ಎರಡು ವರ್ಷ ಬ್ರೇಕ್ ತೆಗೆದುಕೊಂಡ ಸಾಯಿ ಪಲ್ಲವಿ....ಅಮರನ್‌ ಚಿತ್ರದ ಫಸ್ಟ್‌ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್...... 

ನಟ ಶಿವಕಾರ್ತಿಕೇಯಾ ಮತ್ತು ನಟಿ ಸಾಯಿ ಪಲ್ಲವಿ ಜೋಡಿಯಾಗಿ ನಟಿಸುತ್ತಿರುವ ಅಮರನ್ ಸಿನಿಮಾ ದೀಪಾವಳಿ ಹಬ್ಬದಂದು ಬಿಡುಗಡೆ ಕಾಣುವ ಸಾಧ್ಯತೆಗಳು ಹೆಚ್ಚಿದೆ. ತಮಿಳು ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇರುವ ಸಿನಿಮಾ ಇದಾಗಿದ್ದು ಸಿನಿಮಾ ಪ್ರಚಾರ ಶುರು ಮಾಡಿದ್ದಾರೆ. ಚಿತ್ರತಂಡ ರಿಲೀಸ್ ಮಾಡಿರುವ ಟೀಸರ್‌ನಲ್ಲಿ ಅಮರನ್ ಪಾತ್ರದ ಬಗ್ಗೆ ಸುಳಿವು ಮತ್ತು ಸಾಯಿ ಪಲ್ಲವಿ ಫಸ್ಟ್‌ ಲುಕ್‌ ರಿವೀಲ್ ಆಗಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಇಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಖತ್ ಬೋಲ್ಡ್‌ ಆಂಡ್ ಅಟ್ರಾಕ್ಟಿವ್‌ ಲುಕ್‌ನಲ್ಲಿ ಪಲ್ಲವಿ ಕಾಣಿಸಿಕೊಂಡಿದ್ದು, ಇವರಿಬ್ಬರ ಕಾಂಬಿನೇಷನ್ ಸೂಪರ್ ಎಂದಿದ್ದಾರೆ ವೀಕ್ಷಕರು.

ಅಮರ್ ಸಿನಿಮಾವನ್ನು ರಾಜ್‌ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದರು, ಶಿವಕಾರ್ತಿಕೇಯ ಪತ್ನಿ ಪಾತ್ರದಲ್ಲಿ ಪಲ್ಲವಿ ಮಿಂಚಲಿದ್ದಾರೆ. ಅಮರನ್ ಸಿನಿಮಾದಲ್ಲಿ ಸೈನಿಕ ಮುಕುಂದ್ ವರದರಾಜನ್‌ ಕಥೆಯನ್ನು ಹೇಳಲು ಮುಂದಾಗಿದ್ದಾರೆ. ತಮಿಳು ನಾಡಿದ ಸೈನಿಕ ತನ್ನ ಫ್ಯಾಮಿಲಿ ಮತ್ತು ಪತ್ನಿಯನ್ನು ಪಕ್ಕಕ್ಕಿಟ್ಟು ದೇಶಕ್ಕೆ ಸೇವೆ ಸಲ್ಲಿಸಿರುವುದರ ಬಗ್ಗೆ ತೋರಿಸಿದ್ದಾರೆ. ಈ ಬ್ರೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಶಿವಕಾರ್ತಿಕೇಯ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. 

ಈ ಅವಕಾಶ ನನ್ನ ಕನಸು ನನಸು ಮಾಡಿದೆ; ಜನರ ಆಶೀರ್ವಾದ ಬೇಡಿ ಭವ್ಯಾ ಗೌಡ ಪೋಸ್ಟ್!

ಧೈರ್ಯದ ಹೆಣ್ಣುಮಕ್ಕಳಿಗೆ ‘ಐ’ ಹಾಡು ಸಮರ್ಪಿಸಿದ ಆಲ್​ ಓಕೆ..!

ತಾಯಿ ಅಥವಾ ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ಅನಾಚಾರಗಳು ನಡೆಯುತ್ತಿವೆ. ಕಾಮುಕರ ಕಣ್ಣು ಹೆಣ್ಣಿನ ಮೇಲೆ ಬಿದ್ದು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ. ಅಂತಹ ದುರುಳರನ್ನು ದೇವಿ ಮಹಿಷಾಸುರನನ್ನು ಸಂಹಾರ ಮಾಡಿದಂತೆ ಸಮಾಜ ಸಂಹಾರ ಮಾಡಬೇಕು ಎಂಬುದನ್ನು ಕನ್ನಡದ ರ‍್ಯಾಪರ್​ ಆಲ್ ​ಓಕೆ ಅದ್ಭುತ ಸಾಲುಗಳನ್ನು ಬರೆದು ತಮ್ಮ ಕಂಠದಾನನಿಂದ ಹಾಡಿದ ಹಾಡನ್ನು ಬಿಡುಗಡೆ ಮಾಡಿದ್ದಾರೆ. ‘ಐ’ ಹೆಸರಿನಲ್ಲಿ ವಿಡಿಯೋ ಹಾಡನ್ನು ಆಲ್​ ಓಕೆ ನಿರ್ಮಿಸಿ ಯುಟ್ಯೂಬ್​ನಲ್ಲಿ ರಿಲೀಸ್​ ಮಾಡಿದ್ದಾರೆ. ಇದರಲ್ಲಿ ನಟಿ ಅಮೃತಾ ಅಯ್ಯಂಗಾರ್​​ ನಟಿಸಿದ್ದು, ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳಂತೆ ಕಾಣಿಸಿಕೊಂಡಿದ್ದಾರೆ. ನಟಿ ಮಾಲಾಶ್ರೀಯವರು ಪೊಲೀಸ್​​ ಪಾತ್ರದಲ್ಲಿ ಬಂದಿದ್ದಾರೆ. 

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ 'ಓವರ್ ಆಕ್ಟಿಂಗ್ ಆಂಟಿ' ಕಿರೀಟ ಪಡೆದ ಯಮುನಾ; ಸುಮ್ನೆ ಬಿಡ್ತೀವಾ ಎಂದ ನೆಟ್ಟಿಗರು!

ಧೂಮ್ 4 ಚಿತ್ರಕ್ಕೆ ನಾಯಕ ಫಿಕ್ಸ್..!

ಬಾಲಿವುಡ್‌ನಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಧೂಮ್ 4. ಇದೀಗ ಧೂಮ್ 4 ಸಿನಿಮಾದ ನಾಯಕ ಯಾರು ಅನ್ನೋ ಗುಟ್ಟು ರಿವಿಲ್ ಆಗಿದೆ. ಧೂಮ್ 4 ಸಿನಿಮಾದಲ್ಲಿ ಹೀರೋ ಆಗಿ ಬಾಲಿವುಡ್ ಹ್ಯಾಂಡ್ಸಮ್ ಹೀರೋ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಇದು ರಣಬೀರ್ ನಾಯಕನಾಗಿ ನಟಿಸುತ್ತಿರೋ 25ನೇ ಸಿನಿಮಾ..