ದಕ್ಷಿಣ ಭಾರತದ ರೇಶ್ಮೆ ಸೀರೆಗಳು ಎಲ್ಲೆಡೆ ಫೇಮಸ್. ಬಾಲಿವುಡ್ ನಟಿಯರಂತೂ ಸೀರೆ ಉಡೋವಾಗ ಆಯ್ಕೆ ಮಾಡೋದು ಕಾಂಜೀವರಂ ಸಿಲ್ಕ್ ಸೀರೆ. ಶ್ರೀದೇವಿ, ರೇಖಾ, ವಿದ್ಯಾ ಬಾಲನ್ ಅವರಲ್ಲಿ ಈ ಸೀರೆಗಳ ಭಾರೀ ಕಲೆಕ್ಷನ್ ಇದೆ.

ದಕ್ಷಿಣ ಭಾರತದವರಾದ ಶ್ರೀದೇವಿ ಕೆಂಬಣ್ಣದ ರೇಶ್ಮೆ ಸೀರೆಯನ್ನು ಮೆಚ್ಚುತ್ತಿದ್ದರು. ಆಕೆ ಉಡುತ್ತಿದ್ದ ಎಲ್ಲಾ ಸೀರೆಗಳೂ ಕೆಂಬಣ್ಣದ ರೇಶ್ಮೆ ಸೀರೆಗಳು. ನಟಿಯ ಅಂತ್ಯ ಸಂಸ್ಕಾರದ ಸಂದರ್ಭವೂ ಕೊನೆಗೆ ಕೆಂಬಣ್ಣದ ಸೀರೆಯಲ್ಲಿ ನಟಿಯನ್ನು ಅಲಂಕರಿಸಿದ್ದು ವೈರಲ್ ಆಗಿತ್ತು.

ಸೀರೆ ಬದಲು ಪ್ರಿಂಟೆಡ್‌ ಡ್ರೆಸ್‌ನಲ್ಲಿನ ವಿದ್ಯಾ ಬಾಲನ್‌ ಸ್ಟನ್ನಿಂಗ್‌ ಲುಕ್‌ ವೈರಲ್‌!

ನಟಿ ರೇಖಾ ಅವರು ರೇಶ್ಮೆ ಸೀರೆ ಅಭಿಮಾನಿ. ಕೆಂಬಣ್ಣಕ್ಕಿಂತ ತಿಳಿ ಬಣ್ಣದ ರೇಶ್ಮೆ ಸೀರೆಯಲ್ಲಿ ನಟಿ ಕಾಣಿಸಿಕೊಂಡಿದ್ದು ಹೆಚ್ಚು. ಅಮಿತಾಭ್ ಜೊತೆಗಿನ ಪ್ರೀತಿ, ನೋವುಗಳನ್ನೇ ಕಂಡ ನಟಿ ಹೊರಗೆಂದೂ ತಮ್ಮ ನೋವು ತೋರಿಸಿಕೊಂಡಿಲ್ಲ.

ಒಂಟಿಯಾಗಿ ಸ್ಟ್ರಾಂಗ್ ಆಗಿಯೇ ಕಾಣಿಸಿಕೊಳ್ತಾರೆ ರೇಖಾ. ಇದೀಗ ನಟಿ ಬ್ಲಾಕ್ ವೆಸ್ಟರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಈ ಲುಕ್ ಎಲ್ಲೆಡೆ ವೈರಲ್ ಆಗುತ್ತಿದೆ. ರೇಖಾ ಅವರನ್ನು ಆಫ್‌ ಸ್ಕ್ರೀನ್‌ನಲ್ಲಿ ಈ ರೀತಿ ಕಾನೋದು ಭಾರೀ ಅಪರೂಪ.