮಾಗಿರಿ!

“ಸಿನಿಮಾ ಅವಕಾಶಗಳಿಗೋಸ್ಕರ ನಾನು ಡಿವೋರ್ಸ್‌ ತಗೊಂಡಿಲ್ಲ. ಮದುವೆಯಿಂದ ನಾನು ಎಷ್ಟು ಅನುಭವಿಸಿದ್ದೀನಿ ಅಂತ ನನಗೆ, ನನ್ನ ಸರ್ಕಲ್‌ನವರಿಗೆ ಗೊತ್ತಿದೆ. ಓರ್ವ ವ್ಯಕ್ತಿ ಸರಿಹೋಗಿಲ್ಲ ಅಂತ ಗೊತ್ತಾದ್ಮೇಲೆ ಅವರಿಂದ ದೂರ ಇರೋದು ಒಳ್ಳೆಯದು. ನಾನು ಈಗ ಆರಾಮಾಗಿದ್ದೀನಿ, ಅವರು ಎಲ್ಲೇ ಇದ್ದರೂ ಕೂಡ ಆರಾಮಾಗಿರಲಿ ಅಂತ ಬಯಸುವೆ” ಎಂದಿದ್ದಾರೆ.

ಗಂಡನಿಗೆ ಮಗು ಇದೆ!

“ನಾನು ಯಾಕೆ ಡಿವೋರ್ಸ್‌ಗೆ ತಗೊಂಡಿದ್ದೀನಿ ಅಂತ ಒಂದು ಟೈಮ್‌ನಲ್ಲಿ ಗೊತ್ತಾಗುತ್ತದೆ. ಆದರೂ ಜನರು ಸುಮ್ಮನಿರದೆ ಕಾಮೆಂಟ್‌ ಮಾಡ್ತಾರೆ ಎನ್ನೋದು ಗೊತ್ತಿದೆ. ನನ್ನ ಹಿತೈಷಿಗಳು ನನ್ನ ಬಟ್ಟೆ ಬಗ್ಗೆ ಕಾಮೆಂಟ್‌ ಮಾಡಿದ್ರೆ ತಗೊಳ್ತೀನಿ, ಚಿಕ್ಕ ಬಟ್ಟೆ ಹಾಕಿ ನಾನು ಗುರುತಿಸಿಕೊಳ್ಳಬೇಕು ಅಂತೇನಿಲ್ಲ. ನನ್ನ ಮಾಜಿ ಗಂಡ ಅವರ ಹೆಂಡ್ತಿ, ಮಗು ಜೊತೆ ಚೆನ್ನಾಗಿದ್ದಾರೆ. ನನ್ನ ಮಾಜಿ ಗಂಡನಿಗೆ ಯಾರೂ ಇಲ್ಲ ಅಂದಾಗ ಅವರು ಬೇರೆಯವರ ಜೊತೆ ಇರೋದರಲ್ಲಿ ತಪ್ಪಿಲ್ಲ. ಆದರೆ ನನಗೆ ಮಗನಿದ್ದಾನೆ, ಅದು ಸಾಕು. ನನಗೆ ಈಗ ಸಿಂಗಲ್‌ ಆಗಿರೋದು ಖುಷಿ” ಎಂದಿದ್ದಾರೆ.

“ನನಗೆ 22 ವರ್ಷಕ್ಕೆ ಮದುವೆಯಾಯ್ತು. ಆಗ ಸಣ್ಣ ವಿಚಾರಕ್ಕೆ ಅಳುತ್ತಿದ್ದೆ. ಈಗ ನಾನು ಅತ್ತರೂ ಕೂಡ ಮುಂದುವರೆಸೋದಿಲ್ಲ. ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡ್ತೀನಿ” ಎಂದಿದ್ದಾರೆ.

ನಿರೂಪಕಿ ಜಾನ್ವಿ ಅವರು ಕನ್ನಡದ ಕೆಲ ಮಾಧ್ಯಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಆ ಬಳಿಕ ʼನನ್ನಮ್ಮ ಸೂಪರ್‌ಸ್ಟಾರ್‌ʼ, ʼಗಿಚ್ಚಿ ಗಿಲಿಗಿಲಿʼ ಶೋನಲ್ಲಿಯೂ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ʼಅಧಿಪತ್ರʼ ಸಿನಿಮಾದಲ್ಲಿಯೂ ನಟಿಸಿದ್ದಾರೆ.

YouTube video player