Asianet Suvarna News Asianet Suvarna News

ಜೇಮ್ಸ್ ಬಾಂಡ್ ಲುಕ್‌ನಲ್ಲಿ ಮಿಂಚಿದ ಖ್ಯಾತ ನಿರ್ದೇಶಕ ರಾಜಮೌಳಿ; ಏನಿದರ ರಹಸ್ಯ?

ಸದಾ ಡೆನಿಮ್ ಪ್ಯಾಂಟ್, ಟೀ ಶರ್ಟ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದ ನಿರ್ದೇಶಕ ರಾಜಮೌಳಿ ಇದೀಗ ಜೇಮ್ಸ್ ಬಾಂಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

James Bond Look Of Rajamouli and His Son viral on social media sgk
Author
First Published Nov 20, 2022, 5:54 PM IST

ಎಸ್ ಎಸ್ ರಾಜಮೌಳಿ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಭಾರತೀಯ ನಿರ್ದೇಶಕ. ಸೋಲಿಲ್ಲದ ಸರದಾರ ರಾಜಮೌಳಿಯ ಗೆಲುವಿನ ಓಟ ಮುಂದುವರೆದಿದೆ. ಟಾಲಿವುಡ್, ಸೌತ್ ಸಿನಿಮಾರಂಗ, ಬಾಲಿವುಡ್ ಹೀಗೆ ಎಲ್ಲಾ ಗಡಿಗಳನ್ನು ದಾಟಿ ಇದೀಗ ಬಾಹುಬಲಿ ನಿರ್ದೇಶಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿದ್ದಾರೆ. ಬಾಹುಬಲಿ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದ ರಾಜಮೌಳಿ ಆರ್ ಆರ್ ಆರ್ ಸಿನಿಮಾ ಬಳಿಕ ಮತ್ತಷ್ಟು ದುಪ್ಪಟ್ಟಾಯಿತು. ಅಗಾಧ ಪ್ರತಿಭೆಯ ಸರಳ ನಿರ್ದೇಶಕ ರಾಜಮೌಳಿ ಸದಾ ಡೆನಿಮ್ ಪ್ಯಾಂಟ್, ಟೀ ಶರ್ಟ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಜೇಮ್ಸ್ ಬಾಂಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜಮೌಳಿ ಅವರ ಹೊಸ ಗೆಟಪ್ ವೈರಲ್ ಆಗಿದ್ದು ಅಭಿಮಾನಿಗಳಿಂದ ಮೆಚ್ಚಿಗೆಯ ಕಾಮೆಂಟ್ ಹರಿದುಬರುತ್ತಿದೆ.  

ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದರೂ ರಾಜಮೌಳಿ ಸರಳವಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಅವರ ನಿರ್ದೇಶನದ ಜೊತೆಗೆ ಸರಳತೆ ಕೂಡ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಸೂಟ್‌ನಲ್ಲಿ ಮಿಂಚುತ್ತಿರುವ ಮೌಳಿ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಸೂಟು ಬೂಟು ಧರಿಸಿರುವ ರಾಜಮೌಳಿ ಜೊತೆ ಅವರ ಪುತ್ರ ಕಾರ್ತಿಕೇಯ ಕೂಡ ಪೋಸ್ ನೀಡಿದ್ದಾರೆ. ಇಬ್ಬರೂ ಒಂದೇ ರೀತಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇಬ್ಬರೂ ಒಟ್ಟಿಗೆ ಹೀಗೆ ಇಂಗ್ಲಿಷ್ ಉಡುಪಿನಲ್ಲಿ ಪೋಸ್ ನೀಡಿದ್ದು ಯುಎಸ್‌ಎನಲ್ಲಿ. ಅಮೆರಿಕಾದ ಕಾರ್ಯಕ್ರಮವೊಂದರಲ್ಲಿ ರಾಜಮೌಳಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಸೂಪರ್ ಕೂಲ್ ಲುಕ್‌ನಲ್ಲಿ ಮಿಂಚಿದ್ದಾರೆ. ರಾಜಮೌಳಿ ಅವರ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನೋಡಿ ಅಭಿಮಾನಿಗಳು ಜೇಮ್ಸ್ ಬಾಂಡ್ ಎನ್ನುತ್ತಿದ್ದಾರೆ. 

'RRR'ಸೀಕ್ವೆಲ್ ಕನ್ಫರ್ಮ್; ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಬಿಚ್ಚಿಟ್ಟ ರಾಜಮೌಳಿ

ಅಂದಹಾಗೆ ರಾಜಮೌಳಿ ಈ ಪರಿ ತಯಾರಾಗಿ ಅಮೆರಿಕಾಗೆ ಹಾರಿದ್ದು ಗವರ್ನರ್ಸ್ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಗವರ್ನರ್ಸ್ ಅವಾರ್ಡ್ಸ್‌ನಲ್ಲಿ ರಾಜಮೌಳಿ ಹಾಜರಾಗಿದ್ದರು. ಅಂದಹಾಗೆ ಈವೆಂಟ್ ಅನ್ನು ಆಸ್ಕರ್  ಪೂರ್ವ ಕಾರ್ಯಕ್ರಮ ಎಂತನೂ ಕರೆಯುತ್ತಾರೆ. ಅನೇಕ ಸೆಲೆಬ್ರಿಟಿಗಳು ಇಲ್ಲಿ ಗೌರವ ಪ್ರತಿಮೆಗಳನ್ನು ಸ್ವೀಕರಿಸುತ್ತಾರೆ ಮತ್ತು ಅವರ ಉಪಸ್ಥಿತಿ ದೇಶಕ್ಕೆ ಹೆಮ್ಮೆಯಾಗಿದೆ. ಆ ಕಾರ್ಯಕ್ರಮದಲ್ಲಿ ರಾಜಮೌಳಿ ಭಾಗಿಯಾಗಿರುವುದು ವಿಶೇಷ. 

ಅಂದಹಾಗೆ ರಾಜಮೌಳಿ ಆರ್ ಆರ್ ಆರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಅಂದಹಾಗೆ ಈ ಸಿನಿಮಾ ಆಸ್ಕರ್ ಅಂಗಳಕ್ಕೂ ಎಂಟ್ರಿ ಕೊಟ್ಟಿದೆ. ಒಟ್ಟು 13 ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ. ಹಾಗಾಗಿ ಸದ್ಯ ನಡೆದ ಕಾರ್ಯಕ್ರಮದಲ್ಲಿ ರಾಜಮೌಳಿ ಹಾಜರಿ ಪ್ರಮುಖವಾಗಿದೆ. ಆರ್ ಆರ್ ಆರ್ ಸಿನಿಮಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರ ಜೊತೆಗೆ ಹಾಲಿವುಡ್ ಸ್ಟಾರ್ಸ್ ಕೂಡ ಸಿನಿಮಾ ನೋಡಿ ಹೊಗಳಿದ್ದರು.  

ಹೆಚ್ಚು ಶುಲ್ಕ ಪಡೆಯುವುದು ಬಾಲಿವುಡ್‌ ನಿರ್ದೇಶಕರಲ್ಲ; ಹಾಗಾದರೆ ಯಾರು ಈ ಪಟ್ಟಿಯಲ್ಲಿ ಟಾಪ್‌?

ಅಂದಹಾಗೆ ರಾಜಮೌಳಿ ಮುಂದಿನ ಸಿನಿಮಾ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆ ಮಾಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆದರೆ ಯಾವಾಗ ಸೆಟ್ಟೇರಲಿದೆ ಎನ್ನುವ ಬಗ್ಗೆ ಬಹಿರಂಗ ಪಡಿಸಿಲ್ಲ. ಇತ್ತೀಚಿಗಷ್ಟೆ ಈ ಬಗ್ಗೆ ಅಪ್ ಡೇಟ್ ನೀಡಿದ್ದ ರಾಜಮೌಳಿ ತಾನು ಮತ್ತು ತಂದೆ ಈ ಸಿನಿಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದೇವೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಇದು ದೊಡ್ಡ ಅಡ್ವೆಂಚರ್ ಸಿನಿಮಾ ಆಗಲಿದೆ ಎಂದಿದ್ದರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ರಾಜಮೌಳಿ ಅವರ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. 

Follow Us:
Download App:
  • android
  • ios