ನಗ್ನತೆ ಪ್ರಚಾರವಲ್ಲ, ಆಯ್ಕೆ ಸ್ವಾತ್ರಂತ್ರ್ಯ; ಬುರ್ಕಾ ಬಿಚ್ಚೆಸೆದು 'ಸೇಕ್ರೆಡ್ ಗೇಮ್' ನಟಿಯ ಬೆತ್ತಲೆ ಪ್ರತಿಭಟನೆ
ನೆಟ್‌ಫ್ಲಿಕ್ಸ್ ಸರಣಿಯ ಸೂಪರ್ ಹಿಟ್ ಸೇಕ್ರೆಡ್ ಗೇಮ್ಸ್‌ನಲ್ಲಿ ನಟಿಸಿದ್ದ ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ ಕ್ಯಾಮರಾ ಮುಂದೆಯೇ ಬಟ್ಟೆ ಬಿಚ್ಚೆಸೆದು ಬೆತ್ತಲಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನೆಟ್‌ಫ್ಲಿಕ್ಸ್ ಸರಣಿಯ ಸೂಪರ್ ಹಿಟ್ ಸೇಕ್ರೆಡ್ ಗೇಮ್ಸ್‌ನಲ್ಲಿ ನಟಿಸಿದ್ದ ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ ಕ್ಯಾಮರಾ ಮುಂದೆಯೇ ಬಟ್ಟೆ ಬಿಚ್ಚೆಸೆದು ಅರೆ ಬೆತ್ತಲಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇರಾನ್‌ನಲ್ಲಿ 'ನೈತಿಕ ಪೋಲೀಸ್' ವಿರುದ್ಧ ಮಹಿಳೆಯರು ಪ್ರತಿಭಟನೆಗಿಳಿದಿದ್ದಾರೆ. ತಮಗೆ ಬೇಕಾದ ಬಟ್ಟೆ ಧರಿಸುವ ಹಕ್ಕನ್ನು ಪ್ರತಿಪಾದಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಕೈ ಜೋಡಿಸಿರುವ ನಟಿ ಎಲ್ನಾಜ್ ಬೆತ್ತಲಾಗುವ ಮೂಲಕ ತಮಗೆ ಬೇಕಾದ ಬಟ್ಟೆ ಧರಿಸುವ ಆಯ್ಕೆ ಇದೆ ಎಂದಿದ್ದಾರೆ.
ನಟಿ ನೊರೌಜಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ, ಮಹಿಳೆಯರಿಗೆ ಏನು ಬೇಕೋ ಅದನ್ನು ಧರಿಸುವ ಸ್ವಾತಂತ್ರ್ಯವಿದೆ. ಯಾರೂ ಅವಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಹಲವಾರು ಪದರಗಳ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲಾಗುವ ಮೂಲಕ ತಾನು ಪ್ರತಿಭಟನೆಗೆ ಸೇರಿಕೊಂಡರು.
ವಿಡಿಯೋ ಜೊತೆಗೆ ನೊರೌಜಿ ದೀರ್ಘವಾದ ಪೋಸ್ಟ್ ಕೂಡ ಶೇರ್ ಮಾಡಿದ್ದಾರೆ. 'ಪ್ರತಿಯೊಬ್ಬ ಮಹಿಳೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಅವಳು ಎಲ್ಲಿಂದಲೇ ಬಂದವಳಾಗಿದ್ದರೂ ತನಗೆ ಬೇಕಾದುದನ್ನು ಮತ್ತು ಯಾವಾಗ ಅಥವಾ ಎಲ್ಲಿ ಬೇಕಾದರೂ ಧರಿಸುವ ಹಕ್ಕು ಹೊಂದಿರಬೇಕು. ಯಾವುದೇ ಪುರುಷ ಅಥವಾ ಯಾವುದೇ ಮಹಿಳೆ ಅವಳನ್ನು ಜಡ್ಜ್ ಮಾಡುವ ಅಥವಾ ಪ್ರಶ್ನಿಸುವ ಹಕ್ಕು ಹೊಂದಿಲ್ಲ' ಎಂದು ಹೇಳಿದರು.
'ಪ್ರತಿಯೊಬ್ಬರೂ ವಿಭಿನ್ನ ದೃಷ್ಟಿಕೋನ ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಅದನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಎಂದರೆ ನಿರ್ಧರಿಸುವ ಶಕ್ತಿ. ಪ್ರತೀ ಮಹಿಳೆ ತನ್ನ ದೇಹದ ಬಗ್ಗೆ ನಿರ್ಧರಿಸುವ ಅಧಿಕಾರ ಹೊಂದಿರಬೇಕು' ಎಂದು ಬರೆದುಕೊಂಡಿದ್ದಾರೆ. ಜೊತೆಗೆ 'ನಾನು ಇಲ್ಲಿ ನಗ್ನತೆ ಪ್ರಚಾರ ಮಾಡುತ್ತಿಲ್ಲ, ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಿದ್ದೇನೆ' ಎಂದು ಹೇಳಿದರು.
ಇರಾನ್ ಹಿಜಾಬ್ ವಿರೋಧಿ ಹೋರಾಟ ಮತ್ತಷ್ಟು ತೀವ್ರ: ಬೀದಿಗಿಳಿದ ವಿದ್ಯಾರ್ಥಿನಿಯರು, ಅಸ್ಕರ್ ಪುರಸ್ಕೃತರು
ಇನ್ನು ಎಲ್ನಾಜ್ ನೋರೌಜಿ ಬಗ್ಗೆ ಹೇಳುವುದಾರೆ, ನಟಿಯಾಗಿ ಗುರುತಿಸಿಕೊಳ್ಳುವ ಮೊದಲು ಮಾಡಲ್ ಆಗಿ ಖ್ಯಾತಿ ಗಳಿಸಿದ್ದರು. 10 ವರ್ಷಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬ್ರಾಂಡ್ ಗಳಿಗೆ ಮಾಡಲ್ ಆಗಿ ಕೆಲಸ ಮಾಡಿದ್ದರು. ಅದ್ಭುತ ಡಾನ್ಸರ್ ಕೂಡ ಹೌದು. ಭಾರತದಲ್ಲಿ ಕಥಕ್ ನೃತ್ಯವನ್ನು ಕಲಿತಿದ್ದಾರೆ.
ಹಿಜಾಬ್ ತೆಗೆದು ಕೂದಲು ಕಟ್ಟಿದ ಯುವತಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗುಂಡಿಕ್ಕಿ ಹತ್ಯೆ!
ಇರಾನಿ ಮಹಿಳೆಯರು, ಮನೆಯಿಂದ ಹೊರಬಂದು ಸಾಧನೆ ಮಾಡಿದವರೂ ಸಹ ಕುಖ್ಯಾತ ಪೊಲೀಸ್ ನೈತಿಕತೆಗೆ ಭಯಪಡುವಂತೆ ಆಗಿದೆ. ಹಾಗಾಗಿ ಬಟ್ಟೆಯ ಆಯ್ಕೆ ಸ್ವಾಸಂತ್ರ್ಯಕ್ಕಾಗಿ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಇರಾನಿನಲ್ಲಿ ಮಹಿಳೆಯರ ಪರಿಸ್ಥಿತಿ ಭೀಕರವಾಗಿದೆ. ತಮ್ಮ ಹಕ್ಕು, ಬದುಕಿಗಾಗಿ ಹೋರಾಡುತ್ತಿದ್ದಾರೆ. ಹಿಜಾಬ್, ಬುರ್ಕಾಗಳನ್ನು ಕಿತ್ತೆಸೆದು ಸುಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಎಲ್ನಾಜ್ ನೊರೌಜಿಯ ವಿಭಿನ್ನ ಪ್ರತಿಭಟನೆ ವಿಶ್ವದ ಗಮನ ಸೆಳೆದಿದೆ.