ತಂಬಾಕು ಜಾಹೀರಾತಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಯಾಂಡಲ್ ವುಡ್ ಸ್ಟಾರ್ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡುವ ಮೂಲಕ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಕಲಾವಿದರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ತಪ್ಪು ಆದರೆ ತೆರಿಗೆ ಹಣಕ್ಕಾಗಿ ಅನುಮತಿ ನೀಡಿದ ಸರ್ಕಾರ ಮಾತ್ರ ಸರಿ ಎಂದು ವ್ಯಂಗ್ಯವಾಡಿದ್ದಾರೆ.
ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರವ ಸ್ಟಾರ್ ಕಲಾವಿದರ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇತ್ತೀಚಿಗೆ ಗುಟ್ಕ ಜಾಹೀರಾತಿನಲ್ಲಿ(Tobacco Advertising) ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar) ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಈ ಹಿಂದೆ ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಅಕ್ಷಯ್ ಕುಮಾರ್ ದಿಢೀರ್ ಆಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಕ್ಷಯ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದಂತೆ ಜಾಹೀರಾತಿನಿಂದ ಹಿಂದೆ ಸರಿಯುವುದಾಗಿ ಹೇಳಿ ಕ್ಷಮೆ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡಿದ್ದರು. ಅಂದಹಾಗೆ ಅಕ್ಷಯ್ ಕುಮಾರ್ ಕ್ಷಮೆ ಕೇಳಿ ತಂಬಾಕು ಜಾಹೀರಾತಿನಿಂದ ಹಿಂದೆ ಸರಿಯುವ ಮೊದಲು ತೆಲುಗು ಸ್ಟಾರ್ ಅಲ್ಲು ಅರ್ಜುನ್(Allu Arjun) ಗುಟ್ಕ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ, ಕೋಟಿ ಕೋಟಿ ಕೊಟ್ಟರು ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡುವುದಿಲ್ಲ ಎಂದು ಹೇಳಿ ಮಾದರಿಯಾಗಿದ್ದರು. ಅಲ್ಲು ಅರ್ಜುನ್ ನಿರ್ಧಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ತಂಬಾಕು ಜಾಹೀರಾತಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಯಾಂಡಲ್ ವುಡ್ ಸ್ಟಾರ್ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡುವ ಮೂಲಕ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಕಲಾವಿದರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ತಪ್ಪು ಆದರೆ ತೆರಿಗೆ ಹಣಕ್ಕಾಗಿ ಅನುಮತಿ ನೀಡಿದ ಸರ್ಕಾರ ಮಾತ್ರ ಸರಿ ಎಂದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು…ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ, ಶ್..ಯಾರೂ ಮಾತನಾಡಬಾರದು! ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ…ಯಾವತ್ತೂ ಅಪ್ಪ ಸರಿ…ಮಕ್ಕಳು ತಪ್ಪು' ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಉಪೇಂದ್ರ ಟ್ವೀಟ್ ಗೆ ಕಾಮೆಂಟ್ ಮಾಡಿರುವ ಅಭಿಮಾನಿಯೊಬ್ಬ 'ಸರ್ಕಾರ ಕೆ ಬರುವ ತೆರಿಗೆ ಜನಸಾಮಾನ್ಯರಿಗೆ ಉಪಯೋಗ ಆಗುತ್ತೆ. ಜೂಜಿಗೆ ಜಾಹೀರಾತು ನೀಡಿದರೆ ನಟನಿಗೆ ದುಡ್ಡು ಬರುತ್ತೆ ಜನ ಸಾಮಾನ್ಯರಿಗೆ ಅಲ್ಲ ಸರ್ಕಾರ ಅನುಮತಿ ಕೊಟ್ಟ ಮಾತ್ರಕ್ಕೆ ಮನೆ ಹಾಳು ಮಾಡುವ ಜಾಹೀರಾತಿನಲ್ಲಿ ನಟಿಸುವ ನಟರಿಗೆ ಬುದ್ದಿ ಇಲ್ವಾ ಅಂತವರು ಪುನೀತ್ ಹಾಗೂ ದರ್ಶನ್ ರಿಂದ ನೋಡಿ ಕಲಿಯುವುದು ಬಹಳ ಇದೆ' ಎಂದು ಹೇಳಿದ್ದಾರೆ. ಇನ್ನು ಕೆಲವರು ಉಪೇಂದ್ರ ಹೇಳಿದ್ದು ಸರಿ ಎಂದು ಹೇಳುತ್ತಿದ್ದಾರೆ.
ಅಕ್ಷಯ್ ಕುಮಾರ್ ಪ್ರತಿಕ್ರಿಯೆ
ನನ್ನನ್ನು ಕ್ಷಮಿಸಿ..ಎಲ್ಲಾ ಅಭಿಮಾನಿಗಳು ಮತ್ತು ಹಿತೈಶಿಗಳಲ್ಲಿ ಕ್ಷಮೆ ಕೇಳುತ್ತಿದ್ದೀನಿ. 'ಕಳೆದ ಕೆಲವು ದಿನಗಳಿಂದ ನೀವು ನೀಡಿದ ಪ್ರತಿಕ್ರಿಯೆಗಳು ನನ್ನಲ್ಲಿ ಆಳವಾದ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ವಿಮಲ್ ಜೊತೆ ನಾನು ಕೈ ಜೋಡಿಸಿರುವುದರ ಕಿರುತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ ಮಾನವೀಯಚೆ ಕಾರಣದಿಂದ ನಾನು ಈ ಜಾಹೀರಾತಿನಿಂದ ಹಿಂದೆ ಸರಿಯುತ್ತೇನೆ ಉತ್ತಮ ಉದ್ದೇಶಕ್ಕೆ ಸಂಭಾವನೆಯನ್ನು ನೀಡಲು ನಿರ್ಧರಿಸಿದ್ದೇನೆ' ಎಂದು ದೀರ್ಘವಾಗಿ ಬರೆದು ಕ್ಷಮೆ ಕೇಳಿ ಹಿಂದೆ ಸರಿದಿದ್ದಾರೆ.
