ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಅರೆಸ್ಟ್ ಮಾಡಿದೆ. ನಟಿ ಮುಂಬೈನ ಬೈಕುಲಾ ಮಹಿಳಾ ಜೈಲಿನಲ್ಲಿದ್ದಾರೆ. ನಟಿಗೆ ಜೈಲಿನ ಸೆಲ್‌ನಲ್ಲಿ ಫ್ಯಾನ್, ಪಿಲ್ಲೋ, ಬೆಡ್ ನೀಡಲಾಗಿಲ್ಲ.

ಪುತ್ರಿ ಶಿನಾ ಬೋರಾ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಪಕ್ಕದ ಸೆಲ್‌ನಲ್ಲಿಯೇ ರಿಯಾಳನ್ನು ಇರಿಸಲಾಗಿದೆ. ಭದ್ರತೆ ವಿಚಾರದಿಂದಾಗಿ ನಟಿಯನ್ನು ಒಂಟಿ ಕೋಣೆಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಡ್ರಗ್ಸ್ ಜಾಲದಲ್ಲಿ ಸಿಲುಕಿ ಅರೆಸ್ಟ್ ಆದ ಟಾಪ್ ಸೆಲೆಬ್ರಿಟಿಗಳಿವರು..!

ಸುಶಾಂತ್ ಸಿಂಗ್ ಸಾವಿನ ಪ್ರಮುಖ ಆರೋಪಿ ಎಂದು ಸುದ್ದಿ ಇರುವುದರಿಂದ ಆಕೆ ಮೇಲೆ ಹಲ್ಲೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಶಾಂತ್ ಸಿಂಗ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾಳೆ ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ಆರೋಪಿಸಿದ್ದರು.

ರಿಯಾ, ಆಕೆಯ ಸಹೋದರ ಶೋವಿಕ್ ಸೇರಿ ಐವರನ್ನು ಬಂಧಿಸಲಾಗಿದೆ. ಸುಶಾಂತ್‌ಗೆ ಡ್ರಗ್ಸ್ ಒದಗಿಸುತ್ತಿದ್ದ ಆರೋಪ ರಿಯಾ ಮೇಲಿದೆ. ರಿಯಾಗೆ ಮಲಗಲು ಮ್ಯಾಟ್ ನೀಡಲಾಗಿದ್ದು, ಬೆಡ್ ಅಥವಾ ಪಿಲ್ಲೋ ನೀಡಲಾಗಿಲ್ಲ.

ಡ್ರಗ್ಸ್ ಡೀಲಿಂಗ್: ನಟಿ ರಿಯಾ ಬಾಯ್ಬಿಟ್ಟ 25 ಸೆಲೆಬ್ರಿಗಳ ಹೆಸರು..!

ಕೋರ್ಟ್ ಅನುಮತಿಸಿದರೆ ಆಕೆಗೆ ಟೇಬಲ್ ಫ್ಯಾನ್ ಒದಗಿಸಲಾಗುತ್ತದೆ ಎನ್ನಲಾಗಿದೆ. ಸದ್ಯ ಇಬ್ಬರು ಗಾರ್ಡ್‌ಗಳು ಆಕೆಯ ಕೋಣೆಯನ್ನು 3 ಶಿಫ್ಟ್‌ಗಳಲ್ಲಿ ಕಾವಲು ಕಾಯುತ್ತಿದ್ದಾರೆ.