Asianet Suvarna News Asianet Suvarna News

Star Kid: ಅಜ್ಜನ ದಾರಿಯಲ್ಲಿ ಕರೀನಾ ಕಪೂರ್‌ ಮಗ, ನೆಟ್‌‌ನಲ್ಲಿ ಬ್ಯಾಟಿಂಗ್‌ ಪ್ರಾಕ್ಟೀಸ್

ತೈಮೂರ್ ಅಲಿ ಖಾನ್.. ಕರೀನಾ ಕಪೂರ್ ಮುದ್ದಿನ ಮಗ ಬಣ್ಣ ಹಚ್ಚುವ ಬದಲು ಬ್ಯಾಟ್ ಹಿಡಿತಾರಾ? ಈಗಿನಿಂದ್ಲೇ ಮಗನಿಗೆ ಅಪ್ಪ ತರಬೇತಿ ಶುರು ಮಾಡಿದ್ದಾರಾ? ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರೋ ಈ ವಿಡಿಯೋ ಇಂಥ ಪ್ರಶ್ನೆ ಹುಟ್ಟುಹಾಕಿದೆ.
 

Saif Ali Khan Son Taimur Playing Cricket In England roo
Author
First Published Jul 2, 2024, 12:58 PM IST

ಸ್ಟಾರ್ ಮಕ್ಕಳು (Star Kids) ಸಿನಿಮಾ ರಂಗಕ್ಕೆ ಬರೋದು ದೊಡ್ಡ ವಿಷ್ಯವಲ್ಲ. ತಮ್ಮ ಬ್ಯಾನರ್ ನಲ್ಲಿಯೇ ಮಕ್ಕಳನ್ನು ಲಾಂಚ್ ಮಾಡುವ ಅನೇಕ ಕಲಾವಿದರಿದ್ದಾರೆ. ಹಾಗಂತ ಅಪ್ಪ –ಅಮ್ಮನ ದಾರಿಯನ್ನು ಎಲ್ಲ ಕಲಾವಿದರ ಮಕ್ಕಳು ಹಿಡಿಯಬೇಕಾಗಿಲ್ಲ. ಕೆಲ ಸೂಪರ್ ಸ್ಟಾರ್ ಮಕ್ಕಳು ತಮ್ಮ ಕ್ಷೇತ್ರವನ್ನು ಬದಲಿಸಿದ್ದಾರೆ. ಈಗ ಪಟೌಡಿ ಕುಟುಂಬದ ಕುಡಿ ಕೂಡ ಅಪ್ಪ – ಅಮ್ಮನ ವೃತ್ತಿ ಬಿಟ್ಟು ಅಜ್ಜನ ವೃತ್ತಿಗೆ ಆಸಕ್ತಿ ತೋರಿದಂತಿದೆ. ಯಸ್ ,ನಾವು ಹೇಳ್ತಿರೋದು ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಮಗ, ಮುದ್ದು ಮುದ್ದಾಗಿರೋ ತೈಮೂರ್ ಅಲಿ ಖಾನ್ ಬಗ್ಗೆ.

ಭಾರತ (India) ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ (Mansoor Ali Khan) ಮೊಮ್ಮಗ ತೈಮೂರ್ ಅಲಿ ಖಾನ್. ಮನ್ಸೂರ್ ಅಲಿ ಖಾನ್ ಹಾಗೂ ಶರ್ಮಿಳಾ ಟ್ಯಾಗೋರ್ ಮಗ ಸೈಫ್ (Saif) ಅಲಿ ಖಾನ್. ಅವರು ತಮ್ಮ ಅಮ್ಮನ ವೃತ್ತಿಯನ್ನು ಆಯ್ಕೆ ಮಾಡಿಕೊಂಡ್ರು. ತಾಯಿ ಶರ್ಮಿಳಾ ನಿರ್ದೇಶನದಲ್ಲಿ  ಅವರು ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನ ಶುರು ಮಾಡಿ ಯಶಸ್ವಿಯಾದ್ರು.  ಸೈಫ್ ಪತ್ನಿ ಕರೀನಾ ಕಪೂರ್ ಖಾನ್ ಕೂಡ ಬಾಲಿವುಡ್ ನ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು. ಆದ್ರೆ ಇವರಿಬ್ಬರ ಮುದ್ದು ಮಗ ತೈಮೂರ್ ಹೊಟ್ಟೆಯಲ್ಲಿದ್ದಾಗ್ಲೇ ಸೆಲೆಬ್ರಿಟಿ. ತೈಮೂರ್ ಎಲ್ಲಿ ಹೋದ್ರೂ ಕ್ಯಾಮರಾ ಅವನ ಹಿಂದೆ ಹೋಗ್ತಿತ್ತು. ಬಾಲ್ಯದಲ್ಲಿಯೇ ಆತ ನಟನೆ ಮಾಡ್ತಾನೆ ಎಂಬ ಸುದ್ದಿಯಿತ್ತು. ಆದ್ರೀಗ ತೈಮೂರ್ ತನ್ನ ಅಜ್ಜ ಮನ್ಸೂರ್ ಅಲಿ  ಹಾದಿಯನ್ನು ಅನುಸರಿಸುತ್ತಿರುವಂತೆ ತೋರುತ್ತಿದೆ. ತೈಮೂರ್ ಅಲಿ ಖಾನ್, ಬ್ಯಾಟಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ನೆಟ್ಸ್‌ನಲ್ಲಿ ತೈಮೂರ್ ಜೊತೆ ತಂದೆ ಸೈಫ್ ಅಲಿ ಕೂಡ ಕಾಣಿಸಿಕೊಂಡಿದ್ದಾರೆ. 

ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್? ಟ್ಯಾಟೂ ಜೊತೆ ಗುಟ್ಟು ಬಿಚ್ಚಿಟ್ರಾ ಕಲ್ಕಿ ನಟಿ?

ಸೈಫ್ ಮತ್ತು ಕರೀನಾ ತಮ್ಮ ಮಕ್ಕಳೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯುತ್ತಾರೆ. ಮಕ್ಕಳೊಂದಿಗೆ ಇಬ್ಬರೂ ಇರುವ ವಿಡಿಯೋಗಳು ಮತ್ತು ಫೋಟೋಗಳು ಆಗಾಗ ವೈರಲ್ ಆಗ್ತಿರುತ್ತವೆ. ಈಗ  ಸೈಫ್ ಅಲಿ ಮಗ ತೈಮೂರ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡುತ್ತಿರುವ ಹೊಸ ವೀಡಿಯೊ ಎಲ್ಲರ ಗಮನ ಸೆಳೆದಿದೆ. 

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ : ಸೈಫ್ ಅಲಿ ಖಾನ್ ಮಗ ತೈಮೂರ್  ನೆಟ್ ಅಭ್ಯಾಸದ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ.  ಇಂಟರ್ನ್ಯಾಷನಲ್ ಕ್ರಿಕೆಟ್ ಮಾಸ್ಟರ್ಸ್ ಯುಕೆ ಇನ್ಸ್ಟಾಗ್ರಾಮ್ ಪುಟದಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ.  ನೆಟ್ ಲಾರ್ಡ್ಸ್‌ನಲ್ಲಿ ತೈಮೂರ್ ಬ್ಯಾಟಿಂಗ್ ಮಾಡ್ತಿರೋದನ್ನು ನೋಡಬಹುದು. ಇದೇ ಪೇಜ್ ನಲ್ಲಿ ತೈಮೂರ್ ಬೌಲಿಂಗ್ ವಿಡಿಯೋವನ್ನು ಕೂಡ ಹಂಚಿಕೊಳ್ಳಲಾಗಿದೆ. 

ತೈಮೂರ್ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. ಮಗನಿಗೆ ಸೈಫ್ ಕೌಂಟಿ ಕ್ರಿಕೆಟ್ ಬಗ್ಗೆ ಮಾಹಿತಿ ನೀಡ್ತಿದ್ದಾರೆ. ಅಲ್ಲದೆ ಮುತ್ತಜ್ಜ ಹಾಗೂ ಅಜ್ಜನ ಕ್ರಿಕೆಟ್ ವೃತ್ತಿ ಬಗ್ಗೆಯೂ ಮಾಹಿತಿ ನೀಡಿದ್ದನ್ನು ನೀವು ನೋಡ್ಬಹುದು. ತೈಮೂರ್ ಮುತ್ತಜ್ಜ ವೋರ್ಸೆಸ್ಟರ್‌ಶೈರ್ ಪರ ಆಡಿದ್ದರೆ ಅಜ್ಜ ಅಂದರೆ ಸೈಫ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಸಸೆಕ್ಸ್ ತಂಡದ ನಾಯಕರಾಗಿದ್ದರು. 

ಹಿಂದಿನಿಂದ ತೆಗೆಯಬೇಡಿ, ಪಾಪ್ಸ್‌ಗೆ ಸೂಚನೆ ನೀಡಿ ಕೈ ಅಡ್ಡ ಹಿಡಿದುಕೊಂಡೇ ನಡೆದ ನಟಿ!

ಇನ್ಸ್ಟಾಗ್ರಾಮ್ ನಲ್ಲಿ ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಸೈಫ್ ಅಲಿ ಖಾನ್ ಮಗನಿಗೆ ಒಳ್ಳೆ ಅಭ್ಯಾಸ ಕಲಿಸ್ತಿದ್ದಾರೆಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಮನ್ಸೂರ್ ಅಲಿ ಖಾನ್ ಭಾರತ ತಂಡದ ನಾಯಕರಾಗಿದ್ದರು. ಅದನ್ನು ಸೈಫ್ ಮರೆತಂತಿದೆ ಎಂದು ಬರೆದಿದ್ದಾರೆ. ಇಷ್ಟೇ ಅಲ್ಲ, ಸೈಫ್ ಬ್ರಿಟಿಷ್ ತಂಡದಲ್ಲಿ ತನ್ನ ಮಗನನ್ನು ಸೇರಿಸುವ ಪ್ರಯತ್ನವನ್ನು ಈಗ್ಲೇ ಶುರು ಮಾಡಿದ್ದಾರೆಂದು ಕಾಲೆಳೆದವರ ಸಂಖ್ಯೆ ಸಾಕಷ್ಟಿದೆ. 

Latest Videos
Follow Us:
Download App:
  • android
  • ios