ಮುಂಬೈ (ಮಾ. 06): ಕಳೆದ ಹಲವು ದಿನಗಳಿಂದ ಡೇಟಿಂಗ್‌ ಮೂಲಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬಾಲಿವುಡ್‌ ಸ್ಟಾರ್‌ಗಳಾದ ಮಲೈಕಾ ಅರೋರಾ ಹಾಗೂ ಅರ್ಜುನ್‌ ಕಪೂರ್‌ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಭದ್ರಾವತಿ ಹುಡುಗಿ ಆಶಾಭಟ್‌ ಬಾಲಿವುಡ್‌ಗೆ

ಈ ಇಬ್ಬರು ಸ್ಟಾರ್‌ಗಳು ಡೇಟಿಂಗ್‌ ನಡೆಸುತ್ತಿರುವ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ, ಹಲವಾರು ದಿನಗಳಿಂದ ರಾತ್ರಿ ಊಟ, ಇಬ್ಬರೂ ಜತೆಯಾಗಿಯೇ ಮಾಧ್ಯಮಗಳಿಗೆ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಈ ಜೋಡಿ ಮುಂದಿನ ತಿಂಗಳು(ಏಪ್ರಿಲ್‌ನಲ್ಲಿ) ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ ಎಂದು ಹೇಳಲಾಗಿದೆ.

’ಕುರುಕ್ಷೇತ್ರ’ ರಿಲೀಸ್‌ಗೆ ಡೇಟ್ ಪಕ್ಕಾ!

ಅಲ್ಲದೆ, ಈ ಜೋಡಿಯು ಮುಂಬೈನ ಅಂಧೇರಿಯಲ್ಲಿನ ಲೋಖಂಡವಾಲಾ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ ಖರೀದಿಸಿದ್ದು, ಮದುವೆ ನಂತರ ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.