ಇಡೀ ಕುಟುಂಬವನ್ನು ಪ್ರವಾಸಕ್ಕೆ ಕರ್ಕೊಂಡೋದ ಸಾಯಿ ಪಲ್ಲವಿ; ಫೋಟೋ ವೈರಲ್
ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸರಳತೆ ಮತ್ತು ಅದ್ಭುತ ನಟನೆ ಮೂಲಕವೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸರಳ, ಸುಂದರ ಸಾಯಿ ಪಲ್ಲವಿ ಇದೀಗ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ತನ್ನ ಇಡೀ ಕುಟುಂಬವನ್ನು ಸಾಯಿ ಪಲ್ಲವಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸರಳತೆ ಮತ್ತು ಅದ್ಭುತ ನಟನೆ ಮೂಲಕವೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸರಳ, ಸುಂದರ ಸಾಯಿ ಪಲ್ಲವಿ ಇದೀಗ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ತನ್ನ ಇಡೀ ಕುಟುಂಬವನ್ನು ಸಾಯಿ ಪಲ್ಲವಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.
ಅಮ್ಮ, ಅಪ್ಪ, ತಂಗಿ ಸೇರಿದಂತೆ ಸಾಯಿ ಪಲ್ಲವಿ ಇಡೀ ಕುಟುಂಬ ಪ್ರವಾಸ ಎಂಜಾಯ್ ಮಾಡುತ್ತಿದೆ. ಪ್ರೇಮಂ ಸುಂದರಿಯ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿವೆ. ಸಾಯಿ ಪಲ್ಲವಿ ಕಾಮ್ಯರಾಗೆ ಮಸ್ತ್ ಪೋಸ್ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿವೆ.
ಅಂದಹಾಗೆ ಸಾಯಿ ಪಲ್ಲವಿ ಅಮ್ಮನ ಹುಟ್ಟುಹಬ್ಬ ಆಚರಣೆ ಮಾಡಲು ಪ್ರವಾಸಕ್ಕೆ ತರೆಳಿದ್ದಾರೆ. ಪ್ರಕೃತಿಯ ಸುಂದರ ಸ್ಥಳದಲ್ಲಿ ಸಾಯಿ ಸಹೋದರಿಯರು ತಾಯಿಯ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಸುದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರವಾಸಕ್ಕೆ ಹೋಗಿರುವ ಸುಂದರ ಕ್ಷಣದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಾಯಿ ಪಲ್ಲವಿ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಸಾಯಿ ಪಲ್ಲವಿ ತಾಯಿಗೆ ಪ್ರಿತಿಯ ವಿಶ್ ಮಾಡುತ್ತಿದ್ದಾರೆ.
ಸಾಯಿ ಪಲ್ಲವಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಗಾರ್ಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಭಿನಯಕ್ಕೆ ಹೆಚ್ಚು ಒತ್ತುಕೊಡುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ ಪ್ರತಿ ಪಾತ್ರದಲ್ಲೂ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ.
ಸದ್ಯ ಸಾಯಿ ಪಲ್ಲವಿ ಶಿವಕಾರ್ತಿಕೇಯನ್ ಜೊತೆ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಈ ಬಗ್ಗೆ ಶಿವಕಾರ್ತಿಕೇಯನ್ ಟ್ವೀಟ್ ಮಾಡಿ ಸೂಪರ್ ಟ್ಯಾಲೆಂಟ್ ನಟಿ ಜೊತೆ ಅಭಿನಯಿಸಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದರು.
ಶಿವಕಾರ್ತಿಕೇಯನ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಸಾಯಿ ಪಲ್ಲವಿ ನಿಮ್ಮಂತ ಹಾರ್ಟ್ ವರ್ಕರ್ ಜೊತೆ ಕೆಲಸ ಮಾಡಲು ನಾನು ಕೂಡ ಉತ್ಸುಕಳಾಗಿದ್ದೀನಿ ಎಂದು ಹೇಳಿದ್ದರು. ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.