ಇಡಿ ವಿಚಾರಣೆಯನ್ನು ಮುಂದೂಡುವಂತೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಬೇಡಿಕೆಯನ್ನು ತಿರಸ್ಕರಿಸಿರುವ ಜಾರಿ ನಿರ್ದೇಶನಾಲಯ ದ ಮುಂದೆ ನಟಿ ವಿಚಾರಣೆಗೆ ಬಂದಿದ್ದಾರೆ.

ಸುಶಾಂತ್ ಸಾವಿನ ಪ್ರಕರಣದಲ್ಲಿ ತನ್ನ ವಿಚಾರಣೆಯನ್ನು ಮುಂದೂಡಬೇಕು ಎಂದು ನಟಿ ರಿಯಾ ಚಕ್ರವರ್ತಿ ಬೇಡಿಕೆ ಇಟ್ಟಿದ್ದರು.  ನಟಿಯ ಬೇಡಿಕೆ ತಿರಸ್ಕಿರಿಸಿದ ಇಡಿ ಮುಂದೆ ರಿಯಾ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದಾರೆ.

ನಟ ಸುಶಾಂತ್‌ ಸಿಂಗ್ ರಜಪೂತ್ ಸಾವು: ಈಗ ಇ.ಡಿ. ಎಂಟ್ರಿ, ಪ್ರೇಯಸಿಗೆ ಸಂಕಷ್ಟ

ಸುಶಾಂತ್ ಸಾವಿಗೆ ಸಂಬಂಧಿಸಿ ಬಿಹಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ಹಣದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿದೆ.

ಸುಶಾಂತ್ ತಂದೆ ಕೆಕೆ ಸಿಂಗ್ ದೂರು ನೀಡಿದ್ದು, ಮಗನ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬಸ್ಥರು ಹಣ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

ಕರುನಾಡಿನಲ್ಲಿ ನೆಲೆಸಲು ಬಯಸಿದ್ದ ನಟ ಸುಶಾಂತ್‌!

ರಿಯಾ ತನ್ನ ಕೆರಿಯರ್ ಉದ್ದೇಶಕ್ಕಾಗಿ ಸುಶಾಂತ್ ಜೊತೆ 2019ರಲ್ಲಿ ಸ್ನೇಹ ಬೆಳೆಸಿಕೊಂಡಿದ್ದಳು ಎಂದು ಸುಶಾಂತ್ ತಂದೆ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್‌ನ ಬ್ಯಾಂಕ್‌ ಖಾತೆ ಹಾಗೂ ಹಣವನ್ನು ದುರ್ಬಳಕೆ ಮಾಡಿರುವ ಆರೋಪದ ಸಂಬಂಧವಾಗಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಲಿದೆ. ಸುಶಾಂತ್ ಹಣವನ್ನು ಅಕ್ರಮವಾಗಿ ಬಳಸಿದ ಎಲ್ಲರ ವಿಚಾರಣೆಯೂ ನಡೆಯಲಿದೆ.