ಆಲಿಯಾ ಭಟ್ ಫ್ಯಾನ್ಸ್‌ಗೆ ಬರ್ತ್‌ಡೇ ಟ್ರೀಟ್ ಕೊಟ್ಟಿದ್ದಾರೆ. ಅದೇನು ಅಂತೀರಾ...? RRR ಸಿನಿಮಾದಲ್ಲಿ ಅವರ ಫಸ್ಟ್‌ ಲುಕ್. ಇತ್ತೀಚೆಗಷ್ಟೇ ಮುಂಬೈ ಮಾಫಿಯಾ ಕ್ವೀನ್ ಆಗಿ ಕಾಣಿಸ್ಕೊಂಡಿದ್ದ ಆಲಿಯಾ ಅವರ ಈ ಲುಕ್ ನೋಡಿದ್ರೆ ಪರ್ವಾಗಿಲ್ವೇ, ಎಲ್ಲಾ ಪಾತ್ರಕ್ಕೂ ಸೈ ಈಕೆ ಅನಿಸೋದು ಸುಳ್ಳಲ್ಲ.

ಎಸ್‌ಎಸ್‌ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಸೆಟ್‌ಗೆ ನಟಿಯನ್ನು ಸ್ವಾಗತಿಸಿ ಫೋಟೋ ಶೇರ್ ಮಾಡಿದ್ದರು ಬಾಹುಬಲಿ ನಿರ್ದೇಶಕ. ಇದೀಗ ಫಸ್ಟ್ ಲುಕ್ ರೆಡಿಯಾಗಿ ನಿಮ್ಮ ಮುಂದಿದೆ. ಪೋಸ್ಟರ್‌ನಲ್ಲಿ ನಟಿ ಸಿಂಒಲ್ ಆಗಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಹಸಿರು ಸೀರೆ ಉಟ್ಟು ಕುಳಿತ ಆಲಿಯಾ ಕ್ಯಾಮೆರಾದಿಂದ ದೂರ ನೋಡುತ್ತಿದ್ದಾರೆ.

'ಡ್ಯಾನ್ಸ್ ಕಲಿತು ಸೆಟ್‌ಗೆ ಬನ್ನಿ': ಪ್ರಿಯಾಂಕಾಗೆ ಬೈದ ಕೊರಿಯೋಗ್ರಫರ್

ಸ್ವಲ್ಪವೇ ಸ್ವಲ್ಪ ಮೇಕಪ್, ಸುಂದರವಾದ ತಲೆಗೂದಲು, ಸರಳತೆಯ ಸ್ತ್ರೀ ರೂಪವಾಗಿ ಮೂಡಿಬಂದಿದ್ದಾರೆ ಆಲಿಯಾ. ಪೋಸ್ಟರ್ ಶೇರ್ ಮಾಡಿದ ನಟಿ, ಸಿಂಪಲ್ ಆಗಿ ಸೀತಾ ಎಂದು ತಮ್ಮ ಪಾತ್ರದ ಹೆಸರಷ್ಟೇ ಬರೆದಿದ್ದಾರೆ. ಈ ಹೆಸರಿಗೆ ಇನ್ನಷ್ಟು ವಿವರಣೆಯ ಅಗತ್ಯವಿಲ್ಲ, ವಿವರಿಸಿದರೆ ಮುಗಿಯುವುದಿಲ್ಲ ಎಂಬ ಅರ್ಥವೋ.. ಫೋಟೋ ಶೂಟ್‌ನ ಹಿಂದಿನ ಫೋಟೋ ಶೇರ್ ಮಾಡಿದ ನಟಿಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದ್ದರು.

ತ್ರಿಬಲ್ ಆರ್ ಸಿನಿಮಾದಲ್ಲಿ ಅಜಯ್ ದೇವಗನ್, ಚರಣ್ , ಜೂ.ಎನ್‌ಟಿಆರ್ ಕೂಡಾ ಅಭಿನಯಿಸುತ್ತಿದ್ದಾರೆ. ಇದು ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕುರಿತ ಸಿನಿಮಾ. ಇದು ರಾಜಮೌಳಿ ಅವರ ಬಾಹುಬಲಿ ಸಕ್ಸಸ್ ನಂತರದ ಮೊದಲ ಪ್ರಾಜೆಕ್ಟ್ ಎಂಬುದು ವಿಶೇಷ,. ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ.