ಭಾರತದ ಮಾರುಕಟ್ಟೆಗೆ ರಿತೇಶ್ ದಂಪತಿಯಿಂದ 'ಹೊಸ ಮಾಂಸ ರುಚಿ'
ಆಹಾರ ಜಗತ್ತಿನಲ್ಲಿ ಪ್ರತಿ ದಿನ ಹೊಸ ಹೊಸ ಬದಲಾವಣೆಗಳು ನಡೆಯುತ್ತಲೆ ಇರುತ್ತವೆ. ಅವರವರ ಟೇಸ್ಟ್, ಅವರವರ ಅಭಿರುಚಿ. ಇದೀಗ ಸೆಲೆಬ್ರಿಟಿ ಜೋಡಿಯೊಂದು ಪ್ಲಾಂಟ್ ಆಧಾರಿತ ಮಾಂಸ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ.
ಯುಎಸ್ ಎ ಮತ್ತು ಯುರೋಪ್ ನಲ್ಲಿ ಸಸ್ಯ ಆಧಾರಿತ ಮಾಂಸ ಈಗಾಗಲೇ ಬಹುಮುಖ್ಯ ಸ್ಥಾನ ಪಡೆದುಕೊಂಡಿದೆ.
ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ದಂಪತಿ ಪ್ಲಾಂಟ್ ಬೇಸ್ಡ್ ಮೀಟ್ ಗೆ ಸಂಬಂಧಿಸಿದ ತಮ್ಮ ಕಂಪನಿ ಇಮ್ಯಾಜೀನ್ ಮೀಟ್ಸ್ ಈ ವಾರ ಲೋಕಾರ್ಪಣೆ ಮಾಡಲಿದ್ದಾರೆ.
ದಂಪತಿ ಹೊಸ ಕಂಪನಿ ಆರಂಭಕ್ಕೆ ಸುಮಾರು ಒಂದು ವರ್ಷದಿಂದ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ.
ಭಾರತದ ಮಾರುಕಟ್ಟೆಗೆ ಅನುಗುಣವಾಗಿ ಪ್ಲಾಂಟ್ ಬೇಸಡ್ ಮೀಟ್ ತಯಾರಿಕೆ ಮಾಡುತ್ತಿದ್ದೇವೆ ಎಂದು ದಂಪತಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ವರ್ಷಗಳ ಹಿಂದೆ ನಾವು ಸಸ್ಯಹಾರಿಗಳಾಗಿ ಬದಲಾದೆವು. ಸಸ್ಯಹಾರ ಎಂದರೆ ಆಲೂಗಡ್ಡೆ, ಪನ್ನೀರ್ ಎಂಬುದು ಮಾಮೂಲಾಗಿತ್ತು.
ನಾವು ಮಾಂಸಾಹಾರದ ರುಚಿ ಕಳೆದುಕೊಳ್ಳುತ್ತಿದ್ದೇವೆ ಎನ್ನಿಸಿತು. ಇದೇ ಕಾರಣಕ್ಕೆ ಹೊಸ ಆಲೋಚನೆಯೊಂದಕ್ಕೆ ರೂಪ ಕೊಡಲು ತೀರ್ಮಾನ ಮಾಡಿದೆವು ಎಂದು ಜೆನಿಲಿಯಾ ಹೇಳುತ್ತಾರೆ.
ಕಳೆದ ವರ್ಷ ಯುಎಸ್‌ಎನಲ್ಲಿ ನಡೆದ ಆಹಾರ ಮೇಳಕ್ಕೆ ಹೋದಾಗ ನಮಗೆ ಈ ಐಡಿಯಾ ಬಂತು . ಅಲ್ಲಿಂದ ಸಸ್ಯ ಜನ್ಯ ಮಾಂಸದ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡೆವು ಎಂದು ಹೇಳುತ್ತಾರೆ.
ಸಸ್ಯಹಾರಿಗಳಾಗಿ ಬದಲಾದವರು ಮತ್ತೆ ಮಾಂಸಾಹಾರ ಆರಂಭಿಸುವುದು ಬಹಳ ಸುಲಭ. ವೆಜಿಟೆರಿಯನ್ ಶೈಲಿಯಲ್ಲಿ ನಾನ್ ವೆಜಿಟಿರಿಯನ್ ಫುಡ್ ಆಸ್ವಾದಿಸುದು ಜೆನಿಲಿಯಾ ಅಂಥವರಿಗೆ ಬಹಳ ಸುಲಭವಾಗುತ್ತದೆ ಎಂದು ರಿತೇಶ್ ಹೇಳುತ್ತಾರೆ.
ನಾನು ಪಕ್ಕಾ ಸಸ್ಯಹಾರಿ, ಹಾಗಂತ ಮಾಂಸವನ್ನು ಟ್ರೈ ಮಾಡಿದ್ದೇನೆ. ಚಿಕನ್ ಬಿರಿಯಾನಿ ನನಗೆ ಬಹಳ ಇಷ್ಟ. ನಾವು ಯುಎಸ್‌ಎಗೆ ಹೋದಾಗ ಈ ಸಸ್ಯ ಜನ್ಯ ಮಾಂಸದ ಹೊಸ ಲೋಕವನ್ನು ಕಂಡೆವು ಎಂದು ರಿತೇಶ್ ತಿಳಿಸುತ್ತಾರೆ.
ಸಸ್ಯ ಜನ್ಯದ ಒಂದು ಬರ್ಗರ್ ಅನ್ನು ಜೆನಿಲಿಯಾ ತೆಗೆದುಕೊಂಡರು. ಅದನ್ನು ಟೇಸ್ಟ್ ಮಾಡಿದ ನಂತರ ಮಾಂಸದ ಅಗತ್ಯವೇ ಇಲ್ಲ ಎಂಬ ಸಂಗತಿ ಅರಿವಿಗೆ ಬಂತು.
ಭಾರತದ ರುಚಿಗೆ ಅನುಗುಣವಾಗಿ ಈ ರೀತಿ ಸಸ್ಯಜನ್ಯ ಮಾಂಸ ತಯಾರು ಮಾಡಿದರೆ ಹೇಗೆ ಎಂಬ ಪ್ಲಾನ್ ಸಹ ಅಲ್ಲಿಯೆ ಹೊಳೆಯಿತು.
ನಾವು ಒಂದು ಪಾರ್ಟಿ ಆಯೋಜನೆ ಮಾಡಿ ಅದರಲ್ಲಿ ಸೋಯಾದಿಂದ ತಯಾರಿಸಿದ ಸಸ್ಯಜನ್ಯ ಮಾಂಸವನ್ನೇ ಎಲ್ಲರಿಗೂ ಉಣಬಡಿಸಿದ್ದೇವು. ನಾವು ಹೇಳದೇ ಹೋಗದಿದ್ದರೆ ಅದು ಸಸ್ಯ ಮೂಲದ್ದು ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ.
ನಮ್ಮದು ಅಷ್ಟೊಂದು ಬರ್ಗರ್ ಇಷ್ಟ ಪಡುವ ದೇಶ ಅಲ್ಲ, ಹಾಗಾಗಿ ಬೇರೆ ಖಾದ್ಯ ತಯಾರು ಮಾಡಬೇಕಾಗುತ್ತದೆ.
ನಾವು ಯಾರನ್ನು ಇಲ್ಲಿ ಬದಲಾವಣೆ ಮಾಡಲು ಬಯಸುತ್ತಿಲ್ಲ. ಮಾರುಕಟ್ಟೆಗೆ ಇದೊಂದು ಹೊಸ ಕೊಡುಗೆ ಆಗುತ್ತದೆ. ಅವರ ಆಯ್ಕೆ ಸ್ವಾತಂತ್ರ್ಯ ಅವರಿಗೆ ಇದ್ದೇ ಇರುತ್ತದೆ ಎಂದು ದಂಪತಿ ಹೇಳುತ್ತಾರೆ.