ಸೂಪರ್ ಸ್ಟಾರ್ ರಜಿನಿಕಾಂತ್ ಇಂದಿಗೂ ಎಂದೆಂದಿಗೂ ' ಒನ್ ಅಂಡ್ ಒನ್ಲಿ ಸ್ಟಾರ್'. ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಪೂರೈಸಿದ್ದ ರಜನಿಗೆ ಅಭಿಮಾನಿಗಳು #44YrsofUnmatchableRAJINISM ಎಂಬ ಹ್ಯಾಶ್‌ಟ್ಯಾಗ್‌ ಶುರು ಮಾಡಿಕೊಂಡಿದ್ದರು.

ಖಾಕಿ ತೊಟ್ಟು ರಜನಿಕಾಂತ್ 'ದರ್ಬಾರ್' ಶುರು; ಇಲ್ಲಿದೆ ಫೋಟೋಗಳಿವು!

 

ಇನ್ನು ದರ್ಬಾರ್ ಚಿತ್ರದಲ್ಲಿ ಖಾಕಿ ತೊಟ್ಟು ಖಡಕ್‌ ಆಫೀಸರ್ ರೀತಿಯಲ್ಲಿ ಕಾಣಿಸಿಕೊಳ್ಳುವ ರಜನಿ ಲುಕ್‌ಗೆ ಫ್ಯಾನ್ಸ್‌ ಮಾರು ಹೋಗುತ್ತಾರೆ. ಈ ಚಿತ್ರವು ತಮಿಳು,ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ ಹಾಗೂ ಇದರಲ್ಲಿ ರಜನಿಗೆ ನಯನತಾರಾ ಜೋಡಿಯಾಗಿ ಸಾಥ್‌ ನೀಡುತ್ತಿದ್ದಾರೆ.

ರಜಿನಿಕಾಂತ್ 'ದರ್ಬಾರ್'ಗೆ ರಾಜ್‌ ಪುತ್ರ ವಿಲನ್?

 

ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೋಡಿ ಬರುತ್ತಿರುವ ಚಿತ್ರದ ಒಟ್ಟ ಬಜೆಟ್ 250 ಕೋಟಿ ಆಗಿದ್ದು ರಜನಿಕಾಂತ್ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೈ ರ್ಯಾಂಕ್ ಪೊಲೀಸ್‌ ರೀತಿ ಕಾಣಿಸಿಕೊಳ್ಳುತ್ತಿರುವ ರಜನಿಯನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡದ ಪ್ರಕಾರ ಸಂಕ್ರಾಂತಿ ಹಬ್ಬದ ದಿನ ತೆರೆ ಕಾಣಲು ಸಿದ್ಧವಾಗುತ್ತಿದೆ.

2.0 ಹಾಗೂ 'ಪೆಟ್ಟಾ' ಎರಡು ಚಿತ್ರಗಳು ಸೂಪರ್ ಹಿಟ್ ಆಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಹಾಕಿದ ಬಂಡವಾಳವನ್ನು ಪಡೆದುಕೊಂಡಿತ್ತು.