ಕೊರೋನಾ ವೈರಸ್‌ನಿಂದ ಮಾಡಲಾಗಿದ್ದ ಲಾಕ್‌ಡೌನ್‌ ಚಿತ್ರರಂಗವನ್ನು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಸಿದೆ. ಬಿಗ್ ಬಜೆಟ್‌ ಸಿನಿಮಾಗಳ ನಿರ್ಮಾಣ, ಸ್ಟಾರ್ ನಟರ ಸಂಭಾವನೆಯಲ್ಲಿ ಕಡಿತ... ಹೀಗೆಲ್ಲಾ ಸುದ್ದಿ ಕೇಳುತ್ತಿರುವ ಸಮಯದಲ್ಲಿ ಟಾಲಿವುಡ್‌ ಸ್ಟಾರ್ ನಿರ್ದೇಶಕ ಸುಕುಮಾರ್ ಸಂಭಾವನೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಹೆಚ್ಚಾಯ್ತು ಅಲ್ಲು ಅರ್ಜುನ್ ಸಂಭಾವನೆ; ಇದಕ್ಕೆ ಕಾರಣವೇನು ಗೊತ್ತಿದ್ಯಾ?

ಪುಷ್ಪ ನಿರ್ದೇಶಕನ ಸಂಭಾವನೆ:
ಅಲ್ಲು ಅರ್ಜುನ್‌ ಮುಂದಿನ ಸಿನಿಮಾ 'ಪುಷ್ಪ' ತಮಿಳು,ತಲುಗು ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್‌ ಆಗುತ್ತಿದೆ. ಚಿತ್ರದ ನಿರ್ದೇಶಕ ಸುಕುಮಾರ್‌ ಆ್ಯಕ್ಷನ್ ಕಟ್ ಹೇಳಲು ಬರೋಬ್ಬರಿ 20 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿದೆ. ಅಶ್ಚರ್ಯ ಏನೆಂದರೆ ಈ ಸಂಕಷ್ಟದ ಸಮಯದಲ್ಲೂ ಚಿತ್ರ ನಿರ್ದೇಶನಕ್ಕಾಗಿ ಇಷ್ಟೊಂದು  ಡಿಮ್ಯಾಂಡ್‌ ಇಟ್ಟಿರುವುದು. ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಸುಕುಮಾರ್‌ ಅವರಿಗೆ ಲಾಕ್‌ಡೌನ್‌ ಮುನ್ನ 20 ಕೋಟಿ ರೂ. ಸಂಭಾವನೆ ನಿಗದಿ ಮಾಡಿದರು. ಹಾಗೂ ಇದಕ್ಕೆ ಸಂಬಂಧಿಸಿದ ಕೆಲವು ಪೇಪರ್‌ಗಳನ್ನು ಸಹಿ ಮಾಡಿದ ಕಾರಣಕ್ಕೆ ಈಗಲೂ ಸಂಭಾವನೆ ಕೊಡಲು ಒಪ್ಪಿಕೊಂಡಿದ್ದಾರೆ, ಎಂದು  ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಲ್ಲು ಸಂಭಾವನೆ?
ನಿರ್ದೇಶಕ ಸುಕುಮಾರ್‌ಗೆ ಇಷ್ಟೊಂದು ಸಂಭಾವನೆ ನೀಡುತ್ತಿರುವ ಮೈತ್ರಿ ಸಂಸ್ಥೆ ಅಲ್ಲು ಅರ್ಜುನ್‌ಗೆ ಎಷ್ಟು ನೀಡುತ್ತಿದೆ ಎಂಬ ಚರ್ಚೆಯೂ ಶುರುವಾಗಿದೆ. ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲವಾದರೂ ಅಲ್ಲುಗೆ ಬರೋಬ್ಬರಿ 35 ಕೋಟಿ ರೂ. ನೀಡಲಾಗುತ್ತಿದೆಯಂತೆ. 'ಅಲ್ಲೈ ವೈಕುಂಠಪುರಂಲೋ' ಚಿತ್ರಕ್ಕೆ 25 ಕೋಟಿ  ರೂ.ಪಡೆದುಕೊಂಡಿದ್ದು,  ಸಿನಿಮಾ ಸೂಪರ್‌ ಹಿಟ್‌ ಆದ ಕಾರಣ ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್ 'ಪುಷ್ಪ'ದ ಒಂದು ಫೈಟಿಂಗ್‌ ಸೀನ್‌ಗೆ 6 ಕೋಟಿ?

ಚಿತ್ರದಲ್ಲಿ ಕನ್ನಡ ನಟ ಡಾಲಿ ಧನಂಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಮಾತುಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಪರಭಾಷೆಯಲ್ಲಿ ನಮ್ಮ ಕನ್ನಡಿಗರು ಮಿಂಚುತ್ತಿರುವುದು ನಮ್ಮ ಹೆಮ್ಮೆ.