ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಎನ್‌ಸಿಬಿ ಈಗಾಗಲೇ ನಟನ ಗರ್ಲ್‌ಫ್ರೆಂಡ್ ರಿಯಾಳನ್ನು ವಿಚಾರಣೆ ಮಾಡಿದೆ. ಇಂದು ಮೂರನೇ ದಿನವನ್ನು ನಟಿಯ ವಿಚಾರಣೆಯಲ್ಲಿ ಎನ್‌ಸಿಬಿಗೆ ಹಲವು ಆಘಾತಕಾರಿ ವಿಚಾರಗಳು ತಿಳಿದುಬಂದಿವೆ.

ಇಂದು ಮೂರನೇ ಬಾರಿ ಎನ್‌ಸಿಬಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ವಿಚಾರಣೆ ನಡೆಸಿದೆ. ವಿಚಾರಣೆ ಸಂದರ್ಭ ರಿಯಾ 25 ಸ್ಟಾರ್‌ಗಳ ಹೆಸರು ಹೇಳಿದ್ದಾರೆ. ಸತತವಾಗಿ ಎನ್‌ಸಿಬಿಯಿಂದ ವಿಚಾರಣೆಗೊಳಪಟ್ಟ ಶೋವಿಕ್ ಚಕ್ರವರ್ತಿ ಮತ್ತು ರಿಯಾ ಚಕ್ರವರ್ತಿ ಶಾಂಕಿಂಗ್ ವಿಚಾರ ಬಾಯ್ಬಿಟ್ಟಿದ್ದಾರೆ. ವಿಚಾರಣೆ ಸಂದರ್ಭ ರಿಯಾ ಹಲವು ನಟ, ನಿರ್ಮಾಪಕರ, ನಿರ್ದೇಶಕರ ಹೆಸರು ಹೇಳಿದ್ದಾರೆ.

ಇಲ್ಲಿ ಸಂಜನಾ, ಅಲ್ಲಿ ರಿಯಾ, ಕೊನೆಗೂ NCBಯಿಂದ ಸುಶಾಂತ್ ಮಾಜಿ ಗೆಳತಿ ಅರೆಸ್ಟ್!

ಇತ್ತೀಚಿನ ಬಾಲಿವುಡ್ ಪಾರ್ಟಿಯ ಬಗ್ಗೆಯೂ ಮಾಹಿತಿ ನೀಡಿದ ನಟಿ ಹೇಗೆ ಡ್ರಗ್ಸ್ ಸ್ಮಗ್ಲಿಂಗ್ ಆಗ್ತಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮುಂದಿನ 10-15 ದಿನಗಳಲ್ಲಿ ಬಾಲಿವುಡ್‌ನ ಟಾಪ್ ಸ್ಟಾರ್‌ಗಳಿಗೆ ಒಬ್ಬೊಬ್ಬರನ್ನಾಗಿಯೇ ವಿಚಾರಣೆ ಮಾಡುವ ಸಾಧ್ಯತೆ ಇದೆ.

ಕೇದಾರ್‌ನಾಥ್ ಸಿನಿಮಾ ಸೆಟ್‌ನಲ್ಲಿ ಸುಶಾಂತ್ ಹೇಗೆ ಡ್ರಗ್ಸ್ ತಗೊಳ್ತಿದ್ದ ಎಂಬುದನ್ನು ರಿಯಾ ಹೇಳಿದ್ದಾರೆ. ರಿಯಾ ಪರಿಚಯದ ಮೊದಲೇ ಸುಶಾಂತ್ ಡ್ರಗ್ಸ್ ತಗೊಳ್ತಿದ್ದ ಎಂದು ಶೋವಿಕ್ ಚಕ್ರವರ್ತಿಯ ವಕೀಲ ಹೇಳಿದ್ದಾರೆ.