ತಮನ್ನಾಗೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಇಟ್ಟ ಕ್ಯೂಟ್ ನಿಕ್‌ನೇಮ್ ಏನು?
ನಟಿ ತಮನ್ನಾ ಭಾಟಿಯಾಗೆ ಕ್ಯೂಟ್ ನಿಕ್‌ನೇಮ್ ಇಟ್ಟಿದ್ದಾರೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ.
ನಟಿ ತಮನ್ನಾ ಇತ್ತೀಚೆಗೆ ಪ್ರೀತಿ, ಪ್ರೇಮದ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದ್ದಾರೆ. ಮಿಲ್ಕಿ ಬ್ಯೂಟಿ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿದೆ. ಇಬ್ಬರೂ ಪ್ರೀತಿ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ. ಪ್ರೇಮಿಗಳ ದಿನಾಚರಣೆ ದಿನ ವಿಜಯ್ ವರ್ಮ ಶೇರ್ ಮಾಡಿರುವ ಫೋಟೋ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ರಾ ಎನ್ನುವ ಅನುಮಾನ ವ್ಯಕ್ತವಾಗಿತ್ತು. ವಿಜಯ್ ವರ್ಮಾ ಇಬ್ಬರ ಕಾಲಿನ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಯಾರ ಹೆಸರನ್ನು ವಿಜಯ್ ವರ್ಮಾ ಹೇಳಿರಲಿಲ್ಲ. ಆದರೆ ಅಭಿಮಾನಿಗಳು ಇದು ಪಕ್ಕಾ ತಮನ್ನಾ ಅವರೇ ಎಂದು ಕಂಡುಹಿಡಿದ್ದರು. ಹೀಗೆ ಇಬ್ಬರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ವಿಜಯ್ ವರ್ಮಾ ಮತ್ತೊಂದು ಫೋಟೋ ಶೇರ್ ಮಾಡಿ ತಮನ್ನಾ ನಿಕ್‌ನೇಮ್ ರಿವೀಲ್ ಮಾಡಿದ್ದಾರೆ. ತಮನ್ನಾ ಪೋಸ್ಟ್ ಶೇರ್ ಮಾಡಿ ಕ್ಯೂಟ್ ನಿಮ್‌ನೇಮ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ವಿಜಯ್ ತನ್ನ ಪ್ರೇಯಸಿ ತಮನ್ನಾರನ್ನು ಪ್ರೀತಿಯಿಂದ ಟೊಮ್ಯಾಟೋ ಎಂದು ಕರೆಯುತ್ತಾರೆ. ವಿಜಯ್ ವರ್ಮಾ ಸದ್ಯ ದಹಾದ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ದಹಾದ್ ಸರಣಿಗಾಗಿ ಇಡೀ ತಂಡ 73 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ. ಈ ಸರಣಿಯನ್ನು ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್ ನಿರ್ದೇಶಿಸಿದ್ದಾರೆ. 73 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು.
ಇದರ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ, 'ನಾವು ಇಲ್ಲಿ ಘರ್ಜಿಸಿದ್ದೇವೆ. ದಹಾದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ಹೇಳಿದ್ದಾರೆ. ವಿಜಯ್ ಶೇರ್ ಮಾಡಿದ್ದ ಫೋಟೋವನ್ನು ತಮನ್ನಾ ಶೇರ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಫೋಟೋ ಹಂಚಿಕೊಂಡು, 'ದಹಾದ್ ತಂಡಕ್ಕೆ ಅಭಿನಂದನೆಗಳು' ಎಂದು ಹೇಳಿದ್ದಾರೆ. ತಮನ್ನಾ ಸ್ಟೇಟಸ್ ಅನ್ನು ವಿಜಯ್ ವರ್ಮಾ ಶೇರ್ ಮಾಡಿ, 'ಧನ್ಯವಾದಗಳು ಟೊಮ್ಯಾಟೋ' ಎಂದು ಹೇಳಿದ್ದಾರೆ.
ಪ್ರೇಮಿಗಳ ದಿನ ವಿಶೇಷ ಫೋಟೋ ಶೇರ್ ಮಾಡಿ ತಮನ್ನಾ ಜೊತೆಗಿನ ಪ್ರೀತಿ ಅಧಿಕೃತಗೊಳಿಸಿದ್ರಾ ವಿಜಯ್ ವರ್ಮಾ?
ಈ ಮೂಲಕ ವಿಜಯ್ ವರ್ಮಾ ತನ್ನ ಗರ್ಲ್ ಫ್ರೆಂಡ್ ತಮನ್ನಾಗೆ ಇಟ್ಟ ಮುದ್ದಾದ ನಿಕ್ ನೇಮ್ ಬಹಿರಂಗ ಪಡಿಸಿದ್ದಾರೆ. ವಿಜಯ್ ವರ್ಮಾ ನಿಕ್ ನೇಮ್ ರಿವೀಲ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮನ್ನಾಗೆ ಟೊಮ್ಯಾಟೋ ಎಂದು ಕರೆಯುತ್ತಿದಾರೆ. ಮಿಲ್ಕಿ ಬ್ಯೂಟಿ ಈಗ ಟೊಮ್ಯಾಟೋ ಎಂದು ಹೇಳುತ್ತಿದ್ದಾರೆ.
ಕನ್ನಡತಿ, ದಕ್ಷಿಣ ಭಾರತೀಯ ಸಿನಿ ರಂಗದ ಖ್ಯಾತ ನಟಿಯ ಬಯೋಪಿಕ್‌ನಲ್ಲಿ ನಟಿ ತಮನ್ನಾ
ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಲಸ್ಟ್ ಸ್ಟೋರಿ -2 ಸಿನಿಮಾ ಸೆಟ್ ನಲ್ಲಿ ಮೊದಲು ಭೇಟಿಯಾಗಿದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿದೆ. ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬೋಲ ಶಂಕರ್. ಗುರ್ತುಂದ ಸೀತಕಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.