ಪರ್ಫೆಕ್ಟ್ ಹಬ್ಬದ ಲುಕ್‌ನಲ್ಲಿ ನಟಿ ಸಾಯಿ ಪಲ್ಲವಿ | ವಿರಾಟ ಪರ್ವಂ ಸಿನಿಮಾದಲ್ಲಿ ಪ್ರೇಮಂ ನಟಿಯ ಕ್ಯೂಟ್ ಲುಕ್

ರಾಣಾ ದಗ್ಗುಬಾಟಿಯ ವಿರಾಟ ಪರ್ವಂ ತನ್ನ ವಿಶಿಷ್ಟ ಪ್ರಚಾರದ ವಿಚಾರಗಳೊಂದಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯುಗಾದಿ ಸಂದರ್ಭದಲ್ಲಿ ಸಾಯಿ ಪಲ್ಲವಿಯ ವಿಶೇಷ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Add Asianetnews Kannada as a Preferred SourcegooglePreferred

ಸಾಯಿ ಪಲ್ಲವಿಯನ್ನು ಲಂಗ ದಾವಣಿಯಲ್ಲಿ ಆಕರ್ಷಕ ಹಳ್ಳಿಯ ಹುಡುಗಿಯಾಗಿ ತೋರಿಸಲಾಗಿದೆ. ಅರಿಶಿನವನ್ನು ಬಾಗಿಲಿನ ಚೌಕಟ್ಟಿಗೆ (ತೆಲುಗಿನಲ್ಲಿ ಗಡಾಪ) ದಾರಂದಕ್ಕೆ ಹಚ್ಚುತ್ತಿರುವ ನಟಿ ಸುಂದರ ನಗುವಿನೊಂದಿಗೆ ಕಾಣಿಸಿಕೊಂಡಿದ್ದಾರೆ.

ಆಕಾಶ ಬಣ್ಣದ ಸೀರೆಯಲ್ಲಿ ಸಾಯಿ ಪಲ್ಲವಿ ಕ್ಯೂಟೆಸ್ಟ್ ಲುಕ್

ನಟಿ ಸಹಜ ಸುಂದರಿಯಾಗಿ ಆಹ್ಲಾದಕರವಾಗಿ ಕಾಣಿಸುತ್ತಾಳೆ. ಪೋಸ್ಟರ್ ಹಬ್ಬದ ವಿಶೇಷವಾಗಿದ್ದು ಮತ್ತು ನಟಿ ಈ ಖುಷಿಯ ಸಂದರ್ಭಕ್ಕೆ ಸರಿಹೊಂದುವಂತೆ ಕಾಣಿಸಿದ್ದಾರೆ.

ವಿರಾಟ ಪರ್ವಂ ವೇಣು ಉಡುಗುಲಾ ನಿರ್ದೇಶನದ ಸಿನಿಮಾ. ಕ್ರಾಂತಿಯ ಹಿನ್ನೆಲೆಯಲ್ಲಿ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಸುರೇಶ್ ಬಾಬ್ಬಿಲಿ ಸಂಗೀತ ಸಂಯೋಜಿಸಿದ್ದಾರೆ.