Asianet Suvarna News Asianet Suvarna News

RRR; ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ನಿರ್ದೇಶಕ ರಾಜಮೌಳಿ

ನ್ಯೂಯಾರ್ಕ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್‌ನಲ್ಲಿ RRR ನಿರ್ದೇಶಕ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 

RRR Director SS Rajamouli wins Best Director at New York Film Critics Circle sgk
Author
First Published Dec 3, 2022, 11:35 AM IST

ಟಾಲಿವುಡ್ ಖ್ಯಾತ ನಿರ್ದೇಶಕ ಜಕ್ಕಣ್ಣ ಎಂದೇ ಖ್ಯಾತಿಗಳಿಸಿರುವ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಟಾಲಿವುಡ್ ಸ್ಟಾರ್ ಕಲಾವಿದರಾದ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ನಟನೆಯ ಆರ್ ಆರ್ ಆರ್ ಸಿನಿಮಾ ರಿಲೀಸ್ ಆಗಿ ತಿಂಗಳಗಳೇ ಆಗಿವೆ. ಇನ್ನೂ ಕೂಡ ಆರ್ ಆರ್ ಆರ್ ಸದ್ದು ಮಾಡುತ್ತಿದ್ದಾರೆ. ದೇಶ-ವಿದೇಶದಲ್ಲಿ ರಾಜಮೌಳಿ ಸಿನಿಮಾ ಅಬ್ಬರಿಸುತ್ತಿದೆ. ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದೀಗ ರಾಜಮೌ ಮತ್ತೊಂದು ಪ್ರಶಸ್ತಿ ಗೆದ್ದು ಬೀಗಿದ್ದಾರೆ. ನ್ಯೂಯಾರ್ಕ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್‌ನಲ್ಲಿ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 

ಹಾಲಿವುಡ್‌ನ ಘಟಾನುಘಟಿ ನಿರ್ದೇಶಕರ ಜೊತೆ ಸ್ಪರ್ಧಿಸಿ ರಾಜಮೌಳಿ ಈ ಪ್ರಶಸ್ತಿ ಗೆದ್ದಿದ್ದಾರೆ. ಆರ್ ಆರ್ ಆರ್ ನಿರ್ದೇಶಕರ ವಿರುದ್ಧ ಸ್ವೀವನ್ ಸ್ಪೀಲ್ಬರ್ಗ್, ಡರೆನ್ ಅರೋನೊಫ್ಸ್ಕಿ, ಸರಾ ಪೊಲ್ಲಿ, ಗಿನಾ ಪ್ರಿನ್ಸ್-ಬ್ಲೈಥ್ವುಡ್ ಸ್ಪರ್ಧೆಯಲ್ಲಿದ್ದರು. ಎಲ್ಲರನ್ನೂ ಹಿಂದಿಕ್ಕಿ ರಾಜಮೌಳಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. RRR ಭಾರತೀಯ ಸಿನಿಮಾರಂಗದಲ್ಲಿ ಸದ್ದು ಮಾಡಿದ ಸಿನಿಮಾ. ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವ ಈ ಸಿನಿಮಾ ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು. ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾಗಳ ಲಿಸ್ಟ್‌ನಲ್ಲಿರುವ ಆರ್ ಆರ್ ಆರ್ ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಅನೇಕ ಭಾಷೆಯಲ್ಲಿ ರಿಲೀಸ್ ಆಗಿದೆ. 

ಜೇಮ್ಸ್ ಬಾಂಡ್ ಲುಕ್‌ನಲ್ಲಿ ಮಿಂಚಿದ ಖ್ಯಾತ ನಿರ್ದೇಶಕ ರಾಜಮೌಳಿ; ಏನಿದರ ರಹಸ್ಯ?

ಇತ್ತೀಚಿಗಷ್ಟೆ ಆರ್ ಆರ್ ಆರ್ ಸಿನಿಮಾ ಜಪಾನ್‌ನಲ್ಲಿ ರಿಲೀಸ್ ಆಗಿದ್ದು ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಡೀ ತಂಡ ಜಪಾನ್ ಪ್ರವಾಸಕ್ಕೆ ತೆರಳಿತ್ತು. ಸಿನಿಮಾ ಪ್ರಚಾರ ಮಾಡಿ ಜಪಾನ್ ಅಭಿಮಾನಿಗಳಿಂದ ಪ್ರೀತಿ ಗಿಟ್ಟಿಸಿಕೊಂಡಿದ್ದರು. ಸದ್ಯ ಆರ್ ಆರ್ ಆರ್ ಸಿನಿಮಾ ಆಸ್ಕರ್ ಅವಾರ್ಡ್‌ಗಾಗಿ ಕಾಯುತ್ತಿದೆ. ಆರ್ ಆರ್ ಆರ್ ಸಿನಿಮಾ ಆಸ್ಕರ್‌ಗೆ ಎಂಟ್ರಿ ಕೊಟ್ಟಿದ್ದು ಪ್ರಶಸ್ತಿ ಗೆದ್ದು ಬೀಗುತ್ತಾ ಎಂದು ಕಾದು ನೋಡಬೇಕಿದೆ. 

'RRR'ಸೀಕ್ವೆಲ್ ಕನ್ಫರ್ಮ್; ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಬಿಚ್ಚಿಟ್ಟ ರಾಜಮೌಳಿ

ಸೋಲಿಲ್ಲದ ಸರದಾರ ರಾಜಮೌಳಿ ಬಾಹುಬಲಿ ಸಿನಿಮಾ ಬಳಿಕ ಆರ್ ಆರ್ ಆರ್ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆರ್ ಆರ್ ಆರ್ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಸ್ಸಸ್  ಕಂಡಿತು. ಸ್ವಾತಂತ್ರ್ಯಾ ಹೋರಾಟಗಾರರಾಗಿದ್ದ ಅಲ್ಲೂರಿ ಸೀತರಾಮ ರಾಜು ಮತ್ತು ಕೊಮರಾಮ್ ಭೀಮ್ ಅವರ ಬಗ್ಗೆ ಇರುವ ಸಿನಿಮಾ ಇದಾಗಿದೆ. ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬರೊಬ್ಬರಿ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

Follow Us:
Download App:
  • android
  • ios