ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಪುಸ್ತಕ ಅನ್‌ಫಿನಿಶ್ಡ್‌ ರಿಲೀಸ್ ಆದ ಮೇಲೆ ಸುದ್ದಿಯಾಗುತ್ತಲೇ ಇದ್ದಾರೆ. ಕಾರಣ ಆ ಪುಸ್ತಕದಲ್ಲಿ ತಮ್ಮ ಬದುಕಿನ ಬಹಳಷ್ಟು ವಿಚಾರಗಳನ್ನು ನಟಿ ಮುಕ್ತವಾಗಿ ಶೇರ್ ಮಾಡಿಕೊಂಡಿದ್ದಾರೆ.

ಬಾಲ್ಯ, ಶಿಕ್ಷಣ, ವಿಶ್ವಸುಂದರಿಯಾಗಿದ್ದು, ಸಿನಿಮಾ, ಬಾಲಿವುಡ್, ಹಾಲಿವುಡ್ ಹೀಗೆ ಎಲ್ಲ ವಿಚಾರಗಳ ತಮ್ಮ ಬದುಕು, ಸವಾಲು ಎಲ್ಲವನ್ನೂ ಬರೆದಿದ್ದಾರೆ ನಟಿ. ಈ ಪುಸತಕ ಫೆ.09, 2021ರಂದು ಬಿಡುಗಡೆಯಾಗಿತ್ತು. ಸದ್ಯ ನಟಿ ಲಂಡನ್‌ನಲ್ಲಿದ್ದು ಪತಿಯ ಜೊತೆ ಫ್ಯಾಮಿಲಿ ಜೊತೆ ಖುಷಿಯಾಗಿದ್ದಾರೆ.

ಪ್ರಿಯಾಂಕಾರ ಜೊತೆ ರೊಮ್ಯಾನ್ಸ್‌ ಮಾಡಲು ಬಯಸಿ ರಿಜೆಕ್ಟ್‌ ಆದ ದೀಪಿಕಾರ ಎಕ್ಸ್!.

ಒಳ್ಳೆಯದು, ಕೆಟ್ಟದ್ದು, ಅಸಹ್ಯವಾದದ್ದು, ಹೀಗೆ ಬಾಲಿವುಡ್‌ನ ಎಲ್ಲ ಮುಖದ ಪರಿಚಯವನ್ನೂ ನೇರವಾಗಿ ನೋಡಿದ್ದಾರೆ ಪ್ರಿಯಾಂಕ. ಅಂದಾಝ್ ಸಿನಿಮಾ ಸೆಟ್‌ನಲ್ಲಿ ಡ್ಯಾನ್ಸ್ ಕೊರಿಯಾಗ್ರಫರ್ ಒಬ್ಬರು ತಮ್ಮನ್ನು ಹೊರಗೆ ಕರೆದು ಬೈದಿದ್ದನ್ನು ನೆನಪಿಸಿಕೊಂಡಿದ್ದಾರೆ ಪ್ರಿಯಾಂಕ.

ನೀವು ವಿಶ್ವಸುಂದರಿ ಆಗಿದ್ದಕ್ಕೆ ಡ್ಯಾನ್ಸ್ ಕೂಡಾ  ಮಾಡಬಹುದು ಎಂದುಕೊಳ್ಳಬೇಡಿ. ಕೆಲಸಕ್ಕೆ ಬರುವ ಮುನ್ನ ಕೆಲಸ ಕಲಿತುಕೊಳ್ಳಿ ಎಂದಿದ್ದಾರೆ.