ಆಸ್ಕರ್ ಗೆದ್ದು ಭಾರತಕ್ಕೆ ವಾಪಾಸ್ ಆದ ರಾಮ್ ಚರಣ್‌ ನೋಡಲು ಮುಗಿಬಿದ್ದ ಫ್ಯಾನ್ಸ್

ಆಸ್ಕರ್ ಗೆದ್ದ ಬಳಿಕ ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಭಾರತಕ್ಕೆ ವಾಪಾಸ್ ಆಗಿದ್ದಾರೆ. ದೆಹಲಿಗೆ ಬರುತ್ತಿದ್ದಂತೆ ಅವರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. 

RRR star Ram Charan returs India after Naatu Naatu wins Oscar sgk

ಆಸ್ಕರ್ 2023 ಸಮಾರಂಭದಲ್ಲಿ 'ಆರ್ ಆರ್ ಆರ್' ತಂಡ ಭಾಗಿಯಾಗಿತ್ತು. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ ಗೆದ್ದ ಬಳಿಕ ಜೂ.ಎನ್ ಟಿ ಆರ್ ಈಗಾಗಲೇ ಹೈದಬಾರಾದ್‌ಗೆ  ವಾಪಾಸ್ ಆಗಿದ್ದಾರೆ. ಜೂ.ಎನ್ ಟಿ ಆರ್ ಜೊತೆ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಕೂಡ ಭಾರತಕ್ಕೆ ಮರಳಿದ್ದರು. ಇದೀಗ ರಾಮ್ ಚರಣ್ ದಂಪತಿ ಭಾರತಕ್ಕೆ ಮರಳಿದ್ದಾರೆ. ದೆಹಲಿ ಏರ್ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಆರ್ ಆರ್ ಆರ್ ಸ್ಟಾರ್ ನೋಡಲು ಅಭಿಮಾನಿಗಳು ಮುಗಿಬಿದ್ದಿರು. ರಾಮ್ ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುತ್ತಿಕೊಂಡಿದ್ದರು. 

ರಾಮ್ ಚರಣ್ ಏರ್ಪೋರ್ಟ್ ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅದ್ದೂರಿ ಸ್ವಾಗತಕ್ಕೆ ಕಾದು ನಿಂತಿದ್ದರು. ಅಪಾರ ಸಂಖ್ಯೆಯ ಜನ ರಾಮ್ ಚರಣ್ ಕಾರನ್ನು ಸುತ್ತುವರೆದರು. ರಾಮ್ ಚರಣ್ ಎಂದು ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಾಮ್ ಚರಣ್ ಎಲ್ಲರತ್ತ ಕೈ ಬೀಸಿ ಕಾರಿನಲ್ಲಿ ಸಾಗಿದರು.  ರಾಮ್ ಚರಣ್ ಎಂಟ್ರಿ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಇಬ್ಬರೂ ಬ್ಲ್ಯಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಮುದ್ದು ನಾಯಿ ಕೂಡ ಇರುವುದು ಗಮನ ಸೆಳೆಯುತ್ತಿದೆ. 

ಆಸ್ಕರ್‌ಗೆ ರಾಮ್ ಚರಣ್-ಉಪಾಸನಾ ರೆಡಿಯಾಗಿದ್ದು ಹೇಗೆ? ದೇವರಿಗೆ ನಮಸ್ಕರಿಸಿ ಹೊರಟ ವಿಡಿಯೋ ವೈರಲ್

ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಹೆಮ್ಮೆಯಾಗುತ್ತೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆಸ್ಕರ್ ಅಂಗಳದಲ್ಲಿ ಇಡೀ ಆರ್ ಆರ್ ಆರ್ ತಂಡ ನಡೆದುಕೊಂಡ ರೀತಿ, ಡ್ರೆಸಿಂಗ್ ಸ್ಟೈಲ್ ಪ್ರತಿಯೊಂದು ವಿಚಾರವೂ ಅಭಿಮಾನಿಗಳ ಹೃದಯ ಗೆದ್ದಿದೆ. ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಪತ್ನಿ ರಮಾ ರಾಜಮೌಳಿ, ರಾಮ್ ಚರಣ್ ಪತ್ನಿ ಉಪಾಸನಾ ಸೇರಿದಂತೆ ಎಲ್ಲರೂ ಸೀರೆಯಲ್ಲಿ ಮಿಂಚಿದ್ದು ವಿಶೇಷವಾಗಿತ್ತು. ಆಸ್ಕರ್‌ಗೂ ಮೊದಲು ರಾಮ್ ಚರಣ್ ಮತ್ತು ಉಪಾಸನಾ ದಂಪತಿ ರೆಡಿಯಾದ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿತ್ತು. ರಾಮ್ ದಂಪತಿ ಉಡುಗೆ ಭಾರತವನ್ನು ಪ್ರತಿನಿಧಿಸುತ್ತಿತ್ತು. ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಇಬ್ಬರೂ ಮಿಂಚಿದರು. ರಾಮ್ ಚರಣ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೇ ಉಪಾಸನಾ ಕ್ಲಾಸಿಕ್ ಬಿಳಿ ಬಣ್ಣದ ಸಿಲ್ಕ್ ಸೀರೆ ಧರಿಸಿದ್ದರು.

ಆಸ್ಕರ್ ಗೆದ್ದ ಬಳಿಕ ಹೈದರಾಬಾದ್‌ಗೆ ಬಂದಿಳಿದ ಜೂ.ಎನ್‌ಟಿಆರ್‌ಗೆ ಅದ್ದೂರಿ ಸ್ವಾಗತ; RRR ಸ್ಟಾರ್ ಹೇಳಿದ್ದೇನು?

ಜಾಗತಿನ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಕ್ಕಣ್ಣ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್ ಆರ್ ಆರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಅಲಿಯಾ ಭಟ್, ಅಜಯ್ ದೇವಗನ್ ಕೂಡ ನಟಿಸಿದ್ದಾರೆ. 

Latest Videos
Follow Us:
Download App:
  • android
  • ios