ಗೀತಾ ಸೀರಿಯಲ್ ಮುಗಿದು ಕಾಲಿ ಕೂತಿದ್ದ ಭವ್ಯಾ ಗೌಡ ಪಾಲಾಯ್ತು ಬಿಗ್ ಬಾಸ್ ಆಫರ್. ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲು ಕಾರಣವೇನು? 

ಅಕ್ಟೋಬರ್ 29ರಿಂದ ಬಿಗ್ ಬಾಸ್ ಸೀಸನ್ 11 ಆರಂಭವಾಗಿದೆ, ಪ್ರತಿ ದಿನ ರಾತ್ರಿ 9 ಗಂಟೆಗೆ ಜನರು ಕಲರ್ಸ್ ಕನ್ನಡ ಚಾನೆಲ್‌ ನೋಡಲು ಮಿಸ್ ಮಾಡುವುದಿಲ್ಲ ಏಕೆಂದರೆ 17 ಟಫ್‌ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಮನೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಭವ್ಯಾ ಗೌಡ ನೇರವಾಗಿ ಸ್ವರ್ಗಕ್ಕೆ ಹೋಗಿದ್ದಾರೆ. ತಮ್ಮ ಸ್ವರ್ಗ ಲೋಕಕ್ಕೆ ಯಾರೆಲ್ಲಾ ಬರಬೇಕು ಎಂದು ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ಒಂದೆರಡು ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ. ಭವ್ಯಾ ಗೌಡರಿಗೆ ಈ ಆಫರ್‌ ಕೊಟ್ಟಿರುವುದಕ್ಕೆ ವೀಕ್ಷಕರಿಗೆ ಬೇಸರವಾಗಿದೆ, ಅದೇ ಲಾಯರ್ ಜಗದೀಶ್ ಮತ್ತು ಗೌತಮಿ ಕೊಟ್ಟ ಉತ್ತರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಭವ್ಯಾ ಗೌಡ ಪೋಸ್ಟ್‌: 

'ನಿಮ್ಮ ಮನೆ ಮಗಳು ಭವ್ಯಾ ಅಲಿಯಾಸ್ ಗೀತಾ. ನಾನು ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗುತ್ತೇನೆ ಎಂಬ ಸುದ್ದಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ತುಂಬಾ ಸಂತೋಷಾಗುತ್ತಿದೆ. ಈ ಅದ್ಭುತವಾದ ಅವಕಾಶವನ್ನು ನನ್ನ ಕನಸು ನನಸು ಮಾಡಲು ಮಾಡಿದೆ. ನೀವು ಪ್ರತಿಯಿಬ್ಬರೂ ಯಾವಾಗಲೂ ನನಗೆ ತೋರಿದ ಬೆಂಬಲ ಮತ್ತು ಪ್ರೀತಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನನ್ನ ಈ ಹೊಸ ಬಿಗ್ ಬಾಸ್ ಅಧ್ಯಾಯಕ್ಕೆ ನೀವು ಪ್ರೋತ್ಸಾಹವು ನನಗೆ ತುಂಬಾ ಮುಖ್ಯ. ಈ ಹೊಸ ಅನುಭವದಿಂದ ನಾನು ಖುಷಿ ಜೊತೆಗೆ ಆತಂಕವೂ ಇರಲಿದೆ. ನನ್ನಗೆ ಎದುರಾಗುವ ಚಾಲೆಂಜ್‌ಗಳನ್ನು ಫೇಸ್‌ ಮಾಡಲು ಸಿದ್ಧಳಾಗಿರುವೆ. ನಿಮ್ಮ ಪ್ರೀತಿ ಹಾಗೂ ಬೆಂಬಲ ಹೀಗೆ ಸದಾ ಕಾಲ ನನ್ನ ಮೇಲೆ ಇರಲಿ ಎಂದು ಆಶಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. 

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ 'ಓವರ್ ಆಕ್ಟಿಂಗ್ ಆಂಟಿ' ಕಿರೀಟ ಪಡೆದ ಯಮುನಾ; ಸುಮ್ನೆ ಬಿಡ್ತೀವಾ ಎಂದ ನೆಟ್ಟಿಗರು!

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ ಭವ್ಯಾ ಗೌಡ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮೊದಲ ಮನವಿ ಪೋಸ್ಟ್ ಅಪ್ಲೋಡ್ ಆಗಿದೆ. ಟಿಕ್‌ಟಾಕ್‌ ಮತ್ತು ರೀಲ್ಸ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದ್ದ ಭವ್ಯಾ ಗೌಡ 'ಗೀತಾ' ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಸಾವಿರಾರು ಸಂಚಿಕೆಗಳ ನಂತರ ಸೀರಿಯಲ್ ಮುಗಿದಿದೆ. ಅದಾದ ನಂತರ ಭವ್ಯಾ ಗೌಡ ಯಾವ ಪ್ರಾಜೆಕ್ಟ್‌ಗೂ ಸಹಿ ಹಾಕಿರಲಿಲ್ಲ ಬದಲಿಗೆ ಸಾಕಷ್ಟು ಖಾಸಗಿ ಈವೆಂಟ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಅವಕಾಶ ಗಿಟ್ಟಿಸಿಕೊಳ್ಳಲು ಇದೂ ಒಂದು ಗಿಮಿಕ್ ಎಂದು ನೆಟ್ಟಿಗರು ಈಗ ಕಾಲೆಳೆಯುತ್ತಿದ್ದಾರೆ. 

View post on Instagram