ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಡಿನ್ನರ್; ವಿಡಿಯೋ ವೈರಲ್
ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ನಟಿ ತಮನ್ನಾ ಡಿನ್ನರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ತಮನ್ನಾ ಇತ್ತೀಚೆಗೆ ಪ್ರೀತಿ, ಪ್ರೇಮದ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದ್ದಾರೆ. ಮಿಲ್ಕಿ ಬ್ಯೂಟಿ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್‌ನಲ್ಲಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇಬ್ಬರೂ ಪ್ರೀತಿ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ. ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವಿಜಯ್ ವರ್ಮ ಬಹಿರಂಗ ಪಡಿಸಿದ್ದರು. ಇಬ್ಬರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ, ಪಾಪರಾಜಿಗಳ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ.
ಇದೀಗ ಇಬ್ಬರೂ ಡಿನ್ನರ್‌ಗೆ ಹಾಜರಾಗುವ ಮೂಲಕ ತಮ್ಮ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ. ಇಬ್ಬರೂ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲಿ ಬಂದ ತಮನ್ನ ಮತ್ತು ವಿಜಯ್ ವರ್ಮಾ ಇಬ್ಬರೂ ಪಾಪರಾಜಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ನಗು ಬೀರುತ್ತಾ ಒಟ್ಟಿಗೆ ಕಾರಿನಲ್ಲಿ ಹೊರಟರು. ವಿಜಯ್ ವರ್ಮಾ ಕಾರು ಚಲಾಯಿಸುತ್ತಿದ್ದರೆ ತಮನ್ನಾ ಪಕ್ಕದಲ್ಲಿ ಕುಳಿತಿದ್ದರು.
ತಮನ್ನಾ ಮತ್ತು ವಿಜಯ್ ವರ್ಮಾ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ವಾವ್.. ಇದು ಅನಿರೀಕ್ಷಿತ..' ಎಂದು ನೆಟ್ಟಿಗರು ಹೇಳಿದ್ರೆ ಮತ್ತೋರ್ವ ಕಾಮೆಂಟ್ ಮಾಡಿ, 'ಬೆಸ್ಟ್ ಪೇರ್..' ಎಂದು ಹೇಳುತ್ತಿದ್ದಾರೆ. ಇಬ್ಬರು ಕಾಮೆಂಟ್ ಮಾಡಿ, 'ಎಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ' ಎಂದು ಹೇಳಿದ್ದಾರೆ. 'ಇಬ್ಬರಿಗೂ ಗುಡ್ ಟೇಸ್ಟ್' ಎಂದು ಹೇಳಿದ್ದಾರೆ
Liplock ಮಾಡಿ ಪೇಚಿಗೆ ಸಿಲುಕಿದ ನಟಿ ತಮನ್ನಾ ಭಾಟಿಯಾ
ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತಮನ್ನಾ
ಇತ್ತೀಚೆಗಷ್ಟೆ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದ ನಟಿ ತಮನ್ನಾ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದರು. 'ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ' ಎಂದು ಹೇಳಿದ್ದರು.
ತಮನ್ನಾಗೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಇಟ್ಟ ಕ್ಯೂಟ್ ನಿಕ್‌ನೇಮ್ ಏನು?
ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಲಸ್ಟ್ ಸ್ಟೋರಿ -2 ಸಿನಿಮಾ ಸೆಟ್ ನಲ್ಲಿ ಮೊದಲು ಭೇಟಿಯಾದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿದೆ. ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಬೋಲ ಶಂಕರ್, ಗುರ್ತುಂದ ಸೀತಕಲಂ, ರಜನಿಕಾಂತ್ ಜೊತೆ ಜೈಲರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.