Asianet Suvarna News Asianet Suvarna News

Ramayan: ಬಾಲಿವುಡ್​ಗೆ ಹಾರಿದ ನ್ಯಾಚುರಲ್ ಬ್ಯೂಟಿ: ಸೀತೆ ಪಾತ್ರಕ್ಕೆ ಆಲಿಯಾ ಬದ್ಲು ಸಾಯಿ ಪಲ್ಲವಿ?

ರಾಮಾಯಣ ಚಿತ್ರದಲ್ಲಿ ಸೀತೆಯಾಗಿ ನಟಿ ಆಲಿಯಾ ಭಟ್​ ಬದಲಿಗೆ ನಟಿ ಸಾಯಿ ಪಲ್ಲವಿ ನಟಿಸಲಿರುವುದಾಗಿ ತಿಳಿದುಬಂದಿದ್ದು, ಇದರೊಂದಿಗೆ ಬಾಲಿವುಡ್​ಗೆ ಹಾರಲಿದ್ದಾರೆ ಎನ್ನಲಾಗಿದೆ. 
 

Sai Pallavi To Reportedly Replace Alia Bhatt As Sita in Ramayan suc
Author
First Published Aug 26, 2023, 4:45 PM IST

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್​ ಬ್ಯೂಟಿಯಿಂದಲೇ (Simple Beauty) ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು  ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ  ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು. ಆದರೂ ಅವರು ನಟನೆಯನ್ನು ಮುಂದುವರೆಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವ ನಟರನ್ನು ಸೆಳೆಯುವ ಯಾವುದೇ ಕಮರ್ಷಿಯಲ್ ಚಿತ್ರಗಳಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿಲ್ಲ. ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ಜೀವನದಲ್ಲೂ ವಿಭಿನ್ನರಾಗಿದ್ದಾರೆ.

ಪಾತ್ರ ಹೇಗೇ ಇರಲಿ, ಅದಕ್ಕೆ ಜೀವ ತುಂಬಿ ಲೀಲಾಜಾಲವಾಗಿ ನಟಿಸೋದ್ರಲ್ಲಿ ಎತ್ತಿದ ಕೈ ಇವರದ್ದು. ಇಂಥಾ ಪ್ರತಿಭಾವಂತ ನಟಿ ಗಾರ್ಗಿ ಸಿನಿಮಾಕ್ಕಾಗಿ ಕನ್ನಡವನ್ನೂ ಕಲಿತು ಅಚ್ಚ ತೀರ್ಥಹಳ್ಳಿ ಭಾಷೆಯಲ್ಲಿ ಮಾತಾಡಿದ್ದು ಕನ್ನಡಿಗರನ್ನು ಮಾತ್ರ ಅಲ್ಲ, ದಕ್ಷಿಣ ಭಾರತೀಯ ಚಿತ್ರರಂಗದವರನ್ನೇ ದಂಗಾಗಿಸಿತ್ತು. ಇನ್ನು ನಮ್ಮ ಕನ್ನಡದಲ್ಲಿ ಎಷ್ಟೋ ನಟಿಯರು ಅದೆಷ್ಟೋ ಕಾಲದಿಂದ ಇಂಡಸ್ಟ್ರಿಯಲ್ಲಿದ್ದೂ ಅವರ ಪಾತ್ರಕ್ಕೆ ಮತ್ಯಾರೋ ಡಬ್ಬಿಂಗ್ ಮಾಡ್ತಿದ್ರು. ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡೋದು ಇವರ ವಿಶೇಷತೆ. ಅಷ್ಟೇ ಅಲ್ಲ, ಈ ನಟಿ ಅನುಶ್ರೀ ಶೋನಲ್ಲಿ ರಕ್ಷಿತ್‌ ಶೆಟ್ಟಿ ಹೇಳಿಕೊಟ್ಟ 'ಉಳಿದವರು ಕಂಡಂತೆ' ಸಿನಿಮಾದ 'ಬೋ.. ಮಕ್ಳಾ' ಡೈಲಾಗ್‌ ವೈರಲ್ ಆಗಿತ್ತು. ಇನ್ನೊಂದೆಡೆ ಮಂಸೋರೆ ತಾನು ರಾಣಿ ಅಬ್ಬಕ್ಕ ಬಗ್ಗೆ ಸಿನಿಮಾವೊಂದನ್ನು ಮಾಡುತ್ತಿದ್ದು ಅದಕ್ಕೆ ಸಾಯಿ ಪಲ್ಲವಿ ಅವರನ್ನು ಕರೆಸುವ ಯೋಚನೆ ಇದೆ ಅಂದಿದ್ದರು. 

ವಿಭೂತಿ ತಿನ್ನೋದೆಂದ್ರೆ ತುಂಬಾ ಇಷ್ಟ: ವಿಚಿತ್ರ ಆಹಾರ ಅಭ್ಯಾಸದ ಕುರಿತು ಬಾಯ್ಬಿಟ್ಟ ನಟಿ ಸಾಯಿಪಲ್ಲವಿ!

ಇವೆಲ್ಲಾ ಸುದ್ದಿಗಳು ಈಗ ಹಳತಾಗಿವೆ. ಹೊಸ ವಿಷ್ಯ ಏನಪ್ಪಾ ಎಂದರೆ, ತೆಲಗು, ತಮಿಳು, ಮಲಯಾಳ ಚಿತ್ರಗಳಲ್ಲಿಯೂ ಛಾಪು ಮೂಡಿಸಿರೋ ಈ ದಕ್ಷಿಣದ ಬೆಡಗಿ ಈಗ ಬಾಲಿವುಡ್​ಗೆ (Bollywood) ಹಾರಲಿದ್ದಾರೆ ಎಂಬ ಸುದ್ದಿ ಇದೆ. ರಣಬೀರ್ ಕಪೂರ್​ ಜೊತೆ ನಾಯಕಿಯಾಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.  ಈ ಸುಳಿವನ್ನು ಕೊಟ್ಟವರು ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ. ಅಷ್ಟಕ್ಕೂ ಈ ಚಿತ್ರ ಯಾವುದು ಎಂದರೆ ಕೆಲ ತಿಂಗಳಿನಿಂದ ಸಕತ್​ ಸುದ್ದಿ ಮಾಡುತ್ತಿರುವ ರಾಮಾಯಣ ಚಿತ್ರ.  ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಆಧಾರಿತ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರಂತೆ. ಈ ಚಿತ್ರಕ್ಕೆ ಇದಾಗಲೇ  ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಆಯ್ಕೆಯಾಗಿದ್ದಾರೆ. ಅವರ ನಿಜ ಜೀವನದ ಪತ್ನಿ ಆಲಿಯಾ ಭಟ್​ ಸೀತೆ ಆಗಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತಾದರೂ ಅದಕ್ಕೆ ಅವರು ಒಪ್ಪಲಿಲ್ಲ ಎಂದೂ ವರದಿಯಾಗಿತ್ತು. ಡೇಟ್ ಸಮಸ್ಯೆಯಿಂದ ಆಲಿಯಾ ಭಟ್ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕೊನೆಗೆ ಆಲಿಯಾ ಅವರ ಹೆಸರೇ ಕೇಳಿಬಂದಿತ್ತು. ಆದರೆ ಇದೀಗ ಆಲಿಯಾ ಜಾಗವನ್ನು ಸಾಯಿ ಪಲ್ಲವಿ ತುಂಬಲಿದ್ದಾರೆ ಎನ್ನುವ ಸುದ್ದಿ ಬಂದಿದೆ.
 
 ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಸಾಯಿ ಪಲ್ಲವಿಯನ್ನು (Sai Pallavi) ಸಿನಿಮಾ ಟೀಮ್ ಸಂಪರ್ಕಿಸಿದೆ ಎನ್ನಲಾಗ್ತಿದೆ.  ಯಶ್​ ರಾವಣ ಆಗಲಿದ್ದಾರೆ ಎನ್ನುವ ಸುದ್ದಿಯೂ ಸಕತ್​ ಚರ್ಚೆಯಾಗುತ್ತಿದೆ. ಅಂದಹಾಗೆ ಈ ಚಿತ್ರ  ಇದೇ ವರ್ಷ ಡಿಸೆಂಬರ್​ನಲ್ಲಿ ಆರಂಭವಾಗಲಿದೆ. ಅಷ್ಟಕ್ಕೂ  ರಾಮಾಯಣ ಚಿತ್ರವನ್ನು  ಮೂರು ಭಾಗಗಳಲ್ಲಿ ಸಿದ್ಧಪಡಿಸಲಾಗುತ್ತಿದೆ.  ರಾವಣನ ಪಾತ್ರದಂತೆಯೇ ಸೀತೆ ಮತ್ತು ಹನುಮಂತನ ಪಾತ್ರದ ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ.   

ಮದ್ವೆಯಾಗದೇ ಪ್ರೆಗ್ನೆಂಟ್​ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

Follow Us:
Download App:
  • android
  • ios