ವಿಭೂತಿ ತಿನ್ನೋದೆಂದ್ರೆ ತುಂಬಾ ಇಷ್ಟ: ವಿಚಿತ್ರ ಆಹಾರ ಅಭ್ಯಾಸದ ಕುರಿತು ಬಾಯ್ಬಿಟ್ಟ ನಟಿ ಸಾಯಿಪಲ್ಲವಿ!

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ವಿಚಿತ್ರ ತಿನ್ನುವ ಅಭ್ಯಾಸದ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ ನಟಿಗೆ ಇರುವ ಈ ಅಭ್ಯಾಸವೇನು?
 

Actress Sai Pallavi said that she has a habit of eating Vibhudi suc

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್​ ಬ್ಯೂಟಿಯಿಂದಲೇ (Simple Beauty) ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು  ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ  ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು. ಆದರೂ ಅವರು ನಟನೆಯನ್ನು ಮುಂದುವರೆಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವ ನಟರನ್ನು ಸೆಳೆಯುವ ಯಾವುದೇ ಕಮರ್ಷಿಯಲ್ ಚಿತ್ರಗಳಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿಲ್ಲ. ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ಜೀವನದಲ್ಲೂ ವಿಭಿನ್ನರಾಗಿದ್ದಾರೆ.

ಇತ್ತೀಚೆಗೆ ಅವರ ಒಂದು ವಿಡಿಯೋ ವೈರಲ್​ ಆಗಿತ್ತು.  ಸಾಯಿ ಪಲ್ಲವಿ (Sai Pallavi) ತುಂಬು ಗರ್ಭಿಣಿಯಾಗಿರುವುದಾಗಿ ಕಂಡುಬಂದಿತ್ತು.  ಈ ವಿಡಿಯೋ ನೋಡಿ ಆಕೆಯ ಫ್ಯಾನ್ಸ್​ ತಲೆಕೆಡಿಸಿಕೊಂಡಿದ್ದು, ಇನ್ನೂ ಆ ವಿಡಿಯೋ ಸಕತ್​ ಚರ್ಚೆಯಲ್ಲಿದೆ.  1990ರಲ್ಲಿ ಹುಟ್ಟಿರೋ ನಟಿ ಸಾಯಿ ಪಲ್ಲವಿಗೆ ಈಗ 33 ವರ್ಷದ ಅವಿವಾಹಿತೆ. ಕಳೆದ ವರ್ಷ ಸಾಯಿ ಪಲ್ಲವಿ ಮದುವೆ ತಯಾರಿಯನ್ನು ನಡೆಸಿದ್ದಾರೆ ಎನ್ನುವ ಗಾಳಿ ಸುದ್ದಿ ಸಕತ್​ ಸದ್ದು ಮಾಡಿತ್ತು.  ಮದುವೆ ಮಾಡಿಕೊಳ್ಳಲು ನಟಿ ಸಾಯಿ ಪಲ್ಲವಿ ಸಜ್ಜಾಗಿದ್ದು, ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎಂದೆಲ್ಲಾ ಹೇಳಲಾಗಿತ್ತು. ನಟಿ ಸಾಯಿ ಪಲ್ಲವಿಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರಂತೆ. ಮದುವೆಯಾಗಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರಂತೆ. ಹಾಗಂತ ಈ ಬ್ಯೂಟಿ ಯಾರನ್ನೋ ಲವ್ (Love) ಮಾಡಿಲ್ಲ. ಈಕೆಯದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಹಾಗಾಗಿ ಮನೆಯವರೇ ಸಾಯಿ ಪಲ್ಲವಿಗೆ ತಕ್ಕ ವರನನ್ನು ಹುಡುಕುತ್ತಾ ಇದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಇದ್ಯಾವುದಕ್ಕೂ ತುಟಿಕ್​ ಪಿಟಿಕ್​ ಅಂದಿಲ್ಲ ಈ ಬ್ಯೂಟಿ. ಮದುವೆಯ ಬಗ್ಗೆ ಸಸ್ಪೆನ್ಸ್​ ಆಗಿಯೇ ಇಟ್ಟಿರುವ ನಟಿ, ಈ ಬಗ್ಗೆ ಕೇಳುವ ಪ್ರಶ್ನೆಗೆ ಮೌನದಿಂದಲೇ ಉತ್ತರ ನೀಡುತ್ತಾರೆ. ಆದ್ದರಿಂದ ನಟಿಯ ಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ಫ್ಯಾನ್ಸ್​ಗೆ ಈ ಗರ್ಭಿಣಿ ವಿಡಿಯೋ ನೋಡಿ ಶಾಕ್​ ಆಗಿದೆ.

ಮದ್ವೆಯಾಗದೇ ಪ್ರೆಗ್ನೆಂಟ್​ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

ಇದೀಗ ತಮ್ಮ ವಿಚಿತ್ರ ಗೀಳಿನ ಬಗ್ಗೆ ನಟಿ ಶೇರ್​ ಮಾಡಿಕೊಂಡಿದ್ದಾರೆ. ಅದು ತಮಗಿರುವ ಒಂದು ವಿಚಿತ್ರ ಅಭ್ಯಾಸ ಎಂದು ಅವರು ಹೇಳಿಕೊಂಡಿದ್ದಾರೆ. ತಮಿಳು ಯೂಟ್ಯೂಬ್ ಚಾನೆಲ್​ಗೆ (Youtube Channel)  ಸಂದರ್ಶನದಲ್ಲಿ ಈ ವಿಷಯವನ್ನು ನಟಿ ಬಾಯಿಬಿಟ್ಟಿದ್ದಾರೆ. ಅಷ್ಟಕ್ಕೂ ನಟಿಗೆ ಇರುವ ವಿಚಿತ್ರ ಅಭ್ಯಾಸವೆಂದರೆ  ವಿಭೂತಿ  ತಿನ್ನುವುದರಂತೆ. ತಮಗೆ ವಿಭೂತಿ ಎಂದರೆ ತುಂಬಾ ಇಷ್ಟ ಎಂದಿರುವ ನಟಿ, ಅದನ್ನು ಸದಾ ತಮ್ಮ ಬ್ಯಾಗ್​ನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ತಾವು ತಿನ್ನುವ ವಿಭೂತಿ ಅಂತಿಂಥ ಮಾಮೂಲಿನದ್ದಲ್ಲ ಎಂದೂ ನಟಿ ಹೇಳಿದ್ದಾರೆ.  ಇದು ಸಾಮಾನ್ಯವಾದ ವಿಭೂತಿ ಅಲ್ಲ. ಇದು ವಿಶೇಷ ಮರದಿಂದ ಮಾಡಲ್ಪಟ್ಟಿದೆ ಮತ್ತು ಉತ್ತಮ ರುಚಿಯನ್ನು ಹೊಂದಿದೆ ಎಂದಿದ್ದಾರೆ. 

ಇತ್ತೀಚೆಗೆ ನಟಿ,  ಸುಂದರವಾದ ಪ್ರಕೃತಿಯಲ್ಲಿ ಕಳೆದು ಹೋದ ಚಿತ್ರವನ್ನು ಶೇರ್​ ಮಾಡಿಕೊಂಡಿದ್ದರು.  ಹಳದಿ ಹೂಗಳು ಅರಳಿದ ಸುಂದರವಾದ ಹುಲ್ಲುಗಾವಲಿನ ಮಧ್ಯೆ ತಾವು ಕಳೆದು ಹೋಗಿರುವುದಾಗಿ ಹೇಳಿಕೊಂಡಿದ್ದರು. ಹರಿವ ತೊರೆಯ ಪಕ್ಕದಲ್ಲಿ ಕುಳಿತು ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಿರುವ ಫೋಟೋ ಕೂಡ ಶೇರ್​ ಮಾಡಿಕೊಂಡಿದ್ದರು.  ಮೋಡ ಕವಿದ ವಾತಾವರಣದಲ್ಲಿ ನಟಿ ಮನ್ಸೂನ್ ದಿನಗಳನ್ನು ಆನಂದಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

ಅಮರನಾಥ್ ಯಾತ್ರೆ ಮುಗಿಸಿದ ಸಾಯಿ ಪಲ್ಲವಿ; 60 ವರ್ಷದ ಪೋಷಕರನ್ನು ಕರೆದುಕೊಂಡು ಹೋದ ಅನುಭವ ಬಿಚ್ಚಿಟ್ಟ ನಟಿ

Latest Videos
Follow Us:
Download App:
  • android
  • ios