Asianet Suvarna News Asianet Suvarna News

ನಾನು ನಿನ್ನನ್ನು ತೆಕ್ಕೆಗೆ ತೆಗೆದುಕೊಳ್ಳುತ್ತೇನೆ ನೀನೇ ತೀರ್ಮಾನಿಸೆಂದು ಮಂಚಕ್ಕೆ ಕರೆದಾತನಿಗೆ ನಟಿ ಹೇಳಿದ್ದೇನು?

ನಟಿ ಸುಜಾತಾ ಮೆಹ್ತಾ ಅವರು ತಮ್ಮ ವೃತ್ತಿಜೀವನದಲ್ಲಿ ಕಾಸ್ಟಿಂಗ್ ಕೌಚ್‌ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅವರು ಅನೇಕ ಚಲನಚಿತ್ರಗಳನ್ನು ಕಳೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಜನರು ವಿದ್ಯಾವಂತರಾಗಿರುವ ಕಾರಣ ಈಗ ಕಾಲ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

Rishi Kapoor's Co-Star Sujata Mehta Claims She Lost Films Due To Casting Couch gow
Author
First Published Sep 14, 2024, 3:59 PM IST | Last Updated Sep 14, 2024, 11:41 PM IST

ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌, ಮೀಟೂ ಅಭಿಯಾನ ಈ ಹಿಂದಿನಿಂದಲೂ ಇದೆ. ಕೇರಳದ ಹೇಮಾ ಕಮಿಟಿ ಮಾಲಿವುಡ್‌ ಚಿತ್ರರಂಗದಲ್ಲಿ ಆಗಿರುವ ಸತ್ಯಾಸತ್ಯತೆ ವರದಿ ನೀಡಿದ ಬಳಿಕ ಭಾರತದ ಎಲ್ಲಾ ಚಿತ್ರರಂಗದಲ್ಲೂ ಈ ಬಗ್ಗೆ ಧ್ವನಿ ಎತ್ತಲಾಗುತ್ತಿದೆ. ತಮಗಾದ ಕಹಿ ಅನುಭವಗಳನ್ನು ಒಬ್ಬೊಬ್ಬರೇ ಬಿಚ್ಚಿಡುತ್ತಿದ್ದಾರೆ.

ಇದೀಗ ರಿಷಿ ಕಪೂರ್ ಅವರ ಸಾಧನಾ ಚಿತ್ರದಲ್ಲಿ ನಟಿಸಿದ ನಟಿ ಸುಜಾತಾ ಮೆಹ್ತಾ ಅವರು ತಮ್ಮ ವೃತ್ತಿಜೀವನದಲ್ಲಿ ಆದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.  ಬಾಲ ನಟಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಸುಜಾತಾ ನಟನೆ ಪ್ರಾರಂಭಿಸಿದ್ದು ತನ್ನ ಅದೃಷ್ಟ ಎಂದು ಯಾವಾಗಲೂ ನಂಬಿದ್ದರು. ಪ್ರತಿಘಾಟ್, ಯತೀಮ್ ಮತ್ತು ಗುಣಾಹ್‌ನಂತಹ ಕೆಲವು ಪ್ರಮುಖ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.

ಹೆಣ್ಣಿನ ಲೈಂಗಿಕ ಕ್ರಾಂತಿ ಅಂದ್ರೆ ಹಲವು ಲೈಂಗಿಕ ಸಂಬಂಧ ಹೊಂದುವುದಕ್ಕೆ ಸಮ!: ದೇಶಪಾಂಡೆ ವಿವಾದಾತ್ಮಕ ಹೇಳಿಕೆ

ಸುಜಾತಾ ಇತ್ತೀಚೆಗಷ್ಟೇ ಇಂಡಸ್ಟ್ರಿಯಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದು, ಇದು 'ಆಘಾತಕಾರಿ' ಎಂದು ನಂಬಿದರು. ಪ್ರತಿಭಾವಂತಳಾಗಿದ್ದರೂ ಕೆಲಸ ಕಡಿಮೆ ಏಕೆ ಎಂದು ಜನರು ಯಾವಾಗಲೂ ಕೇಳುತ್ತಾರೆ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಈ ಬಗ್ಗೆ ಮಾತನಾಡುತ್ತಾ, "ಕುಚ್ ಲೋಗೋ ನೆ ಮುಜೆ ಆಫರ್ ಕಿಯಾ (ಕೆಲವೊಬ್ಬರು ನನಗೆ ಆಫರ್ ನೀಡಿದರು), ಆದರೆ ನಾನು ಆಸಕ್ತಿ ಹೊಂದಿಲ್ಲ ಎಂದು ಹೇಳಿದೆ. ನಾನು ನಿನ್ನನ್ನು ನನ್ನ ತೆಕ್ಕೆಗೆ ತೆಗೆದುಕೊಳ್ಳುತ್ತೇನೆ. ಏನು ಮಾಡಬೇಕೆಂದು ನೀನೇ ನಿರ್ಧರಿಸು ಎಂದು ನೇರವಾಗಿ ಹೇಳಿದರು. ಅದಕ್ಕೆ ನಾನು 'ಇಲ್ಲ, ನೀನು ನಿನ್ನ ರೆಕ್ಕೆಗಳನ್ನು ಇಟ್ಟುಕೊಂಡು ನಿನಗೆ ಬೇಕಾದಲ್ಲಿ ಎಲ್ಲಿ ಬೇಕಾದರೂ ಹಾರು' ಎಂದು ಹೇಳಿದೆ ಎಂದಿದ್ದಾರೆ.

ತನ್ನ ಚಿಕ್ಕಮ್ಮ ನಾನೇನು ಮಾಡಬೇಕೆಂದು ಯಾವಾಗಲೂ  ನಿರ್ಧಾರ ತೆಗೆದುಕೊಳ್ಳುತ್ತಿದ್ದರು.  ಅವರು ಯಾವಾಗಲೂ ಯಶಸ್ವಿಯಾದ ಇತರ ನಟಿಯರ ಉದಾಹರಣೆಗಳನ್ನು ನೀಡುತ್ತಿದ್ದರು ಎಂದಿದ್ದಾರೆ. ಸುಜಾತಾ ಅವರು ಕಾಸ್ಟಿಂಗ್ ಕೌಚ್‌ನಿಂದಾಗಿ ಅನೇಕ ಚಲನಚಿತ್ರಗಳನ್ನು ಕಳೆದುಕೊಂಡಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

ವಯಸ್ಸಾದಾಗ ಸಹಾಯವಾಗುವ LICಯ ಈ ಪಿಂಚಣಿ ಯೋಜನೆ, ಪ್ರಯೋಜನ ತಿಳಿಯಿರಿ

ಹಲವಾರು ಮಂದಿ ನಟಿಯರು ಪ್ರತಿಭಾವಂತರಾಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಅವರನ್ನು ಬಳಸಿಕೊಂಡಿರಬಹುದು. ಇದಕ್ಕಾಗಿಯೇ ಇವರು ಸ್ಟಾರ್ ಆಗಿದ್ದಾರೆ, ಇಲ್ಲದಿದ್ದರೆ ಇವರರನ್ನುಯಾರು  ಸ್ಟಾರ್ ಮಾಡುತ್ತಿದ್ದರು. ನನಗೆ ಅದೆಲ್ಲ ಇಷ್ಟವಿಲ್ಲ. ನಾನು ಆ ಹಾದಿಯನ್ನು ಹಿಡಿಯಲು ಬಯಸಲಿಲ್ಲ ಎಂದಿದ್ದಾರೆ.

ಸುಜಾತಾ ಅವರು ಮೂಲತಃ ರಾಜೇಶ್ ಖನ್ನಾ ಅವರ ಜೈ ಜೈ ಶಿವ ಶಂಕರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ನಂತರ ಡಿಂಪಲ್ ಕಪಾಡಿಯಾ ಅವರನ್ನು ನಾಯಕಿಯಾಗಿ ಮಾಡಲಾಯ್ತು.   ಖನ್ನಾ  ಮತ್ತು  ಕಪಾಡಿಯಾ ಅವರನ್ನು ಒಂದಾಗುವುದು ಮುಖ್ಯವಾಗಿತ್ತು. ಮಕ್ಕಳು  ಹೆತ್ತವರೊಂದಿಗೆ ಮತ್ತೆ ಸೇರಲು ಬಯಸಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಸುಜಾತ ಅವರಿಗೆ ತಿಳಿಸಲಾಯ್ತು.   ಕೊನೆ ಚಿತ್ರ  ಬಿಡುಗಡೆಯಾಗಲಿಲ್ಲ.

ಪ್ರತಿಯೊಂದು ಉದ್ಯಮದಲ್ಲೂ ಕಾಸ್ಟಿಂಗ್ ಕೌಚ್ ಘಟನೆಗಳು ನಡೆಯುತ್ತವೆ ಮತ್ತು ಅಧಿಕಾರ ಮತ್ತು ಮಹತ್ವಾಕಾಂಕ್ಷೆ ಇದ್ದಾಗ ಅವು ಯಾವಾಗಲೂ ಇರುತ್ತವೆ. ಆದರೆ ಜನರು ವಿದ್ಯಾವಂತರಾಗಿರುವ ಕಾರಣ ಈಗ ಕಾಲ ಬದಲಾಗಿದೆ ಎಂದು ಅವರು ಹೇಳಿದ್ದಾರೆ. ಕೆಲಸದ ಮುಂಭಾಗದಲ್ಲಿ, ಸುಜಾತಾ ಕೊನೆಯದಾಗಿ ಧಾರಾ 370 ಚಿತ್ರದಲ್ಲಿ ಕಾಣಿಸಿಕೊಂಡರು.

Latest Videos
Follow Us:
Download App:
  • android
  • ios