Asianet Suvarna News Asianet Suvarna News

ಆತ ಬಿಟ್ಟು ತಮ್ಮನ್ನು ಯಾರು ಟಚ್​ ಮಾಡ್ಬಾರ್ದೆಂದು ಕಿರಿಕ್​ ಮಾಡಿದ್ರಾ ಬಿಂದಾಸ್ ನಟಿ ಹನ್ಸಿಕಾ ಮೋಟ್ವಾನಿ?

ಹನ್ಸಿಕಾ ಮೋಟ್ವಾನಿ ಅವರ ವಿರುದ್ಧ ಹಾಸ್ಯ ನಟ ರೋಬೋ ಶಂಕರ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಏನಿದು ಹೇಳಿಕೆ?
 

Robo Shankar controversial comments on Hansika Motwani I even fell on her feet and begged
Author
First Published Jul 4, 2023, 3:49 PM IST

'ಶಕಲಕಾ ಬೂಮ್ ಬೂಮ್', 'ಕೋಯಿ ಮಿಲ್ ಗಯಾ' ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿರುವ ಹಂಸಿಕಾ ಮೋಟ್ವಾನಿ ಈಗ ಸೌತ್ ಚಿತ್ರರಂಗದ ಪ್ರಮುಖ ನಟಿ. ಕನ್ನಡದಲ್ಲಿ ಹನ್ಸಿಕಾ, ಪುನೀತ್‌ ರಾಜ್‌ಕುಮಾರ್‌ ಜೊತೆ 'ಬಿಂದಾಸ್‌' ಸಿನಿಮಾದಲ್ಲಿ ನಟಿಸಿದ್ದಾರೆ. ಹನ್ಸಿಕಾ ಮೋಟ್ವಾನಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರ ಮನ ಗೆದ್ದವರೀಕೆ. ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಹನ್ಸಿಕಾ. ಇತ್ತೀಚೆಗೆ ಅವರು ಹಾರ್ಮೋನ್ ಇಂಜೆಕ್ಷನ್ (Harmon Injuction) ಕುರಿತಂತೆ ಬಹಳ ಚರ್ಚೆಗೆ ಗ್ರಾಸವಾಗಿದ್ದರು. ಬಾಲಕಿಯಾಗಿರುವಾಗಲೇ ಯುವತಿಯಂತೆ ಕಾಣಲು ಈಕೆ ಹಾರ್ಮೋನ್ ಇಂಜೆಕ್ಷನ್  ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. 31 ವರ್ಷದ  ಹನ್ಸಿಕಾ ಮೋಟ್ವಾನಿ 2007 ರಲ್ಲಿ ಹಿಮೇಶ್ ರೇಶಮಿಯಾ (Himesh Reshmiya) ಅವರ 'ಆಪ್ಕಾ ಸುರೂರ್' ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದಾಗ, ಅವರ ದೈಹಿಕ ರೂಪಾಂತರವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಆಗಲೇ ಗುಸುಗುಸು ಶುರುವಾಗಿತ್ತು. ಸಿನಿಮಾದಲ್ಲಿ ಅವಕಾಶ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಹನ್ಸಿಕಾ ಇಂಜೆಕ್ಷನ್ ಬಳಸಿದ್ದು, ಇದು ನಟಿ ದಿಢೀರ್ ದಪ್ಪಗಾಗಲು ಕಾರಣ ಎನ್ನಲಾಗಿತ್ತು. ಕೊನೆಗೆ ಈ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟು ಇವೆಲ್ಲಾ ಸುಳ್ಳು ಎಂದು ಹೇಳಿದ್ದರು.

ಇಂತಿಪ್ಪ ನಟಿ ಈಗ ಮತ್ತೊಮ್ಮೆ ಸಕತ್​ ಸೌಂಡ್​ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರ ವಿರುದ್ಧ ಕಾಲಿವುಡ್​ ಹಾಸ್ಯ ನಟ ರೋಬೋ ಶಂಕರ್​ ಸಾರ್ವಜನಿಕವಾಗಿ  ಹೇಳಿಕೆ ನೀಡಿದ್ದಾರೆ. ಪಾರ್ಟನರ್​  ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರೋಬೋ ಶಂಕರ್​ ಅವರು ನಟಿ ಹನ್ಸಿಕಾ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಾರ್ಟನರ್​  ಚಿತ್ರದಲ್ಲಿ  ನಾಯಕ ಆದಿ ಎದುರು ನಟಿ ಹನ್ಸಿಕಾ ಮೋಟ್ವಾನಿ (Hansika Motwani) ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ  ಯೋಗಿ ಬಾಬು, ಮುನಿಷ್ಕಾಂತ್, ಜಾನ್ ವಿಜಯ್ ಮತ್ತು ಇತರು ನಟಿಸುತ್ತಿದ್ದಾರೆ.   ಸಿನಿಮಾವನ್ನು ಮನೋಜ್​ ದಾಮೋದರನ್​ ನಿರ್ದೇಶಿಸಿದ್ದಾರೆ. ಇದೇ ತಿಂಗಳಿನಲ್ಲಿಯೇ ಸಿನಿಮಾ ತೆರೆ ಮೇಲೆ ಬರಲಿದೆ ಎನ್ನಲಾಗುತ್ತಿದೆ.

ಮದ್ವೆ ಆದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಹನ್ಸಿಕಾ?

ಈ ನಡುವೆಯೇ ರೋಬೋ ಶಂಕರ್​ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ. ಅವರು ಈ ಹೇಳಿಕೆ ನೀಡಿದ್ದು ಪತ್ರಿಕಾಗೋಷ್ಠಿಯಲ್ಲಿ. ಈ ಪತ್ರಿಕಾಗೋಷ್ಠಿಯಲ್ಲಿ  ರೋಬೋ ಶಂಕರ್ ಜೊತೆ,  ಹನ್ಸಿಕಾ ಕೂಡ ಭಾಗವಹಿಸಿದ್ದರು. ಈ ಚಿತ್ರದ ಚಿತ್ರೀಕರಣದ ಕುರಿತು ಮಾತನಾಡಿದ ರೋಬೋ ಶಂಕರ್​ ಅವರು ತಾವು ಹನ್ಸಿಕಾರ ಜೊತೆ ಒಂದು ದೃಶ್ಯ ಮಾಡುವಾಗ ಆದ ಬೇಸರದ ಅನುಭವವನ್ನು ಹಂಚಿಕೊಂಡಿದ್ದಾರೆ.  'ಹನ್ಸಿಕಾ ಮೊಟ್ವಾನಿ ಅವರು ನಿಜವಾಗಿಯೂ ಮೇಣದ ಬೊಂಬೆಯಂತೆ ಇದ್ದು, ಚಿತ್ರದಲ್ಲಿಯೂ ಅದೇ  ರೀತಿ ಕಾಣಿಸಿಕೊಳ್ಳುತ್ತಾರೆ. ಅವರು  ಮೈದಾ ಹಿಟ್ಟಿನಂತೆ ಬೆಳ್ಳಗೆ ಇದ್ದಾರೆ ಎನ್ನುವುದೂ ನಿಜವೇ. ಆದರೆ   ಚಿತ್ರದಲ್ಲಿ ನಾನು ಹನ್ಸಿಕಾ ಅವರ ಕಾಲನ್ನು ಸ್ಪರ್ಶಿಸುವ ದೃಶ್ಯವಿದೆ. ಆದರೆ ತಮ್ಮ ಪಾದವನ್ನು ಮುಟ್ಟಲು ನೀಡಲಿಲ್ಲ' ಎಂದು ರೋಬೋ ಶಂಕರ್​ ಹೇಳಿದ್ದಾರೆ.

ಆದರೆ ಅವರು ಮುಂದುವರೆದು ಮಾತನಾಡುತ್ತಾ,  ಕೊನೆಯ ಪಕ್ಷ ಹೆಬ್ಬೆರಳನ್ನಾದರೂ ಮುಟ್ಟಲು ಅವಕಾಶ ಕೊಡಿ ಎಂದು ನಾನು ಕೇಳಿದೆ. ನಿರ್ದೇಶಕರೂ ಇದನ್ನೇ ಕೇಳಿದರು. ಆದರೆ ಎಷ್ಟೇ ಬೇಡಿಕೊಂಡರೂ ಅವರು ಅದಕ್ಕೆ ಒಪ್ಪಲಿಲ್ಲ. ನಾಯಕ ಆದಿ ಮಾತ್ರ ತಮ್ಮನ್ನು ಟಚ್​ ಮಾಡಬಹುದು, ಬೇರೆಯವರು ಮಾಡುವಂತಿಲ್ಲ ಎಂದುಬಿಟ್ಟಿರು ಎಂದು ನಡೆದ ಘಟನೆಯನ್ನು ವಿವರಿಸಿದ್ದು, ಇದೀಗ ಸಕತ್​ ಚರ್ಚೆಗೆ ಗ್ರಾಸವಾಗಿದೆ. ರೋಬೋ ಶಂಕರ್​ (Robo Shankar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.  ಹನ್ಸಿಕಾ ಅವರ ವರ್ತನೆಯಿಂದ ನಿರ್ದೇಶಕರ ಜೊತೆಗೆ ಸೆಟ್‌ನಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದರು ಎಂದು ರೋಬೋ ಶಂಕರ್​ ಹೇಳಿದ್ದಾರೆ.  

Hansika Motwani: ಆ ನಟ ಪದೇ ಪದೇ ಅದನ್ನೇ ಕೇಳ್ತಿದ್ದ, ಭಯಾನಕ ಅನುಭವ ಬಿಚ್ಚಿಟ್ಟ ನಟಿ!

Follow Us:
Download App:
  • android
  • ios