ದಕ್ಷಿಣ ಭಾರತದ ಖ್ಯಾತ ನಟಿ ಬಹುಭಾಷೆಯಲ್ಲಿ ಮಿಂಚಿರುವ ನಿತ್ಯಾ ಮೆನನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ನಿತ್ಯ ಮೆನನ್ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.
ದಕ್ಷಿಣ ಭಾರತದ ಖ್ಯಾತ ನಟಿ ಬಹುಭಾಷೆಯಲ್ಲಿ ಮಿಂಚಿರುವ ನಿತ್ಯಾ ಮೆನನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ನಿತ್ಯ ಮೆನನ್ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಕರ್ನಾಟಕ ಮೂಲದ ನಟಿ ನಿತ್ಯಾ ಮೆನನ್ ಖ್ಯಾತಿಗಸಿದ್ದು ಮಲಯಾಳಂ ಮತ್ತು ತೆಲುಗು ಸಿನಿಮಾರಂಗದಲ್ಲಿ.ಅನೇಕ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿತ್ಯಾ ಮೆನನ್ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಆಂಗ್ಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ನಿತ್ಯಾ ಮೆನನ್ ಸದ್ಯ ಯಾವುದೇ ಸಿನಿಮಾಗೆ ಸಹಿ ಮಾಡುತ್ತಿಲ್ಲ, ಮದುವೆಯಾಗುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿತ್ಯಾ ಕಡೆಯಿಂದ ಅಥವಾ ಅವರ ಕುಟುಂಬದ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ನಿತ್ಯಾ ಕೊನೆಯದಾಗಿ ತೆಲಗಿನ ಭೀಮಲಾ ನಾಯಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕಿರುತೆರೆಯ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ನಿತ್ಯಾ ಸದ್ಯದಲ್ಲೇ ಮದುವೆ ಬಗ್ಗೆ ಬ್ರೇಕಿಂಗ್ ಸುದ್ದಿ ನೀಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಅಂದಹಾಗೆ ನಿತ್ಯಾ ಮದುವೆ ಎನ್ನುತ್ತಿದ್ದಂತೆ ಮೈನಾ ಸುಂದರಿಯ ಕೈಹಿಡಿಯುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಮೂಲಗಳ ಪ್ರಕಾರ ಕರ್ನಾಟಕದ ನಟಿ ನಿತ್ಯಾ ಇದೀಗ ಕೇರಳ ಸೊಸೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು ನಿತ್ಯಾ ಮೆನನ್ ಮಲಯಾಳಂ ಖ್ಯಾತ ನಟನ ಕೈಹಿಡಿಯಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಅಭಿಮಾನಿಗಳು ಮಲಯಾಳಂನ ಆ ಹೀರೋ ಯಾರು ಎಂದು ಹುಡುಕುತ್ತಿದ್ದಾರೆ.
ನಿತ್ಯಾ ಮೆನನ್ ಸದ್ಯ 19(1) ಮಲಯಾಳಂ ಸಿನಿಮಾ, ತಮಿಳಿನಲ್ಲಿ ತಿರುಚಿತ್ರಂಬಲಂ ಸಿನಿಮಾವನ್ನು ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ತಮಿಳು ಸ್ಟಾರ್ ಧನುಷ್ ಜತೆ ತೆರೆಹಂಚಿಕೊಂಡಿದ್ದಾರೆ. ಇನ್ನು ಮಲಯಾಳಂನಲ್ಲಿ ಆರಾಮ್ ತಿರುಕಲ್ಪನಾ ಸಿನಿಮಾವನ್ನು ಮುಗಿಸಿದ್ದಾರೆ. ಈ ಮೂರು ಸಿನಿಮಾಗಳ ಬಳಿಕ ನಿತ್ಯಾ ಯಾವುದೇ ಸಿನಿಮಾಗೂ ಸಹಿ ಮಾಡಿಲ್ಲ. ಇನ್ನು ಅನೇಕ ವೆಬ್ ಸೀರಿಸ್ ಗಳಲ್ಲಿಯೂ ನಟಿ ಮಿಂಚಿದ್ದಾರೆ. ಸದ್ಯ ನಿತ್ಯಾ ತೆಲುಗಿನಲ್ಲಿ ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
Nithya Menon ಕೋಟಿಯಲ್ಲಿ ಸಂಭಾವನೆ ಪಡೆದ 'ಮೈನಾ' ಹೋಗಿದ್ದೆಲ್ಲಿಗೆ?
ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದ ನಿತ್ಯಾ ಮೆನನ್ 1998ರಲ್ಲಿ ಬಣ್ಣ ಹಚ್ಚಿದ್ದರು. ಮುನ್ನ ಎನ್ನುವ ಇಂಗ್ಲಿಷ್ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ 7 ಓ ಕ್ಲಾಕ್ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಅಲ್ಲಿಂದ ನಿತ್ಯಾ ಹಿಂದಿರುಗಿ ನೋಡಿದ್ದೇ ಇಲ್ಲ. ಕನ್ನಡದಿಂದ ದಿಢೀರ್ ಮಲಯಾಳಂಗೆ ಹಾರಿದ ನಟಿ ಆಕಾಶ ಗೋಪುರಂ ಸಿನಿಮಾದಲ್ಲಿ ಮಿಂಚಿದರು. ಬಳಿಕ ಮತ್ತೆ ಜೋಷ್ ಸಿನಿಮಾ ಮೂಲಕ ಕನ್ನಡಕ್ಕೆ ವಾಪಾಸ್ ಆದರು. ಆ ನಂತರ ನಿತ್ಯಾ ಹೆಚ್ಚಾಗಿ ಮಲಯಾಳಂ ಸಿನಿಮಾರಂಗದಲ್ಲಿ ಬ್ಯುಸಿಯಾದರು.
Pawan Kalyan: ಭೀಮ್ಲಾ ನಾಯಕ್' ನೋಡಿ ಬೇಜಾರಾದ ಆದ ನಿತ್ಯಾ ಮೆನನ್
ದೀರ್ಘ ಸಮಯದ ಬಳಿಕ ಮೈನಾ ಮೂಲಕ ಕನ್ನಡಕ್ಕೆ ವಾಪಾಸ್ ಆದ ನಿತ್ಯಾಗೆ ದೊಡ್ಡ ಮಟ್ಟದ ಹಿಟ್ ತಂದುಕೊಟ್ಟಿತು. ಮೈನಾ ಸಿನಿಮಾದಲ್ಲಿ ಆದಿನಗಳು ಚೇತನ್ ನಾಯಕತನಾಗಿ ಮಿಂಚಿದ್ದರು. ಸುದೀಪ್ ಕೋಟಿಗೊಬ್ಬ 2 ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಮತ್ತೆ ನಿತ್ಯಾ ಕನ್ನಡಕ್ಕೆ ಬಂದಿಲ್ಲ. ಸದ್ಯ ಮದುವೆ ಸುದ್ದಿ ಮೂಲಕ ಸದ್ದು ಮಾಡುತ್ತಿದ್ದಾರೆ. ನಿಜಕ್ಕೂ ನಿತ್ಯಾ ಹಸೆಮಣೆ ಏರಲು ಸಜ್ಜಾಗಿದ್ದಾರಾ, ಮಲಯಾಳಂ ಹೀರೋನಾ ಕೈ ಹಿಡಿಯುತ್ತಾರಾ ಎಂದು ಕಾದುನೋಡಬೇಕು.
