Asianet Suvarna News Asianet Suvarna News

ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿರುವ ನಟಿ ಸಮಂತಾ: ನಾಗಚೈತನ್ಯ ಮಾಜಿ ಪತ್ನಿಗೆ ಏನಾಗಿದೆ?

ಸಮಂತಾ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಸಮಂತಾ ಚಿಕಿತ್ಸೆಗಾಗಿ ಯುಎಸ್‌ಎಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.

Rumours on Samantha, she will heading to the USA for treatment sgk
Author
First Published Sep 19, 2022, 11:41 AM IST

ದಕ್ಷಿಣ ಭಾರತದ ಖ್ಯಾತ ನಟಿ, ಸೆನ್ಸೇಷನ್ ಸ್ಟಾರ್ ಸಮಂತಾ ಅನಾರೋಗ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿ ವೈರಲ್ ಆಗಿದೆ. ಸೌತ್ ಸುಂದರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಮಾಜಿ ಪತ್ನಿ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದ್ದ ಕಾರಣ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಸಮಂತಾ ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದಾರೆ. ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ತನ್ನ ಬಗ್ಗೆ ಯಾವುದೇ ಅಪ್ ಡೇಟ್ ನೀಡಿಲ್ಲ. ಅನಾರೋಗ್ಯದ ಬಗ್ಗೆ ಸುದ್ದಿ ವೈರಲ್ ಆಗಿದ್ದರು ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಈ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ. 

ಸದ್ಯ ಸಮಂತಾ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಮತ್ತೊಂದು ಅಪ್ ಡೇಟ್ ಕೇಳಿಬರುತ್ತಿದೆ. ಸಮಂತಾ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಹೌದು, ಸಮಂತಾ ಚಿಕಿತ್ಸೆಗಾಗಿ ಯುಎಸ್‌ಎಗೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸಮಂತಾ ಮೊದಲಿನ ಹಾಗೆ ಆಗುವ ವರೆಗೂ ಸಾರ್ವಜಿನಕವಾಗಿ ಕಾಣಿಸಿಕೊಳ್ಳದಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿದ್ದ ಸಮಂತಾ ಸದ್ಯ ಸೈಲೆಂಟ್ ಆಗಿದ್ದಾರಂತೆ.  ಸದಾ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದರು. ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರು. ಆದರೆ ಕೆಲವು ದಿನಗಳಿಂದ ದಿಢೀರ್ ಕಾಣೆಯಾಗಿದ್ದು ಸಾರ್ವಜನಿಕವಾಗಿಯೂ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. 

ಅಷ್ಟಕ್ಕೂ ಸಮಂತಾ ಅವರಿಗೆ ಏನಾಗಿದೆ? ತೆಲುಗಿನ ಕೆಲವು ಮಾಧ್ಯಮಗಳು ವರದಿಮಾಡಿದ ಪ್ರಕಾರ ಸ್ಯಾಮ್ ಚರ್ಮ ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಮೇಕಪ್ ಮಾಡಿಕೊಳ್ಳುವ ಹಾಗಿಲ್ಲ. ಹಾಗಾಗಿ ಸಮಂತಾ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ, ಫೋಟೋಶೂಟ್ ಮಾಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಅನಾರೋಗ್ಯದ ಕಾರಣ ಸಿನಿಮಾ ಕೆಲಸವನ್ನು ರದ್ದು ಗೊಳಿಸಿದ್ದಾರೆ. ಸಮಂತಾ ತೆಲುಗಿನ ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ಆದರೆ ಚಿತ್ರೀಕರಣ ಮುಂದಕ್ಕೆ ಹಾಕಿದ್ದಾರಂತೆ. ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸುತ್ತಿದ್ದಾರೆ. ಆದರೀಗ ಚಿತ್ರೀಕರಣ ಮುಂದಕ್ಕೆ ಹಾಕಿದ್ದಾರೆ ಎನ್ನಲಾಗಿದೆ. 

ಅನಾರೋಗ್ಯದಿಂದ ಬಳಲುತ್ತಿದ್ದಾರಾ ನಾಗಚೈತನ್ಯ ಮಾಜಿ ಪತ್ನಿ? ಅನುಮಾನ ಹೆಚ್ಚಿಸಿದ ಸಮಂತಾ ಸೈಲೆನ್ಸ್

ಇತ್ತೀಚಿಗಷ್ಟೆ, ಅನಾರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕೆಲವು ಯೂಟ್ಯೂಬರ್ಸ್ ವಿರುದ್ಧ ಸಮಂತಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಅನಾರೋಗ್ಯದ ಸುದ್ದಿ ಬಲವಾಗಿ ಕೇಳಿಬರುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ. ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಕೊನೆಯದಾಗಿ ಯಶೋಧ ಸಿನಿಮಾದ ಟೀಸರ್ ಶೇರ್ ಮಾಡಿದ್ದಾರೆ. ಬಳಿಕ ಯಾವುದೇ ಪೋಸ್ಟ್ ಹಾಕಿಲ್ಲ. ದಿನಕ್ಕೊಂದಿಷ್ಟು ಪೋಸ್ಟ್ ಶೇರ್ ಮಾಡುತ್ತಿದ್ದ ಸಮಂತಾ ದಿಢೀರ್ ಸೈಲೆಂಟ್ ಆಗಿರುವುದು ಅಚ್ಚರಿಗೆ ಕಾಣವಾಗಿದೆ. ಸಮಂತಾ ಕಡೆಯಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬರದೆ ಇರುವುದು ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದೆ.

ಬದುಕಲ್ಲಿ ನನಗ್ಯಾಕೆ ಇಷ್ಟು ಅನ್ಯಾಯ ಆಗ್ತಿದೆ?: ಸದ್ಗುರು ಜೊತೆ ಸಮಂತಾ ಬಿಚ್ಚುಮಾತು!

ಸಮಂತಾ ಬಳಿ ಇರುವ ಸಿನಿಮಾಗಳು

ಸಮಂತಾ ಯಶೋಧ ಸಿನಿಮಾ ಜೊತೆಗೆ ಶಾಕುಂತಲಂ, ಖುಷಿ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವಕೊಂಡ ಜೊತೆ ಖುಷಿ ಸಿನಿಮಾ ಮಾಡಿದ್ರೆ ಶಾಕುಂತಂ ನಲ್ಲಿ ಶಾಂಕುಂತಲೆ ಪಾತ್ರ ಮಾಡಿದ್ದಾರೆ. ಇನ್ನು ಹಿಂದಿಯಲ್ಲಿ ಮತ್ತೊಂದು ವೆಬ್ ಸರಣಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಸಮಂತಾ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಸಮಂತಾ ಜೊತೆ ವರುಣ್ ಧವನ್ ನಟಿಸುತ್ತಿದ್ದಾರೆ.   

 
 

Follow Us:
Download App:
  • android
  • ios